ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಟೊಯೊಟಾ ಕಂಪನಿಯು ತನ್ನ ಬಹುನೀರಿಕ್ಷಿತ ಹೈರೈಡರ್ ಹೈಬ್ರಿಡ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಖರೀದಿಗಾಗಿ ಈಗಾಗಲೇ ಸಾವಿರಾರು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವುದು ಭಾರೀ ಪ್ರಮಾಣದ ಬೇಡಿಕೆಗೆ ಕಾರಣವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 15.11 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹೊಸ ಹೈರೈಡರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಆರಂಭಿಕ ಮಾದರಿಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಮತ್ತು ಮಧ್ಯಮ ಕ್ರಮಾಂಕಗಳಲ್ಲಿ ಅನ್ವಯಿಸುವಂತೆ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಇದರಲ್ಲಿ ಸದ್ಯಕ್ಕೆ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೊಂದಿರುವ ಹೈರೈಡರ್ ಬೆಲೆ ಮಾತ್ರ ಘೋಷಣೆ ಮಾಡಿದ್ದು, ಮುಂದಿನ ವಾರ ಸ್ಮಾರ್ಟ್ ಹೈಬ್ರಿಡ್ ಹೊಂದಿರುವ ಹೈರೈಡರ್ ಬೆಲೆ ಬಹಿರಂಗವಾಗಲಿದೆ. ಸ್ಟ್ರಾಂಗ್ ಹೈಬ್ರಿಡ್ ಮಾದರಿಯು ಆರಂಭಿಕವಾಗಿ ರೂ. 15.11 ಲಕ್ಷ ಮತ್ತು ರೂ. 18.99 ಲಕ್ಷ ಬೆಲೆ ಹೊಂದಿದ್ದು, ಸ್ಟ್ರಾಂಗ್ ಹೈಬ್ರಿಡ್ ಮಾದರಿಯ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್ ಆಧರಿಸಿ 5 ತಿಂಗಳಿನಿಂದ 7 ತಿಂಗಳು ನಿಗದಿಪಡಿಸಲಾಗಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹೊಸ ಹೈಬ್ರಿಡ್ ಕಾರು ಮಾದರಿಯನ್ನು ಟೊಯೊಟಾ ಕಂಪನಿಯು ಬಿಡದಿ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡುತ್ತಿದ್ದು, ಸ್ಮಾರ್ಟ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಟು ವ್ಹೀಲ್ ಡ್ರೈವ್ ನಿಯೋ ಡ್ರೈವ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ವೆರಿಯೆಂಟ್‌ಗಳನ್ನು ಇಡ್ರೈವ್ ಟು ವ್ಹೀಲ್ ಡ್ರೈವ್ ಹೈಬ್ರಿಡ್ ಎಂದು ಕರೆಯಲಾಗುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹೈರೈಡರ್‌ನಲ್ಲಿ ಟೊಯೊಟಾ ಕಂಪನಿಯು 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇದು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಹೊಸ ಕಾರಿನ ಸ್ಟ್ರಾಂಗ್ ಹೈಬ್ರಿಡ್ ಮಾದರಿಯಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೈಬ್ರಿಡ್ ತಂತ್ರಜ್ಞಾನದ ಪ್ರಮುಖ ತಾಂತ್ರಿಕ ಅಂಶವಾಗಿದ್ದು, ಇದರಲ್ಲಿ ಪೆಟ್ರೋಲ್ ಎಂಜಿನ್ ಮಾದರಿಯು 87 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದಲ್ಲಿ 177.6 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ 79 ಬಿಎಚ್‌ಪಿ ಮತ್ತು 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹೈಬ್ರಿಡ್ ಮಾದರಿಯಾಗಿರುವುದರಿಂದ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವ ಪೆಟ್ರೋಲ್ ದಹಿಸುವಿಕೆಯ ಪ್ರಮಾಣವನ್ನು ತಗ್ಗಿಸಲಿದ್ದು, ಈ ಮೂಲಕ ಎರಡು ತಂತ್ರಜ್ಞಾನಗಳು ಒಟ್ಟಾಗಿ 114 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನ ಕಾರ್ಯಕ್ಷಮತೆ ಕಾಯ್ದುಕೊಳ್ಳುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೈರೈಡರ್ ವೆರಿಯೆಂಟ್‌ಗಳಲ್ಲಿ ಟೊಯೊಟಾ ಕಂಪನಿಯು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಟೊಯೊಟಾ ಕಂಪನಿಯು ನಿಯೋ ಡ್ರೈವ್ ಎಂಜಿನ್ ಮಾದರಿಗಳಲ್ಲಿ ಮಾರುತಿ ಸುಜುಕಿಯ 1.5-ಲೀಟರ್ K15C ಮೈಲ್ಡ್-ಹೈಬ್ರಿಡ್ ಜೊತೆಗೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಒದಗಿಸಲಿದ್ದು, ಇದು ಹೊಸ ಬ್ರೆಝಾ, ಎಕ್ಸ್‌ಎಲ್6 ಮತ್ತು ಹೊಸ ಎರ್ಟಿಗಾ ಮಾದರಿಗಳಲ್ಲಿ ಕಂಡುಬರುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಮೈಲ್ಡ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಎಂಜಿನ್ ಮಾದರಿಯು 103 ಬಿಎಚ್‌ಪಿ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್ ಅನ್ನು ಕಂಪನಿಯು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಮಾರಾಟ ಮಾಡಲಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಆಲ್ ವ್ಹೀಲ್ ಡ್ರೈವ್ ಮಾದರಿಯು ಸದ್ಯ ಘೋಷಣೆ ಮಾಡಲಾಗಿರುವ ಬೆಲೆಗಳಿಂತಲೂ ತುಸು ದುಬಾರಿ ಹೊಂದಿರಲಿದ್ದು, ಹೊಸ ಮಾದರಿಗಳಲ್ಲಿ ಕಂಪನಿಯು ಹಲಾವರು ಹೊಸ ವೈಶಿಷ್ಟ್ಯತೆಗಳೊಂದಿಗೆ ಐಷಾರಾಮಿ ಕಾರು ಚಾಲನಾ ಅನುಭವ ನೀಡಲಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿರುವ ಎತ್ತರದ ಏರ್‌ಡ್ಯಾಮ್‌ನೊಂದಿಗೆ ಸ್ಪೋರ್ಟಿ ಮುಂಭಾಗದ ಬಂಪರ್‌ಗಳನ್ನು ಸಹ ಒಳಗೊಂಡಿದ್ದು, ಎರಡು ಬದಿಯಲ್ಲಿ ಹೈರೈಡರ್‌ನ ಪ್ರಬಲ ಹೈಬ್ರಿಡ್ ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿವೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಇನ್ನು ಹೊಸ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ಬಗೆಗೆ ಹೇಳುವುದಾರೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾಗಿದ್ದು, ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲೂ ಗಮನಸೆಳೆಯಲಿರುವ ಅರ್ಬನ್ ಕ್ರೂಸರ್ ಹೈರೈಡರ್ ಕಾರು 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್‌ಪಿ, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಪಡೆಯುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಹಾಗೆಯೇ ಹೊಸ ಕಾರು ಖರೀದಿ ಮೇಲೆ ಟೊಯೊಟಾ 3 ವರ್ಷ ಅಥವಾ1,00,000 ಕಿ.ಮೀ ವಾರಂಟಿಯನ್ನು ನೀಡಲಿದ್ದು, ಇದನ್ನು 5 ವರ್ಷ ಅಥವಾ 2,20,000 ಕಿ.ಮೀವರೆಗೆ ವಿಸ್ತರಿಸಬಹುದಾಗಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ ಟೊಯೊಟಾ ಹೈರೈಡರ್ ಖರೀದಿಗಾಗಿ ಇಷ್ಟು ದಿನ ಕಾಯಲೇಬೇಕು..

ಜೊತೆಗೆ ಹೊಸ ಕಾರಿನ ಹೈಬ್ರಿಡ್ ಬ್ಯಾಟರಿಗಳ ಮೇಲೆ 8 ವರ್ಷ ಅಥವಾ 1,60,000 ಕಿ.ಮೀ ವಾರಂಟಿಯನ್ನು ಸಹ ನೀಡುತ್ತಿದ್ದು, ಪ್ರಮುಖ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಫೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota urban cruiser hyryder hybrid waiting period
Story first published: Wednesday, September 14, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X