Just In
- 34 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 37 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 2 hrs ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Sports
ಧವನ್ ಹಾಗೂ ತೆಂಡೂಲ್ಕರ್ ನಡುವಿನ ಸಾಮ್ಯತೆ ವಿವರಿಸಿದ ಅಜಯ್ ಜಡೇಜಾ
- Movies
ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
- News
ಕದ್ದ ಹಣದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಹೈಟೆಕ್ ಕಳ್ಳಿ
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಜುಲೈ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022ರ ಜುಲೈ ತಿಂಗಳ ಮಾಸಿಕ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು ಒಟ್ಟು 19,693 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 13,105 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.50 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದು 6,588 ಯುನಿಟ್ ಪರಿಮಾಣದ ಬೆಳವಣಿಗೆಯಾಗಿದೆ. ಮತ್ತೊಂದೆಡೆ ಮಾರಾಟವು ಜೂನ್ 2022 ರಲ್ಲಿ ಮಾರಾಟವಾದ 16,500 ಯುನಿಟ್‌ಗಳನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.19.35 ರಷ್ಟು ಸುಧಾರಿಸಿದೆ, ಟೊಯೊಟಾ ಮಾರಾಟದ ಬಹುಪಾಲು ಇನೋವಾ ಕ್ರಿಸ್ಟಾ, ಫಾರ್ಚುನರ್, ಅರ್ಬನ್ ಕ್ರೂಸರ್ ಮತ್ತು ಗ್ಲಾಂಝ ಮಾದರಿಗಳ ಕೊಡುಗೆ ಇದೆ.

ಅವರ ಪ್ರೀಮಿಯಂ ವಾಹನಗಳಾದ ಕ್ಯಾಮ್ರಿ ಮತ್ತು ವೆಲ್‌ಫೈರ್ ಕೂಡ ಉತ್ತಮ ಮಾರಾಟವನ್ನು ದಾಖಲಿಸಿವೆ. ಮುಂಬರುವ ಟೊಯೊಟಾ ಹೈರೈಡರ್ ಎಸ್‌ಯುವಿ ಮೊದಲ ಬ್ಯಾಚ್ ಕಂಪನಿಯ ಶೋರೂಮ್‌ಗಳಿಗೆ ಪ್ರವೇಶಿಸಲು ಪ್ರಾರಂಭಿಸಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಸೇಲ್ಸ್ ಮತ್ತು ಸ್ಟ್ರಾಟೆಜಿಕ್ ಮಾರ್ಕೆಟಿಂಗ್ ಅಸೋಸಿಯೇಟ್ ಉಪಾಧ್ಯಕ್ಷ, ಅತುಲ್ ಸೂದ್ ಅವರು ಮಾತನಾಡಿ, ಕಂಪನಿಗೆ ಜುಲೈ ತಿಂಗಳು ಅದ್ಭುತವಾಗಿದೆ. ಮಾರಾಟದ ವಿಷಯದಲ್ಲಿ ಮತ್ತು ಭಾರತದಲ್ಲಿ "ಸಾಮೂಹಿಕ ಎಲೆಕ್ಟ್ರಿಫಿಕೇಷನ್" ದತ್ತ ನಮ್ಮ ಪ್ರಯತ್ನ ಎರಡರಲ್ಲೂ, ನಾವು ಮೊದಲ ಸ್ವಯಂ ಚಾರ್ಜಿಂಗ್ ಪ್ರಬಲ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವನ್ನು ಹೆಚ್ಚಿನ ಪ್ರಮಾಣದ ವಿ ಎಸ್‍ಯುವಿ ವಿಭಾಗದಲ್ಲಿ ಅನಾವರಣಗೊಳಿಸಿದ್ದೇವೆ ಎಂದು ಹೇಳಿದರು.

ಇನ್ನು ಟೊಯೊಟಾ ಕ್ಯಾಲೆಂಡರ್ ವರ್ಷದ ಕಾರ್ಯನಿರತ ದ್ವಿತೀಯಾರ್ಧದಲ್ಲಿ ಬಹು ಮಾದರಿಗಳ ಬಿಡುಗಡೆಗೆ ಸಜ್ಜಾಗುತ್ತಿದೆ. ಕಂಪನಿಯು ಈ ವರ್ಷದ ಜುಲೈ-ಆಗಸ್ಟ್ ವೇಳೆಗೆ ಹೊಸ-ಜನರೇಷನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾವನ್ನು ಆಧರಿಸಿ ಹೊಸ ತಲೆಮಾರಿನ ಅರ್ಬನ್ ಕ್ರೂಸರ್ ಅನ್ನು ಬಿಡುಗಡೆಗೊಳಿಸಲಿದೆ.

ಇದರ ನಂತರ ಹೊಸ ತಲೆಮಾರಿನ ಇನ್ನೋವಾವನ್ನು ಬಿಡುಗಡೆ ಮಾಡಲಾಗುವುದು, ಇದು ಇನ್ನೋವಾ ಕ್ರಿಸ್ಟಾ ಜೊತೆಗೆ ಮಾರಾಟವಾಗುವ ಸಾಧ್ಯತೆಯಿರುವ 'ಇನೋವಾ ಹೈಕ್ರಾಸ್' ಎಂದು ಬ್ಯಾಡ್ಜ್ ಮಾಡಲಾಗುವುದು. ಇದರ ಮೂಲಕ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ.

ಟೊಯೊಟಾ ಭಾರತದಲ್ಲಿ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು. ಆದರೆ ಈ ಎಸ್‍ಯುವಿಯು ಬೇಡಿಕೆಯ ಕಾರಣ ಅದನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಿತು. ವರದಿಗಳ ಪ್ರಕಾರ, ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300ನ ಮೊದಲ ಬ್ಯಾಚ್ ಈಗಾಗಲೇ ಮಾರಾಟವಾಗಿದೆ.

ಇನ್ನು ಟೊಯೊಟಾ ಕಳೆದ ತಿಂಗಳ ಆರಂಭದಲ್ಲಿ ತನ್ನ ಮೊದಲ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿತು. ಇದು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿಯಾಗಿದೆ. ಇದೀಗ ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಎಸ್‍ಯುವಿಯು ಆಗಸ್ಟ್ 16 ರಂದು ಬಿಡುಗಡೆಯಾಗಲಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯನ್ನು ಟೊಯೊಟಾ ಕಂಪನಿಯು ಮಾರುತಿಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಭಾರತದಾದ್ಯಂತ ಟೊಯೊಟಾ ಡೀಲರ್‌ಶಿಪ್‌ಗಳಲ್ಲಿ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ಪ್ರಿ-ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಕರ್ನಾಟಕದ ಬಿಡದಿ ಸ್ಥಾವರದಲ್ಲಿ ಟೊಯೊಟಾ ಈ ಎಸ್‌ಯುವಿಯನ್ನು ತಯಾರಿಸಲಿದೆ. ಟೊಯೊಟಾ ಮುಂದಿನ ತಿಂಗಳು ಎಸ್‌ಯುವಿ ಬೆಲೆಗಳನ್ನು ಬಿಡುಗಡೆ ವೇಳೆ ಪ್ರಕಟಿಸಲಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಅದರ ವಿತರಣೆಗಳು ಪ್ರಾರಂಭವಾಗಲಿವೆ.

ಟೊಯೊಟಾ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಗಾಗಿ ಅಧಿಕೃತ ಟಿವಿಸಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ವಿಡಿಯೋವನ್ನು ಟೊಯೊಟಾ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಹೈರೈಡರ್ ಅನ್ನು ಹೈಬ್ರಿಡ್ ಜೀವನಶೈಲಿಯನ್ನು ಹೊಂದಿರುವ ವ್ಯಕ್ತಿಗೆ ಹೋಲಿಸಲಾಗಿದೆ. ಹೈರೈಡರ್ ಎಸ್‍ಯುವಿಯು ನಿಯಮಿತ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಅದೇ ಸಮಯದಲ್ಲಿ ಇದು ಪ್ರಬಲವಾದ ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿದ್ದು ಅದು ಚಾಲಕನಿಗೆ ಇವಿ ತರಹದ ಅನುಭವವನ್ನು ನೀಡುತ್ತದೆ.

ಇವಿ ನಂತಹ ಬ್ಯಾಟರಿಗಳನ್ನು ಮಾಲೀಕರು ರೀಚಾರ್ಜ್ ಮಾಡಬೇಕಾಗಿಲ್ಲ. ಪೆಟ್ರೋಲ್ ಮೋಡ್‌ನಲ್ಲಿ ಕಾರು ಚಾಲನೆ ಮಾಡುವಾಗ ಅವು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತವೆ. ಈ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹೊರ ವಿನ್ಯಾಸವು ಈ ವಿಭಾಗದಲ್ಲಿನ ಇತರ ಎಸ್‌ಯುವಿಗಳಿಗಿಂತ ಭಿನ್ನವಾಗಿದೆ. ವಿದೇಶದಲ್ಲಿ ಮಾರಾಟವಾಗುವ ಟೊಯೊಟಾ ಎಸ್‌ಯುವಿಗಳನ್ನು ನಿಮಗೆ ನೆನಪಿಸುವ ಕೆಲವು ವಿನ್ಯಾಸ ಅಂಶಗಳನ್ನು ಇದು ಪಡೆಯುತ್ತದೆ. ಇದು ಟ್ವಿನ್ ಎಲ್ಇಡಿ ಡಿಆರ್ಎಲ್ ಗಳು, ಪ್ರೊಜೆಕ್ಟರ್ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳು, ಮಸ್ಕ್ಯುಲರ್ ಬಂಪರ್, ವಿಶಿಷ್ಟವಾದ ಕ್ರಿಸ್ಟಲ್ ಅಕ್ರಿಲಿಕ್ ಫ್ರಂಟ್ ಗ್ರಿಲ್ ಜೊತೆಗೆ ಕ್ರೋಮ್ ಅಲಂಕಾರದೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಟೊಯೊಟಾ ಕಾರುಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಹೊಸ ಟೊಯೊಟಾ ಕಾರುಗಳು ಬಿಡುಗಡೆಗೊಂಡ ಬಳಿಕ ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಹೊಸ ಟೊಯೊಟಾ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.