Just In
- 53 min ago
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- 1 hr ago
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- 3 hrs ago
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- 4 hrs ago
ಕೈಗೆಟಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್!... ಫೆ. 9 ರಂದು ಓಲಾದಿಂದ ಮಹತ್ವದ ಘೋಷಣೆ
Don't Miss!
- Movies
ರಾಮಮಂದಿರ ನಮಗೆ ಬೇಕಿಲ್ಲ ಎಂದ ನಟ ಚೇತನ್, ಇಟ್ಟರು ಬೇರೆಯದ್ದೇ ಬೇಡಿಕೆ
- News
Aero India 2023: 'ಇಂಡಿಯಾ ಪೆವಿಲಿಯನ್' ಮಧ್ಯದಲ್ಲಿ ಭಾರತದ ಈ ಪ್ರತಿಷ್ಠಿತ ವಿಮಾನ ಪ್ರದರ್ಶನ- ವಿನ್ಯಾಸ, ತೂಕ, ಮಾಹಿತಿ
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಕ್ಟೋಬರ್ ತಿಂಗಳಿನಲ್ಲಿ 13 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022ರ ಅಕ್ಟೋಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಟೊಯೊಟಾ ಕಂಪನಿಯು ಒಟ್ಟು 13,143 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12440 ಯುನಿಟ್‌ಗಳನ್ನು ಮಾರಾಟ ಮಾಡಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡಾ 6 ರಷ್ಟು ಬೆಳವಣಿಗೆಯನ್ನು ಕಂಡಿದೆ.ಈ ಸಂಖ್ಯೆಯನ್ನು ಕಂಪನಿಯು ಈ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 14 ಕ್ಕಿಂತ ಕಡಿಮೆಯಾಗಿದೆ ಎಂದು ನೀವು ಗಮನಿಸಬಹುದು. ಆದರೆ ವರ್ಷದಿಂದ ವರ್ಷದ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್ 2022 ರವರೆಗಿನ ಸಂಚಿತ ಸಗಟುಗಳು, ಕಂಪನಿಯು ವರ್ಷದಿಂದ ವರ್ಷಕ್ಕೆ 56 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದರ ಮೂಲಕ ಟೊಯೊಟಾ ಮಾರಾಟದ ಸಂಖ್ಯೆಯಲ್ಲಿ ಭರವಸೆಯನ್ನು ತೋರುತ್ತಿದೆ.

ತಿಂಗಳ ಮಾರಾಟದ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ದೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್, ಸೋಸಿಯೇಟ್ ಉಪಾಧ್ಯಕ್ಷ, ಅತುಲ್ ಸೂದ್ ಮಾತನಾಡಿ, ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಮಾಡೆಲ್ ಆದ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ನಾವು ಬಲವಾದ ಬುಕಿಂಗ್‌ಗೆ ಸಾಕ್ಷಿಯಾಗಿರುವುದರಿಂದ ಬೇಡಿಕೆಯು ಬೆಳೆಯುತ್ತಲೇ ಇದೆ.

ಟೊಯೊಟಾದ ಹೊಚ್ಚಹೊಸ ಎಸ್‍ಯುವಿ ನಮ್ಮ ನಿರೀಕ್ಷೆಗಳನ್ನು ಮೀರಿದ ಬುಕಿಂಗ್ ಆರ್ಡರ್‌ಗಳೊಂದಿಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು. ಈ ಹೊಸ ಎಸ್‍ಯುವಿಯು ಕಾರು ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡೆಯನ್ನು ನೀಡಬಹುದು.

ಟೊಯೊಟಾ ಕಂಪನಿಯು ಟೊಯೊಟಾ ಇನೋವಾ ಕ್ರಿಸ್ಟಾ, ಪೋರ್ಚನರ್, ಕ್ಯಾಮ್ರಿ ಮತ್ತು ವೆಲ್ ಫೈರ್ ಅಂತಹ ಮಾದರಿಗಳಿಗೆ ಬೇಡಿಕೆಯನ್ನು ಪಡೆಯುತ್ತಲೇ ಇದೆ. ಹೊಸ ಗ್ಲಾಂಝಾ ಕೂಡ ಕಂಪನಿಯ ಪ್ರಕಾರ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ.

ಇನ್ನು ಟೊಯೊಟಾ ಮತ್ತು ಮಾರುತಿ ಸುಜುಕಿ ನಡುವಿನ ಸಹಯೋಗವು ಎರಡೂ ಕಂಪನಿಗಳಿಗೆ ಫಲಪ್ರದವಾಗಿದೆ. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಬಿಡುಗಡೆ ಮಾಡಿತು, ಇದು ಹೊಸ ವಿಭಾಗಕ್ಕೆ ಬ್ರ್ಯಾಂಡ್ನ ಪ್ರವೇಶವಾಗಿತ್ತು. 2023ರಲ್ಲಿ, ಟೊಯೊಟಾ ಹೆಚ್ಚಿನ ಹೊಸ ವಿಭಾಗಗಳನ್ನು ಪ್ರವೇಶಿಸಲು ಯೋಜಿಸಿದ್ದಾರೆ.

ಟೊಯೊಟಾದ ಇನೋವಾ ಮತ್ತು ಫಾರ್ಚುನರ್ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಜಪಾನಿನ ಬ್ರ್ಯಾಂಡ್ ಟೊಯೊಟಾ ಭಾರತದಲ್ಲಿ ಹೊಸ ಹೆಸರನ್ನು ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಟೈಸರ್ ಎಂಬ ಹೆಸರಿನ ಟ್ರೇಡ್‌ಮಾರ್ಕ್ ಆಗಿದೆ.

ಈ ಟ್ರೇಡ್‌ಮಾರ್ಕ್ ಅಪ್ಲಿಕೇಶನ್‌ನ ಮಾಲೀಕರು ಟೊಯೊಟಾ ಜಿಡೋಶಾ ಕಬುಶಿಕಿ ಕೈಶಾ (ಟೊಯೋಟಾ ಮೋಟಾರ್ ಕಾರ್ಪೊರೇಷನ್). ಈ ಹೆಸರು ಬಹಳಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಟೈಸರ್ ಎಂಬ ಹೆಸರು ಎಂಪಿವಿ, ಎಸ್‍ಯುವಿ, ಕ್ರಾಸ್ಒವರ್ ಅಥವಾ ಯಾವ ಮಾದರಿಗಳಿಗಾಗಿ ಎಂಬ ಮಾಹಿತಿಯು ಬಹಿರಂಗವಾಗಿಲ್ಲ.

ಮಾರುತಿ ಸುಜುಕಿಯು ಈಗಾಗಲೇ ಎರ್ಟಿಗಾ ಮತ್ತು ಅದರ ಹೆಚ್ಚು ಪ್ರೀಮಿಯಂ ಒಡಹುಟ್ಟಿದ XL6 ಕಾರು ಮಾರಾಟದಲ್ಲಿದೆ. ಆದರೆ ಟೊಯೊಟಾವು ಹೆಚ್ಚು ಮಾರಾಟವಾದ ಇನ್ನೋವಾ ಕ್ರಿಸ್ಟಾಗಿಂತ ಕಡಿಮೆ ಬೆಲೆಯ ಎಂಪಿವಿಯನ್ನು ಹೊಂದಿಲ್ಲ. ಮೂರನೇ ತಲೆಮಾರಿನ ಇನೋವಾ HyCross/Zenix ಮುಂದಿನ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದಲ್ಲಿ ಜಾಗತಿಕವಾಗಿ ಪಾದಾರ್ಪಣೆಯಾಗಲಿದೆ,

ಈ ಹೊಚ್ಚ ಹೊಸ ವಿನ್ಯಾಸ, ಇಂಟೀರಿಯರ್, ಮೊನೊಕಾಕ್ ಚಾಸಿಸ್ ಮತ್ತು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ 2023ರ ಆರಂಭದಲ್ಲಿ ಭಾರತದಲ್ಲಿಯೂ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎರಡೂ ಬ್ರ್ಯಾಂಡ್‌ಗಳು ಮಿಡ್ ಸೈಜ್ ವಿಭಾಗದಲ್ಲಿ ತಮ್ಮ ಅಸ್ತಿತ್ವವನ್ನು ಬಲಪಡಿಸಲು ನೋಡುತ್ತಿರುವಾಗ, ಈ ವಿಭಾಗದಲ್ಲೇ ಹೆಚ್ಚಿನ ಮಾದರಿಗಳು ಬಿಡುಗಡೆಯಾಗುವ ಸಾಧ್ಯತೆಗಳಿದೆ.

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಜಾಗತಿಕವಾಗಿ ಹಲವಾರು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಟೊಯೊಟಾ ಕಂಪನಿಯ ಹೊಸ ಇನೋವಾ ಹೈಕ್ರಾಸ್ ಕ ತಿಂಗಳಿನಲ್ಲಿ ವಿಶ್ವ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ.

ಈ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಟೊಯೊಟಾ ಇನೋವಾ ಹೈಕ್ರಾಸ್ ಕಾರು ನವೆಂಬರ್ 25 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಭಾರತಕ್ಕಿಂತ ಮೊದಲು, ಈ ಎಂಪಿವಿ ನವೆಂಬರ್ 21 ರಂದು ಇಂಡೋನೇಷ್ಯಾದಲ್ಲಿ ಪಾದಾರ್ಪಣೆ ಮಾಡಲಿದೆ.

ನವೆಂಬರ್‌ನಲ್ಲಿ ಭಾರತದ ಚೊಚ್ಚಲ ಪ್ರದರ್ಶನವನ್ನು ನಿಗದಿಪಡಿಸಲಾಗಿದ್ದರೂ, ಹೊಸ ಇನೋವಾ ಬೆಲೆಗಳು 2023ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಗೊಳ್ಳಲಿವೆ. ಪ್ರಸ್ತುತ ತಲೆಮಾರಿನ ಇನೋವಾ ಕ್ರಿಸ್ಟಾಗೆ ಹೋಲಿಸಿದರೆ, ಹೊಸ ಇನೋವಾ ಹೈಕ್ರಾಸ್ ವಿನ್ಯಾಸ ಮತ್ತು ಎಂಜಿನ್ ಕಾರ್ಯವಿಧಾನದ ವಿಷಯದಲ್ಲಿ ವಿಭಿನ್ನವಾಗಿರುತ್ತದೆ. ವಾಸ್ತವವಾಗಿ, ಇದು ಲ್ಯಾಡರ್ ಫ್ರೇಮ್ ಚಾಸಿಸ್ ಬದಲಿಗೆ ಮೊನೊಕಾಕ್ ಪ್ಲಾಟ್‌ಫಾರ್ಮ್ ಅನ್ನು ಆಧಾರವಾಗಿರಿಸುತ್ತದೆ.