ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ ಮಾಹಿತಿ ಹಂಚಿಕೊಂಡ ಟೊಯೊಟಾ

ಟೊಯೊಟಾ ಕಂಪನಿಯು ಹೊಸ ಹೈರೈಡರ್ ಹೈಬ್ರಿಡ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಬಿಡುಗಡೆ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೈರೈಡರ್ ಮಾದರಿಯು ಸ್ಮಾರ್ಟ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಸದ್ಯ ಕಂಪನಿಯು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳ ಬೆಲೆ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಅರ್ಬನ್ ಕ್ರೂಸರ್ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.99 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಡ್ಯುಯಲ್ ಟೋನ್ ವೆರಿಯೆಂಟ್‌ಗಳು ತುಸು ದುಬಾರಿಯಾಗಿರಲಿವೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹೊಸ ಕಾರು ಇ, ಎಸ್, ಜಿ, ವಿ ವೆರಿಯೆಂಟ್‌ಗಳನ್ನು ಹೊಂದಿದ್ದು, ಮೈಲ್ಡ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಟು ವ್ಹೀಲ್ ಡ್ರೈವ್ ನಿಯೋ ಡ್ರೈವ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಇಡ್ರೈವ್ ಟು ವ್ಹೀಲ್ ಡ್ರೈವ್ ಹೈಬ್ರಿಡ್ ಎಂದು ಕರೆಯಲಾಗುತ್ತದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹೈರೈಡರ್ ಮಾದರಿಯನ್ನು ಕಂಪನಿಯು ಕೆಫೆ ವೈಟ್, ಎನ್‌ರೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿಂಗ್ ರೆಡ್, ಮಿಡ್‌ನೈಟ್ ಬ್ಲಾಕ್, ಕೇವ್ ಬ್ಲ್ಯಾಕ್, ಸ್ಪೋರ್ಟಿಂಗ್ ಬ್ಲೂ, ಸ್ಪೋರ್ಟಿಂಗ್ ರೆಡ್ ಜೊತೆ ಮಿಡ್‌ನೈಟ್ ಬ್ಲ್ಯಾಕ್, ಎಂಟೈಸಿಂಗ್ ಸಿಲ್ವರ್ ಜೊತೆ ಮಿಡ್‌ನೈಟ್ ಬ್ಲ್ಯಾಕ್, ಸ್ಪೀಡಿ ಬ್ಲೂ ಜೊತೆ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಕೆಫೆ ಸೇರಿದಂತೆ ಹನ್ನೊಂದು ಬಣ್ಣಗಳ ಆಯ್ಕೆ ನೀಡಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಇದರಲ್ಲಿ ಡ್ಯುಯಲ್ ಟೋನ್ ಹೊಂದಿರುವ ವೆರಿಯೆಂಟ್‌ಗಳ ಬೆಲೆಯು ಸಿಂಗಲ್ ಬಣ್ಣದ ಆಯ್ಕೆ ಹೊಂದಿರುವ ಮಾದರಿಗಿಂತ ರೂ. 20 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಇದರ ಹೊರತಾಗಿಯೂ ಕಂಪನಿಯು ಟಾಪ್ ಎಂಡ್ ಮತ್ತು ಸ್ಮಾರ್ಟ್ ಹೈಬ್ರಿಡ್ ಮಾದರಿಗಳ ಬೆಲೆ ಮಾಹಿತಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹೊಸ ಹೈರೈಡರ್ ಕಾರು ಮಾದರಿಯು ವಿವಿಧ ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಗಳಲ್ಲಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ನೀಡಿದ್ದರೆ ಹೈ ಎಂಡ್ ಮಾದರಿಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆ ನೀಡಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹೈರೈಡರ್ನಲ್ಲಿ 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಬಲಶಾಲಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಹಾಗೆಯೇ ಸ್ಮಾರ್ಟ್ ಹೈಬ್ರಿಡ್ ಮಾದರಿಯು ಕೂಡಾ 1.5 ಲೀಟರ್ ಕೆ15ಸಿ ಎಂಜಿನ್‌ನೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮ ಇಂಧನ ದಕ್ಷತೆಯೊಂದಿಗೆ ಗಮನಸೆಳೆಯಲಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೈರೈಡರ್ ವೆರಿಯೆಂಟ್‌ಗಳಲ್ಲಿ ಟೊಯೊಟಾ ಕಂಪನಿಯು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಟೊಯೊಟಾ ಕಂಪನಿಯು ನಿಯೋ ಡ್ರೈವ್ ಎಂಜಿನ್ ಮಾದರಿಗಳಲ್ಲಿ ಮಾರುತಿ ಸುಜುಕಿಯ 1.5-ಲೀಟರ್ ಕೆ15ಸಿ ಸ್ಮಾರ್ಟ್-ಹೈಬ್ರಿಡ್ ಜೊತೆಗೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಒದಗಿಸಲಿದ್ದು, ಇದು ಹೊಸ ಬ್ರೆಝಾ, ಎಕ್ಸ್‌ಎಲ್6 ಮತ್ತು ಹೊಸ ಎರ್ಟಿಗಾ ಮಾದರಿಗಳಲ್ಲಿ ಕಂಡುಬರುತ್ತದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಸ್ಮಾರ್ಟ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಎಂಜಿನ್ ಮಾದರಿಯು 103 ಬಿಎಚ್‌ಪಿ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್ ಅನ್ನು ಕಂಪನಿಯು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಮಾರಾಟ ಮಾಡಲಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಸದ್ಯ ಬೆಲೆ ಘೋಷಣೆ ಮಾಡಲಾಗಿರುವ ಮಾದರಿಗಳು ಟು ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಲ್ ವ್ಹೀಲ್ ಡ್ರೈವ್ ಮಾದರಿಯು ಸದ್ಯ ಘೋಷಣೆ ಮಾಡಲಾಗಿರುವ ಬೆಲೆಗಳಿಂತಲೂ ತುಸು ದುಬಾರಿಯಾಗಿರಲಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹೊಸ ಮಾದರಿಯಲ್ಲಿ ಕಂಪನಿಯು ಹಲಾವರು ಹೊಸ ವೈಶಿಷ್ಟ್ಯತೆಗಳೊಂದಿಗೆ ಐಷಾರಾಮಿ ಕಾರು ಚಾಲನಾ ಅನುಭವ ನೀಡಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಮುಂಭಾಗದಲ್ಲಿ ಟು ಲೆಯರ್ ಹೊಂದಿರುವ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಎರಡು ಲೇಯರ್‌ಗಳಾಗಿ ವಿಭಜಿಸಿ ಗ್ರಿಲ್‌ನ ಒಂದು ಮೂಲೆಯಿಂದ ಇನ್ನೊಂದಕ್ಕೆ ವಿಸ್ತರಿಸಿರುವ ಕ್ರೋಮ್ ಸ್ಟ್ರಿಪ್ ಅನ್ನು ಬಳಸಲಾಗಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿರುವ ಎತ್ತರದ ಏರ್‌ಡ್ಯಾಮ್‌ನೊಂದಿಗೆ ಸ್ಪೋರ್ಟಿ ಮುಂಭಾಗದ ಬಂಪರ್‌ಗಳನ್ನು ಸಹ ಒಳಗೊಂಡಿದ್ದು, ಎರಡು ಬದಿಯಲ್ಲಿ ಹೈರೈಡರ್‌ನ ಪ್ರಬಲ ಹೈಬ್ರಿಡ್ ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿವೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಹಿಂಭಾಗದಲ್ಲಿ ಟೊಯೊಟಾ ಹೈರೈಡರ್ ಎಸ್‌ಯುವಿ ಸ್ಲಿಮ್ ಸಿ-ಆಕಾರದ ಟೈಲ್-ಲೈಟ್‌ಗಳನ್ನು ಹೊಂದಿದ್ದು, ಡ್ಯುಯಲ್ ಸಿ-ಆಕಾರದ ಪಾರ್ಕಿಂಗ್ ಲ್ಯಾಂಪ್‌ಗಳೊಂದಿಗೆ ಟೈಲ್‌ಗೇಟ್‌ಗೆ ವಿಸ್ತರಿಸುತ್ತದೆ. ಹಾಗೆಯ ಒಂದು ಪ್ರಮುಖ ಕ್ರೋಮ್ ಸ್ಟ್ರಿಪ್ ಮಧ್ಯದಿಂದ ಆರಂಭಗೊಂಡು ಟೈಲ್ ಲ್ಯಾಂಪ್‌ಗಳಲ್ಲಿ ವಿಲೀನಗೊಳ್ಳಲಿದ್ದು, ಇದರಲ್ಲಿ ಟೊಯೊಟಾ ಲೋಗೋವನ್ನು ಜೋಡಿಸಲಾಗಿದೆ.

ಹೈರೈಡರ್ ಹೈಬ್ರಿಡ್ ಎಸ್‌ಯುವಿಯ ಡ್ಯುಯಲ್ ಟೋನ್ ರೂಪಾಂತರಗಳ ಬೆಲೆ

ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲೂ ಗಮನಸೆಳೆಯಲಿರುವ ಅರ್ಬನ್ ಕ್ರೂಸರ್ ಹೈರೈಡರ್ ಕಾರು 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಹಾಗೆಯೇ ಹೊಸ ಕಾರು ಖರೀದಿ ಮೇಲೆ ಟೊಯೊಟಾ 3 ವರ್ಷ ಅಥವಾ1,00,000 ಕಿ.ಮೀ ವಾರಂಟಿಯನ್ನು ನೀಡಲಿದ್ದು, ಇದನ್ನು 5 ವರ್ಷ ಅಥವಾ 2,20,000 ಕಿ.ಮೀವರೆಗೆ ವಿಸ್ತರಿಸಬಹುದಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota revealed urban cruiser hyryder dual tone variants prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X