ಟೊಯೊಟಾದ ಹೊಸ ಆ್ಯಡ್‌ನಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ಇನ್ನೋವಾ ಹೈಕ್ರಾಸ್

ಟೊಯೊಟಾ ಇತ್ತೀಚೆಗೆ ಭಾರತದಲ್ಲಿ ಹೊಸ ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದ್ದು, ಇದನ್ನು ಅತ್ಯಂತ ಯಶಸ್ವಿ ಇನ್ನೋವಾ ಕ್ರಿಸ್ಟಾದ ಉತ್ತರಾಧಿಕಾರಿಯನ್ನಾಗಿ ಬಿಡುಗಡೆ ಮಾಡಲಾಗುತ್ತಿದೆ. ಹಿಂದಿನ ತಲೆಮಾರಿನ ಇನ್ನೋವಾಗಳಿಗೆ ಹೋಲಿಸಿದರೆ, ಹೈಕ್ರಾಸ್‌ನಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇದು ಹೆಚ್ಚು ಸುಧಾರಿತವಾಗಿದ್ದು, ಹೆಚ್ಚಿನ ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ.

ಟೊಯೊಟಾ ಈಗಾಗಲೇ ಹೊಸ ಇನ್ನೋವಾ ಹೈಕ್ರಾಸ್‌ಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಬೆಲೆ ಪ್ರಕಟಣೆ ಮತ್ತು ವಿತರಣೆಗಳು ಮುಂದಿನ ವರ್ಷ ಜನವರಿಯಲ್ಲಿ ಪ್ರಾರಂಭವಾಗಲಿವೆ. ಟೊಯೊಟಾ ತನ್ನ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಹೈಕ್ರಾಸ್‌ಗಾಗಿ ಒಂದೊಂದಾಗಿಯೇ ವೀಡಿಯೊಗಳು ಮತ್ತು ಜಾಹೀರಾತುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಇದೀಗ ಅಂತಹ ಒಂದು ವಿಡಿಯೋವನ್ನು ಇಲ್ಲಿ ನೋಡಬಹುದು, ಈ ವಿಡಿಯೋದಲ್ಲಿ ತಯಾರಕರು ಕಾರಿನ ಒಳಭಾಗ ಹಾಗೂ ಹೊರಾಂಗಣದ ಕುರಿತು ವಿವರಿಸಿದ್ದಾರೆ.

ಟೊಯೊಟಾದ ಹೊಸ ಆ್ಯಡ್‌ನಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ಇನ್ನೋವಾ ಹೈಕ್ರಾಸ್

ಈ ವಿಡಿಯೋವನ್ನು ಟೊಯೊಟಾ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ವೀಡಿಯೊದಲ್ಲಿ, ಮುಂಬರುವ ಇನ್ನೋವಾ ಹೈಕ್ರಾಸ್‌ನ ಹೊರಭಾಗ ಮತ್ತು ಒಳಭಾಗವನ್ನು ತೋರಿಸಲಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ, ಇನ್ನೋವಾ ಭಾರತದಲ್ಲಿ ಜನಪ್ರಿಯ ಬ್ರಾಂಡ್ ಆಗಿದೆ. ಕಂಪನಿಯ ವಿಶ್ವಾಸಾರ್ಹತೆ, ಸವಾರಿ ಸೌಕರ್ಯ ಮತ್ತು ಕಡಿಮೆ ವೆಚ್ಚದ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಮುಂಬರುವ ಇನ್ನೋವಾ ಹೈಕ್ರಾಸ್ ಈ ಎಲ್ಲಾ ಲಕ್ಷಣಗಳನ್ನು ಉಳಿಸಿಕೊಂಡು ತನ್ನನ್ನು ತಾನೇ ಮತ್ತೆ ಗುರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ವಿಡಿಯೋ ಕುರಿತ ನಮ್ಮ ಅನಿಸಿಕೆಗಳನ್ನು ಇಲ್ಲಿ ನೋಡೋಣ. ವಿನ್ಯಾಸದ ವಿಷಯದಲ್ಲಿ, ಇದು ಹಳೆಯ ಇನ್ನೋವಾ ಅಥವಾ ಇನ್ನೋವಾ ಕ್ರಿಸ್ಟಾದಿಂದ ಪ್ರಮುಖವಾಗಿ ಅಪ್‌ಗ್ರೇಡ್ ಆಗಿರುವುದರಿಂದ ಇನ್ನೋವಾ ಹೈಕ್ರಾಸ್ ಎಂಪಿವಿಗಿಂತ ಎಸ್‌ಯುವಿನಂತೆ ಹೆಚ್ಚಾಗಿ ಕಾಣುತ್ತದೆ. ಇನ್ನೋವಾ ಹೈಕ್ರಾಸ್ ಕ್ರೋಮ್ ಔಟ್‌ಲೈನ್‌ನೊಂದಿಗೆ ಅದರ ದೊಡ್ಡ ಹೆಕ್ಸಾಗೊನಲ್ ಗ್ರಿಲ್‌ನೊಂದಿಗೆ ಪ್ರೀಮಿಯಂ ಆಗಿ ಕಾಣುತ್ತಿದೆ. ಜೊತೆಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹೊಸ ಲುಕ್‌ ನೀಡಿವೆ. ಬಂಪರ್ ಮಸ್ಕುಲರ್ ಆಗಿ ಕಾಣುತ್ತಿದ್ದು, ಅದರ ಮೇಲಿನ LED DRL ಅಗ್ರೆಸಿವ್ ನೋಟವನ್ನು ನೀಡಿದೆ.

Video Code:

ಫಾಗ್ ಲ್ಯಾಂಪ್‌ಗಳನ್ನು ಬಂಪರ್‌ನ ಕೆಳಗಿನ ಭಾಗದಲ್ಲಿ ಇರಿಸಲಾಗಿದೆ. ನೇರವಾದ ಗ್ರಿಲ್ ಮತ್ತು ಎತ್ತರಿಸಿದ ಬಾನೆಟ್ ಸಂಪೂರ್ಣ ಮುಂಭಾಗದ ನೋಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಸೈಡ್ ಪ್ರೊಫೈಲ್‌ಗೆ ಬರುವುದಾದರೆ, ಇನ್ನೋವಾ ಹೈಕ್ರಾಸ್ 18 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸೈಡ್ ಪ್ಯಾನೆಲ್‌ಗಳಲ್ಲಿ ಮಸ್ಕ್ಯುಲರ್ ಲೈನ್‌ಗಳಿವೆ. ಹಿಂಭಾಗದ ವಿಷಯಕ್ಕೆ ಬಂದರೆ, Innova Hycross ನಿಮಗೆ RAV4 ನಂತಹ ಕೆಲವು ಅಂತರರಾಷ್ಟ್ರೀಯ ಟೊಯೋಟಾಗಳನ್ನು ನೆನಪಿಸಬಹುದು.

Toyota ಲೋಗೋ ಮತ್ತು Innova Hycross ಬ್ರ್ಯಾಂಡಿಂಗ್‌ನೊಂದಿಗೆ ಬೃಹತ್ ಗಾತ್ರದ ಟೈಲ್‌ಗೇಟ್ ಅನ್ನು ಇಲ್ಲಿ ಕಾಣಬಹುದು. ಕ್ರಿಸ್ಟಾಗೆ ಹೋಲಿಸಿದರೆ ಇನ್ನೋವಾ ಹೈಕ್ರಾಸ್‌ನಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಪ್ಲಾಟ್‌ಫಾರ್ಮ್ ಅಂತಲೇ ಹೇಳಬಹದು. ಇದು ಈಗ ಟೊಯೊಟಾದ TNGA ಪ್ಲಾಟ್‌ಫಾರ್ಮ್‌ನಿಂದ ಪಡೆದ ಮೊನೊಕೊಕ್ ಫ್ರೇಮ್ ಅನ್ನು ಆಧರಿಸಿದೆ. ಮೇಲೆ ತಿಳಿಸಿದಂತೆ, Innova Hycross ಭಾರತದಲ್ಲಿ ಟೊಯೋಟಾದಲ್ಲಿ ಎಂದೂ ನೀಡದ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಿದೆ.

ಇದು ಫ್ಲೋಟಿಂಗ್ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಅಪ್ಹೋಲ್ಸ್ಟರಿ, ಫ್ರಂಟ್ ವೆನ್ಷಿಯೇಟೆಡ್ ಸೀಟ್‌ಗಳು, ಆಂಬಿಯೆಂಟ್ ಲೈಟ್‌ಗಳು, ಪನೋರಮಿಕ್ ಸನ್‌ರೂಫ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಇತ್ಯಾದಿಗಳೊಂದಿಗೆ ಪ್ರೀಮಿಯಂ ಲುಕಿಂಗ್ ಕ್ಯಾಬಿನ್‌ನೊಂದಿಗೆ ಬರುತ್ತದೆ. ಟೊಯೊಟಾ ADAS ಅನ್ನು ಸಹ ನೀಡುತ್ತಿದೆ. ಭಾರತದಲ್ಲಿ ಈ ವೈಶಿಷ್ಟ್ಯವನ್ನು ಪಡೆದ ಮೊದಲ ಟೊಯೊಟಾ ಇದಾಗಿದೆ. ಈ ವ್ಯವಸ್ಥೆಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಲೇನ್ ಎಕ್ಸಿಸ್ಟ್ ಅಲರ್ಟ್, ಆಟೋ ಎಮರ್ಜನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರ್ ಮುಂತಾದವುಗಳನ್ನು ನೀಡುತ್ತಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುವುದು. ಹಳೆಯ ಇನ್ನೋವಾ ಕ್ರಿಸ್ಟಾ ಡೀಸೆಲ್ ಎಂಜಿನ್ ಜೊತೆಗೆ ಮಾರಾಟವಾಗಲಿದೆ. ಇನ್ನೋವಾ ಹೈಕ್ರಾಸ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಸಾಮಾನ್ಯ 2.0 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, ಇದು CVT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 172 bhp ಮತ್ತು 197 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದು ಎಂಜಿನ್ ಆಯ್ಕೆಯೆಂದರೆ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದನ್ನು e-CVT ಯೊಂದಿಗೆ ಜೋಡಿಸಲಾಗಿದೆ. ಇದು 184 Bhp ಅನ್ನು ಉತ್ಪಾದಿಸುತ್ತದೆ. ಇನ್ನೋವಾ ಹೈಕ್ರಾಸ್‌ಗೆ ಯಾವುದೇ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ನೀಡಲಾಗಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Toyotas new ad showcases the rugged look of the Innova hicross
Story first published: Thursday, December 1, 2022, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X