Just In
- 1 hr ago
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- 1 hr ago
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- 2 hrs ago
ನೀವು ಖರೀದಿಸಬಹುದಾದ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಆಟೋಮ್ಯಾಟಿಕ್ ಹ್ಯಾಚ್‌ಬ್ಯಾಕ್ ಕಾರುಗಳಿವು...
- 3 hrs ago
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
Don't Miss!
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- News
ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನದ ಹಿಂದೆ ಒಂದೇ ಕಾರಣ?
- Sports
ನತದೃಷ್ಟ ಪಂತ್: ಈತ ಶತಕ ಬಾರಿಸಿದರೆ ಭಾರತಕ್ಕೆ ಸೋಲು ಖಚಿತ ಎನ್ನುತ್ತಿವೆ ಅಂಕಿಅಂಶಗಳು!
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Technology
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಬಹುನಿರೀಕ್ಷಿತ ಹೊಸ ಟೊಯೊಟಾ ಗ್ಲಾಂಝಾ ಕಾರು ಮೈಲೇಜ್ ಮಾಹಿತಿ ಬಹಿರಂಗ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಬಹುನಿರೀಕ್ಷಿತ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಇದೇ ತಿಂಗಳ 15 ರಂದು ಬಿಡುಗಡೆಯಾಗಲಿದೆ.

ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿರುವುದರಿಂದ, ಜಪಾನಿನ ತಯಾರಕರು ನವೀಕರಿಸಿದ ಮಾರುತಿ ಸುಜುಕಿ ಬಲೆನೊವನ್ನು ಆಧರಿಸಿ ಹೊಸ ಗ್ಲಾಂಜಾವನ್ನು ಬಿಡುಗಡೆ ಮಾಡುತ್ತಾರೆ. ಟೊಯೊಟಾ ಕಂಪನಿಯು ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಖರೀದಿಗಾಗಿ ಆನ್‌ಲೈನ್ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ರೂ.11,000 ಟೋಕನ್ ಮೊತ್ತವನ್ನು ಪಾವತಿಸಿ ಹೊಸ ಮಾದರಿಯನ್ನು ಬುಕ್ ಮಾಡಬಹುದು.

ಹೊಸ ಟೊಯೊಟಾ ಗ್ಲಾಂಝಾ ಕಾರು 1.2-ಲೀಟರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಸ್ ಅನ್ನು ಜೋಡಿಸಲಾಗುತ್ತದೆ. ಈ ಹೊಸ ಗ್ಲಾಂಝಾ ARAI ಪ್ರಮಾಣೀಕೃತವಾಗಿ 22.9 ಕಿ.ಮೀಮೈಲೇಜ್ ನೀಡುತ್ತದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ.

ಜಪಾನಿನ ವಾಹನ ತಯಾರಕರು ಬಿಡುಗಡೆಯ ಮೊದಲು ಪ್ರೀಮಿಯಂ ಹ್ಯಾಚ್‌ನ ಹಲವು ಟೀಸರ್ ಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎಂದು ನಾವು ನೋಡಬಹುದು ಅದು ಬಲೆನೊದಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.

ಟೊಯೊಟಾ ಗ್ಲಾಂಝಾ ಕಾರು ಅಲಾಯ್ ವ್ಹೀಲ್ ವಿನ್ಯಾಸವನ್ನು ಸಹ ತೋರಿಸುತ್ತದೆ, ಇದು ಬಲೆನೊಗಿಂತ ಸ್ವಲ್ಪ ಭಿನ್ನವಾಗಿದೆ. ಇವು ಡೈಮಂಡ್ ಕಟ್ ಯುನಿಟ್ ಗಳಾಗಿದೆ. ಹೆಚ್ಚಿನ ವಿನ್ಯಾಸ ಮತ್ತು ಒಳಾಂಗಣ ಬದಲಾವಣೆಗಳು ಹೊಸ ಬಲೆನೊಗೆ ಅನುಗುಣವಾಗಿರುತ್ತವೆ, ಹೊಸ ಟೊಯೊಟಾ ಗ್ಲಾಂಝಾ ಕೂಡ ಕೆಲವು ಹೆಚ್ಚುವರಿ ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ. ಈ ಟೊಯೊಟಾ ಗ್ಲಾಂಝಾ ಕಾರು ಹಿಂಭಾಗದ ಬಂಪರ್, ಫೆಂಡರ್‌ಗಳು ಮತ್ತು ಟೈಲ್‌ಗೇಟ್ ಅನ್ನು ಬಲೆನೊದೊಂದಿಗೆ ಹಂಚಿಕೊಳ್ಳುತ್ತದೆ.

ಆದರೆ ಹೊಸ ಟೊಯೊಟಾ ಗ್ಲಾಂಝಾ ಮಾದರಿಯಲ್ಲಿ ಅಲಾಯ್ ವ್ಹೀಲ್ ಗಳು ಮತ್ತು ಟೈಲ್-ಲೈಟ್‌ಗಳಿಗಾಗಿ ಹೊಸ ಇನ್‌ಸರ್ಟ್‌ಗಳನ್ನು ಹೊಂದಿರುತ್ತದೆ. ಹೊಸ ಬಲೆನೊಗೆ ಹೋಲಿಸಿದರೆ ಹ್ಯಾಚ್‌ಬ್ಯಾಕ್ ವಿಭಿನ್ನ ಮುಂಭಾಗದ ವಿನ್ಯಾಸವನ್ನು ಪಡೆಯುತ್ತದೆ ಇದು ಹೊಸ ಮುಂಭಾಗದ ಬಂಪರ್, ವಿಭಿನ್ನ ಗ್ರಿಲ್ ವಿನ್ಯಾಸ ಮತ್ತು ವಿಭಿನ್ನ DRL (ಡೇಟೈಮ್ ರನ್ನಿಂಗ್ ಲೈಟ್) ಜೊತೆಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಒಟ್ಟೆರೆಯಾಗಿ ಹೊಸ ಟೊಯೊಟಾ ಗ್ಲಾಂಝಾ ಕಾರು ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ. ಇನ್ನು ಇತ್ತೀಚಿನ ಟೀಸರ್ ವೀಡಿಯೊಗಳು ಟೊಯೊಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ವಾಚ್ ಕನೆಕ್ಟಿವಿಟಿಯನ್ನು ಪಡೆಯುತ್ತದೆ ಎಂದು ಬಹಿರಂಗಪಡಿಸುತ್ತದೆ.

ಇನ್ನೊಂದು ಟೀಸರ್ ಟೊಯೊಟಾ ಗ್ಲಾಂಝಾ ಕಾರನ್ನು ಸ್ಮಾರ್ಟ್‌ವಾಚ್ ಮೂಲಕ ಲಾಕ್/ಅನ್‌ಲಾಕ್ ಮಾಡಿರುವುದನ್ನು ತೋರಿಸಿದರೆ, ಇನ್ನೊಂದು ಕನೆಕ್ಟ್ ಮಾಡಿದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ 'ಫೈಂಡ್ ಮೈ ಕಾರ್' ಎಂಬ ಫೀಚರ್ ಅನ್ನು ಪ್ರದರ್ಶಿಸುತ್ತದೆ.

ಮುಂಬರುವ ಹೊಸ ಗ್ಲಾಂಝಾ ಕಾರು ಹಿಂದಿನ ಮಾದರಿಗಿಂತ ಗಮನಾರ್ಹವಾಗಿ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಈ ಹಿಂದೆ, ತಯಾರಕರು ಹೊಸ ಫ್ರೀ-ಸ್ಟ್ಯಾಂಡಿಂಗ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ

ಈ ಹೊಸ ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಕಾರ ಮತ್ತು ಗಾತ್ರದಲ್ಲಿ ಫೇಸ್‌ಲಿಫ್ಟೆಡ್ ಬಲೆನೊದಂತೆಯ ಇದೆ, ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ನ್ಯಾವಿಗೇಷನ್ ಮತ್ತು ವಾಯ್ಸ್ ಕಮಾಂಡ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಟಚ್‌ಸ್ಕ್ರೀನ್‌ನ ಕೆಳಗೆ ಇರಿಸಲಾಗಿರುವ ಕ್ಲೈಮೆಂಟ್ ವೆಂಟ್ ಗಳು ಮತ್ತು ಹಝರ್ಡ್ ಲ್ಯಾಂಪ್ ಸ್ವಿಚ್ ಸಹ 2022ರ ಬಲೆನೊ ಕಾರಿಗೆ ಹೋಲುತ್ತವೆ.
ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಾರಿನ ಡ್ಯಾಶ್‌ಬೋರ್ಡ್ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ, ಒಟ್ಟಾರೆ ವಿನ್ಯಾಸವು ಬಲೆನೊವನ್ನು ನೆನಪಿಸುತ್ತದೆ. ಲೋ ಸ್ಪೆಕ್ ರೂಪಾಂತರಗಳು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7-ಇಂಚಿನ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ಸಾಧ್ಯತೆಯಿದೆ. ಇದು ಹೆಡ್ಸ್-ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಕ್ರೂಸ್ ಕಂಟ್ರೋಲ್, ಹೊಸ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಮತ್ತು ಇತರ ಫೀಚರ್ಸ್ ಗಳನ್ನು ಒಳಗೊಂಡಿರಲಿವೆ.
ಇನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022ರ ಫೆಬ್ರವರಿ ತಿಂಗಳ ಮಾಸಿಕ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಈ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು ಒಟ್ಟು 8745 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಟೊಯೊಟಾ ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 14,075 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಮತ್ತು ಆದ್ದರಿಂದ, ಶೇಕಡಾ 37.8 ರಷ್ಟು ಕುಸಿತವನ್ನು ಕಂಡಿದೆ.

ಟೊಯೊಟಾ ಗ್ಲಾಂಝಾದಂತಹ ಮಾದರಿಗಳು ಭಾರತದಲ್ಲಿ ಕಂಪನಿಗೆ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಯೊಟಾ ಮುಂಬರುವ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಸೇರಿಸುತ್ತದೆ. ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ. 2022ರ ಟೊಯೊಟಾ ಗ್ಲಾಂಝಾ ಕಾರು ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.