ಟೊಯೊಟಾ ಇನೋವಾ ಕಾರಿನ ಪ್ಲಾಟ್‌ಫಾರ್ಮ್ ಆಧರಿಸಿದ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಹೊಸ ಹೈಲಕ್ಸ್ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನ್ನು ಅನಾವರಣಗೊಳಿಸಿದೆ. ಜಪಾನಿನ ವಾಹನ ತಯಾರಕರಾದ ಟೊಯೊಟಾ ಥೈಲ್ಯಾಂಡ್‌ ನಲ್ಲಿ 60 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಮಾರಂಭದಲ್ಲಿ Hilux Revo BEV ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದರು.

ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ವಿನ್ಯಾಸವನ್ನು ಕಾನ್ಸೆಪ್ಟ್ ಇವಿ ಮೂಲಕ ಪೂರ್ವವೀಕ್ಷಿಸಲಾಗಿದ್ದರೂ, ಯಾವುದೇ ತಾಂತ್ರಿಕ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಬಾಹ್ಯ ವಿನ್ಯಾಸದ ವಿಷಯದಲ್ಲಿ, Hilux Revo BEV ಕಾನ್ಸೆಪ್ಟ್ ಗ್ರಿಲ್ ಅನ್ನು ಸ್ಲ್ಯಾಟೆಡ್ ವಿನ್ಯಾಸ ಅಂಶದೊಂದಿಗೆ ಹೊಂದಿದೆ, ಮುಂಭಾಗದ ಕ್ವಾರ್ಟರ್ ಪ್ಯಾನೆಲ್‌ನ ಪ್ರಯಾಣಿಕರ ಬದಿಯಲ್ಲಿ ಚಾರ್ಜಿಂಗ್ ಪೋರ್ಟ್, ಹೊಸ ಅಲಾಯ್ ವ್ಹೀಲ್ ಗಳು, ಹೊಸ LED ಹೆಡ್‌ಲ್ಯಾಂಪ್‌ಗಳು LED DRL ಗಳು ಮತ್ತು ಟ್ರೆಪೆಜಾಯ್ಡಲ್ ಫಾಗ್ ಲ್ಯಾಂಪ್ ಗಳನ್ನು ಹೊಂದಿವೆ.

ಟೊಯೊಟಾ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣ

ಇನ್ನು ಕಾನ್ಸೆಪ್ಟ್ ಪಿಕ್ಅಪ್ ಟ್ರಕ್ ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ LED ಟೈಲ್‌ಲ್ಯಾಂಪ್‌ಗಳು ಮತ್ತು ಫ್ಲಾಟ್ ಟೈಲ್‌ಗೇಟ್ ಅನ್ನು ಪಡೆಯುತ್ತದೆ. ಇನ್ನು ಟೊಯೊಟಾ ಮೋಟಾರ್ ಕಾರ್ಪೊರೇಶನ್‌ನ ಅಧ್ಯಕ್ಷ ಅಕಿಯೊ ಟೊಯೊಡಾ, "ಬಿಇವಿಗಳು ಮುಖ್ಯವಾಹಿನಿಗೆ ಬರಲು ಮಾಧ್ಯಮಗಳು ನಾವು ನಂಬಲು ಬಯಸುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ಮತ್ತು ಸ್ಪಷ್ಟವಾಗಿ ಹೇಳುವುದಾದರೆ, BEV ಗಳು ಪ್ರಪಂಚದ ಇಂಗಾಲದ ತಟಸ್ಥತೆಯ ಗುರಿಗಳನ್ನು ಸಾಧಿಸುವ ಏಕೈಕ ಮಾರ್ಗವಲ್ಲ.

ಹೊರಸೂಸುವಿಕೆ-ಮುಕ್ತ ಸಿಂಥೆಟಿಕ್ ಇಂಧನಗಳು ಮತ್ತು ಹೈಡ್ರೋಜನ್‌ನಂತಹ ಆಯ್ಕೆಗಳನ್ನು ಒಂದಲ್ಲದೇ ಪ್ರತಿಯೊಂದು ಆಯ್ಕೆಯನ್ನು ಅನುಸರಿಸುತ್ತೇನೆ. ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಕ್ರಮಣಕಾರಿ ಗಮನಕ್ಕಿಂತ ಭಿನ್ನವಾಗಿ, ಹೈಬ್ರಿಡ್ ಎಲೆಕ್ಟ್ರಿಕ್, ಫ್ಯೂಯಲ್ ಸೆಲ್ ಮತ್ತು ಎಮಿಷನ್-ಫ್ರೀ ಸಿಂಥೆಟಿಕ್ ಇಂಧನಗಳಂತಹ ಇತರ ತಂತ್ರಜ್ಞಾನಗಳನ್ನು ಸಹ ಪರಿಗಣಿಸಬೇಕಾಗಿದೆ ಎಂದು ಟೊಯೋಟಾ ನಂಬುತ್ತದೆ. ಥಾಯ್ಲೆಂಡ್‌ನಲ್ಲಿ IMV0 (ಶೂನ್ಯ) ಮತ್ತು Hilux Revo BEV ಕಾನ್ಸೆಪ್ಟ್ ಮಾದರಿಗಳ ಅನಾವರಣ ಸಮಾರಂಭದಲ್ಲಿ ಟೊಯೊಟಾ ಮೋಟಾರ್ ಕಾರ್ಪೊರೇಶನ್‌ನ ಅಧ್ಯಕ್ಷ ಅಕಿಯೊ ಟೊಯೊಡಾ ಅವರು ಈ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ.

ಕಾರ್ಬನ್ ನ್ಯೂಟ್ರಾಲಿಟಿ ಗುರಿಗಳನ್ನು ಸಾಧಿಸುವಲ್ಲಿ ಇತರ ತಂತ್ರಜ್ಞಾನಗಳು ಎಲೆಕ್ಟ್ರಿಕ್ ಕಾರುಗಳಷ್ಟೇ ಪರಿಣಾಮಕಾರಿ ಮತ್ತು ಸಮರ್ಥನೀಯವಾಗಿರುವುದರಿಂದ ಇದು ಪ್ರಾಯೋಗಿಕವಾಗಿ ತೋರುತ್ತದೆ. ಬ್ಯಾಟರಿ ತಯಾರಕರ ಮೇಲೆ ಅವಲಂಬನೆಯನ್ನು ಹೆಚ್ಚಿಸುವ ವಿದ್ಯುತ್-ಮಾತ್ರ ಪರಿಸರ ವ್ಯವಸ್ಥೆಗೆ ಹೋಲಿಸಿದರೆ ಇತರ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ಆಟೋಮೋಟಿವ್ ಜಾಗವನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ರೋಮಾಂಚಕವಾಗಿಸುತ್ತದೆ. ನಂತರದ ಸಂದರ್ಭದಲ್ಲಿ ನಾವೀನ್ಯತೆಯ ರೇಂಜ್ ಕೂಡ ಸೀಮಿತವಾಗಿರುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಪೂರ್ಣ ಪ್ರಮಾಣದ ಬದಲಾವಣೆಯನ್ನು ವಿರೋಧಿಸಿದ ಕೆಲವೇ ಕಾರು ತಯಾರಕರಲ್ಲಿ ಟೊಯೊಟಾ ಕೂಡ ಸೇರಿದೆ.

ಮಿರಾಯ್‌ನಂತಹ ಕಾರುಗಳ ಜೊತೆಗೆ ಇತರ ಪರಿಸರ ಸ್ನೇಹಿ ತಂತ್ರಜ್ಞಾನಗಳ ಕಾರ್ಯಸಾಧ್ಯತೆಯನ್ನು ಅವರು ಪ್ರಾಯೋಗಿಕವಾಗಿ ಪ್ರದರ್ಶಿಸಿದ್ದಾರೆ. ಎರಡೂ ಕಾನ್ಸೆಪ್ಟ್ ಮಾದರಿಗಳು MV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ, ಇದನ್ನು ಮೂಲತಃ ಅಕಿಯೊ ಟೊಯೊಡಾ ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2002 ರಲ್ಲಿ ಪ್ರಾರಂಭವಾದ IMV ಯೋಜನೆಯು Hilux Vigo, Innova ಮತ್ತು Fortuner ನಂತಹ ಬಹು ಬೆಸ್ಟ್ ಸೆಲ್ಲರ್‌ಗಳನ್ನು ಹುಟ್ಟುಹಾಕಿದೆ. IMV ಪ್ಲಾಟ್‌ಫಾರ್ಮ್ ಅನ್ನು ರಿಫ್ರೆಶ್ ಮಾಡುವುದು ಮತ್ತು ಕೈಗೆಟುಕುವ ಮಾದರಿ ರಚಿಸುವುದು ಟೊಯೊಟಾದ ಆಲೋಚನೆಯಾಗಿತ್ತು.

ಪ್ರಯತ್ನಗಳು ಅಂತಿಮವಾಗಿ ಪರ್ಯಾಯ ಶಕ್ತಿ ವಾಹನದ (IMV0) ಅಭಿವೃದ್ಧಿಗೆ ಕಾರಣವಾಯಿತು. IMV0 (ಶೂನ್ಯ) ಮತ್ತು Hilux Revo BEV ಎರಡೂ ಸುಮಾರು ಒಂದು ವರ್ಷದ ಅವಧಿಯಲ್ಲಿ ಉತ್ಪಾದನಾ ಹಂತವನ್ನು ತಲುಪುತ್ತವೆ ಎಂದು ಟೊಯೊಟಾ ಹೇಳಿದ್ದಾರೆ. ಇನ್ನು ಭಾರತದಲ್ಲಿ, ಜಪಾನಿನ ವಾಹನ ತಯಾರಕರು ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಮಾದರಿಯು ಜನವರಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಸದ್ಯಕ್ಕೆ, ಭಾರತದಾದ್ಯಂತ ಟೊಯೊಟಾ ಡೀಲರ್‌ಗಳು ಈ ಹೊಸ ಹೈಬ್ರಿಡ್ ಕಾರಿಗಾಗಿ ಬುಕಿಂಗ್ ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಈ ಇನೋವಾ ಹೈಕ್ರಾಸ್ ವಿತರಣೆಯು ಬಿಡುಗಡೆಯಾದ ಕೆಲವು ದಿನಗಳ ನಂತರ ನಡೆಯಲಿದೆ. ಈ ಟೊಯೊಟಾ ಇನೋವಾ ಹೈಕ್ರಾಸ್ ಕಾರಿಗಾಗಿ ಅಧಿಕೃತ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಇನ್ನೋವಾ ಹೈಕ್ರಾಸ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೈಕ್ರಾಸ್ ಅತ್ಯಂತ ವೇಗದ ಇನೋವಾ ಆಗಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಅಲ್ಲ ಟೊಯೊಟಾ ಫಾರ್ಚುನರ್ ಎಸ್‍ಯುವಿ ಗಿಂತಲೂ ವೇಗವಾಗಿದೆ, ಈ ಇನ್ನೋವಾ ಹೈಕ್ರಾಸ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Article Published On: Friday, December 16, 2022, 13:12 [IST]
English summary
Toyota unveiled new hilux electric concept details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+