ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಹೊಸ ಎಸ್‍ಯುವಿಯನ್ನು ಅನಾವರಣಗೊಳಿಸುವುದಾಗಿ ಘೋಷಿಸಿದೆ. ಅನಾವರಣವಾಗುವ ಮುಂಚಿತವಾಗಿ ಇಂಟಿರಿಯರ್ ಬಹಿರಂಗಪಡಿಸುವ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಟೊಯೊಟಾ ಕಂಪನಿಯು ಹೊಚ್ಚಹೊಸ ಎಸ್‍ಯುವಿಯು ಪರಿಚಯಿಸುತ್ತದೆ, ಇದು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ ಎಸ್‍ಯುವಿಗೆ ಟೊಯೊಟಾ ಹೈರೈಡರ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಮೈಲ್ಡ್ ಹೈಬ್ರಿಡ್ ಮತ್ತು ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಬರಲಿದೆ. ಈ ಹೊಸ ಎಸ್‍ಯುವಿಯ ಉತ್ಪಾದನೆಯು ಜುಲೈ 1 ರಿಂದ ಆರಂಭವಾಗಲಿದೆ. ಇದರ ಉತ್ಪಾದನೆಯು ಕರ್ನಾಟಕದ ಬಿಡದಿಯಲ್ಲಿರುವ ಟೊಯೊಟಾ ಉತ್ಪಾದನೆ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಹೊಸ ಟೊಯೊಟಾ ಎಸ್‌ಯುವಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆ ಬಿಡುಗಡೆಗಯಾಗುವ ಸಾಧ್ಯತೆಗಳಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಟೀಸರ್ ನಲ್ಲಿ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಮೃದುವಾದ ಕಂದು ಮತ್ತು ಕಪ್ಪು ಬಣ್ಣಗಳ ಲೆದರ್ ಸಿಲ್ವರ್ ಅಸ್ಸೆಂಟ್ ಗಳೊಂದಿಗೆ ಮತ್ತು ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಬಹಿರಂಗಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಆಟೋಮ್ಯಾಟಿಕ್ ಬಟನ್‌ಗಳೊಂದಿಗೆ ಎಸಿ ಕಂಟ್ರೋಲ್ ಗಳನ್ನು ಹೊಂದಿವೆ. ಇನ್ಫೋಟೈನ್‌ಮೆಂಟ್ ಯುನಿಟ್ ಟಾಪ್-ಸ್ಪೆಕ್ ಬಲೆನೊ ಹ್ಯಾಚ್‌ಬ್ಯಾಕ್‌ನಲ್ಲಿ ನೀಡಲಾದ ಒಂದಕ್ಕೆ ಹೋಲುತ್ತದೆ ಮತ್ತು ಶೀಘ್ರದಲ್ಲೇ ಹೊಸ ಮಾರುತಿ ಬ್ರೆಜ್ಜಾದಲ್ಲಿ ಪರಿಚಯಿಸಲಾಗುವುದು. ಹೊಸ ಟೊಯೋಟಾ ಹೈರೈಡರ್ ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಬರಲಿದೆ ಎಂದು ಟೀಸರ್ ದೃಢಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಈ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹೆಡ್ಸ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಎಸಿ ಮುಂತಾದ ಹಲವಾರು ಉನ್ನತ ವೈಶಿಷ್ಟ್ಯಗಳೊಂದಿಗೆ ಹೊಸ ಟೊಯೋಟಾ ಹೈರೈಡರ್ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಎಸ್‍ಯುವಿಯ ಹಿಂಭಾಗದ ಎಸಿ ವೆಂಟ್‌ಗಳ ಜೊತೆಗೆ ಮತ್ತು ಇನ್ನೂ ಅನೇಕ ಫೀಚರ್ಸ್ ಗಳಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಕಳೆದ ಟೀಸರ್ ನಲ್ಲಿ ಸ್ಪೋರ್ಟಿ ಬ್ಲ್ಯಾಕ್ ಮಾದರಿಯೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಎಲ್ಇಡಿ DRL ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲ್ಯಾಕ್ ORVM ಗಳು, ಬಾಡಿ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು, ಸ್ಪೋರ್ಟಿ ರಿಯರ್ ಸ್ಪೋಲಿಯರ್ ಮತ್ತು ನಯವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ತೋರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಹೊಸ ಟೊಯೊಟಾ ಎಸ್‍ಯುವಿಯ ಮುಂಭಾಗದ ಗ್ರಿಲ್‌ನ ಮೇಲ್ಭಾಗದಲ್ಲಿ ಮತ್ತು ಎಸ್‍ಯುವಿಯ ಮುಂಭಾಗದ ಮಧ್ಯದಲ್ಲಿ ಸಿಗ್ನೇಚರ್ ಬ್ಯಾಡ್ಜ್ ಅನ್ನು ಒಳಗೊಂಡಿರುವ ಸ್ಪ್ಲಿಟ್ ಕ್ರೋಮ್ ಬಾರ್‌ಗಳೊಂದಿಗೆ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ವರದಿಗಳ ಪ್ರಕಾರ, ಮಾರುತಿ ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಗ್ಲೋಬಲ್-ಸ್ಪೆಕ್ ವಿಟಾರಾ ಎಸ್‌ಯುವಿಯನ್ನು ಸಹ ಆಧಾರವಾಗಿರುವ ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಟೊಯೋಟಾ ಹೈರೈಡರ್ ಎಸ್‌ಯುವಿ ವಿನ್ಯಾಸಗೊಳಿಸಿರಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಮುಂಬರುವ ಹೊಸ ಮಿಡ್ ಸೈಜ್ ಎಸ್‍ಯುವಿ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರಲಿದೆ ಎಂದು ವಾಹನ ತಯಾರಕರು ದೃಢಪಡಿಸಿದ್ದಾರೆ. ಈ ಎಸ್‍ಯುವಿಯಲ್ಲಿ 1.5 ಲೀಟರ್ K15C ಡ್ಯುಯಲ್ ಜೆಟ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇದು ಮೈಲ್ಡ್ ಮತ್ತು ಬಲವಾದ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಈ ಎಸ್‍ಯುವಿಯ ಮೈಲ್ಡ್ ಹೈಬ್ರಿಡ್ ಆವೃತ್ತಿಯು 103 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೆಯದು 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಇನ್ನು ಎಸ್‍ಯುವಿಯ ಗೇರ್ ಬಾಕ್ಸ್ ವಿಷಯದಲ್ಲಿ, ಟೊಯೊಟಾ ಹೈರೈಡರ್ ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್ ಅನ್ನು ಹೊಂದಿರುತ್ತದೆ. ಮೈಲ್ದ್ ಹೈಬ್ರಿಡ್ ರೂಪಾಂತರಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರುತ್ತವೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಇನ್ನು ಬಲವಾದ ಹೈಬ್ರಿಡ್ ಆವೃತ್ತಿಯು ಇ-ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಫ್ಹೋರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಎರಡು ಡ್ರೈವ್‌ಟ್ರೇನ್ ಸಿಸ್ಟಂಗಳು ಆಫರ್‌ನಲ್ಲಿರುತ್ತವೆ. ಪ್ರಬಲವಾದ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಸ್ಪೆಲ್ಫ್ ಚಾರ್ಜಿಂಗ್ ಸಿಸ್ಟಂನೊಂದಿಗೆ ನೀಡಲಾಗುತ್ತದೆ, ಮುಂಬರುವ ಟೊಯೊಟಾ ಹೈರೈಡರ್ ಎಸ್‍ಯುವಿ ಅಧಿಕೃತ ವಿವರಗಳನ್ನು ಜುಲೈ 1 ರಂದು ಅನಾವರಣವಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಲಿರುವ ಟೊಯೊಟಾ ಮತ್ತು ಮಾರುತಿ ಸುಜುಕಿಯಿಂದ ಕಾಂಪ್ಯಾಕ್ಟ್ ಎಸ್‌ಯುವಿ ಜಂಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಊಹೆಗಳಿವೆ. ಎರಡೂ ಬ್ರಾಂಡ್‌ಗಳು ಹೈಬ್ರಿಡ್ ಎಸ್‌ಯುವಿಯನ್ನು ಸಹ-ಅಭಿವೃದ್ಧಿಪಡಿಸಿದ್ದರೂ, ಟೊಯೊಟಾದ ಹೈಬ್ರಿಡ್ ಎಸ್‌ಯುವಿ ಆವೃತ್ತಿಯು ಮಾರುತಿ ಸುಜುಕಿಯ ಆವೃತ್ತಿಗಿಂತ ಸ್ವಲ್ಪ ಮುಂಚಿತವಾಗಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್‌ಯುವಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಟೊಯೊಟಾ ಹೈರೈಡರ್ ಎಸ್‌ಯುವಿಯು ಬಿಡುಗಡೆಯ ಬಳಿಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವುದಲ್ಲದೆ, ಇದು ಬ್ರ್ಯಾಂಡ್ ಇಮೇಜ್ ಸುಧಾರಿಸುತ್ತದೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೈಬ್ರಿಡ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಹೊಸ ಟೊಯೊಟಾ ಹೈರೈಡರ್ ಎಸ್‌ಯುವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಟೊಯೊಟಾ toyota
English summary
Toyota shares new interior taser of upcoming hyryder suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X