ಮುಂದಿನ 2 ವರ್ಷದಲ್ಲಿ ಭಾರತದಲ್ಲಿ 10 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ
ಜಪಾನಿನ ಕಾರು ತಯಾರಕ ಟೊಯೊಟಾ (Toyota) ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಹೊಸ ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ. ಟೊಯೊಟಾ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವಾಹನಗಳನ್ನು ಬಿಡುಗಡೆ ಮಾಡಲಿದೆ.

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ಹೊಸ 10 ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಕಾರುಗಳ ಬಗ್ಗೆ ಖರೀದಿದಾರರಲ್ಲಿ ನಿರೀಕ್ಷೆಯು ಸಾಕಷ್ಟು ಹೆಚ್ಚಾಗಿದೆ. ಈಗಗಾಲೇ ಟೊಯೊಟಾ ಕಂಪನಿಯು ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರ ನಡುವೆ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿ ಟೊಯೊಟಾ ವಾಹನ ಮಾರಾಟದ ಸಂಖ್ಯೆ ಹೆಚ್ಚಿಸಲು ಸಜ್ಜಾಗುತ್ತಿದೆ, ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೊಸ 10 ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟೊಯೊಟಾ ಹಿಲಕ್ಸ್
ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು. ಈ ಪಿಕ್ಅಪ್ ಟ್ರಕ್ ಈಗಾಗಲೇ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಇನ್ನು ಟೊಯೊಟಾ ಕಂಪನಿಯು ಈ ಮಾದರಿಯ ಖರೀದಿಗಾಗಿ ಅಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹಿಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಟ್ರಕ್ ಮಾದರಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಇದು 2.4 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 2.8-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹಿಲಕ್ಸ್ ಟಾಪ್ ರೂಪಾಂತರಗಳು AWD ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ, ಇದು ಆಫ್-ರೋಡಿಂಗ್‌ಗೆ ಉತ್ತಮವಾಗಿರುತ್ತದೆ.

ಟೊಯೊಟಾ ಡಿ22
ಡಿ22 ಹೊಸ ಮಿಡ್ ಸೈಜ್ ಎಸ್‍ಯುವಿ ಆಗಿದ್ದು ಅದು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಇದನ್ನು ಮಾರುತಿ ಸುಜುಕಿ ಜೊತೆಗೂಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಈ ವರ್ಷದ ಅಂತ್ಯದ ಮೊದಲು ಪ್ರಾರಂಭವಾಗುವ ನಿರೀಕ್ಷೆಯಿದೆ. ಡಿ22 ಎಸ್‍ಯುವಿಯನ್ನು ಗುಜರಾತ್‌ನಲ್ಲಿರುವ ಟೊಯೋಟಾದ ಸ್ಥಾವರದಲ್ಲಿ ತಯಾರಿಸಲಾಗುವುದು. ಇದು ಪೆಟ್ರೋಲ್ ಇಂಜಿನ್‌ಗೆ ಸಂಯೋಜಿತವಾದ ಪ್ರಬಲ ಹೈಬ್ರಿಡ್ ಸಿಸ್ಟಮ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಟೊಯೊಟಾ ಸಿ ಎಂಪಿವಿ
ಟೊಯೊಟಾ ಹೊಸ ಸಿ-ಸೆಗ್ಮೆಂಟ್ ಎಂಪಿವಿಯಲ್ಲಿ ಅಭಿವೃದ್ಧಿಯನ್ನು ಪ್ರಾರಂಭಿಸಿದೆ. ಇದನ್ನು 560B ಎಂಬ ಕೋಡ್ ನೇಮ್ ಮಾಡಲಾಗಿದೆ ಮತ್ತು ಇದನ್ನು D22 ಮಿಡ್ ಸೈಜ್ ಎಸ್‍ಯುವಿ ನಂತರ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ, ಇದು 2023 ರಲ್ಲಿ ಪ್ರಾರಂಭವಾಗಬಹುದು. ಇದು ಕಿಯಾ ಕಾರೆನ್ಸ್ ಮತ್ತು ಹ್ಯುಂಡೈ ಅಲ್ಕಾಜರ್ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ.

ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ(Toyota) ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(Land Cruiser) ಎಸ್‍ಯುವಿಯನ್ನು ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿತು ಮತ್ತು ಇದು ದೊಡ್ಡ ಯಶಸ್ಸನ್ನು ಕಂಡಿದೆ. ಇದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಬಹುದು.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲಿ ಈ ಬಹುಬೇಡಿಕೆಯ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು ಪ್ರಸ್ತುತ ಬೇಡಿಕೆಯನ್ನು ಪೂರೈಸಲು 4 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಘೋಷಿಸಿದೆ. ಹೊಸ ಟೋಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಇ

ಟೊಯೊಟಾ ಹೊಸ ಕೂಪೆ
ಮಾರುತಿ ಸುಜುಕಿ ಹೊಸ ಕೂಪೆ ಎಸ್‌ಯುವಿಯಲ್ಲಿ ಕೆಲಸ ಮಾಡುತ್ತಿದೆ ಅದು ವಿಟಾರಾ ಬ್ರೆಝಾ ಕೆಳಗಿನ ಸ್ಥಾನದಲ್ಲಿರುತ್ತದೆ. ಇದು YTB ಎಂಬ ಸಂಕೇತನಾಮವನ್ನು ಹೊಂದಿದೆ ಮತ್ತು ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನೊಂದಿಗೆ ಬಹಳಷ್ಟು ಅಂಡರ್‌ಪಿನ್ನಿಂಗ್‌ಗಳನ್ನು ಹಂಚಿಕೊಳ್ಳಲಿದೆ. ಟೊಯೊಟಾ ಕೂಡ ಅದೇ ಕಾಂಪ್ಯಾಕ್ಟ್ ಎಸ್‌ಯುವಿಯ ತಮ್ಮ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಟೊಯೊಟಾ RAV4
ಟೊಯೊಟಾ RAV4 ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಕಳೆದ ವರ್ಷ, ಟೊಯೋಟಾ ಸಿಬಿಯು ಮಾರ್ಗದ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ RAV4 ಅನ್ನು ಪ್ರಾರಂಭಿಸಲು ಪರಿಗಣಿಸುತ್ತಿದೆ ಎಂಬ ವದಂತಿಗಳಿತ್ತು. ಇದರಲ್ಲಿ 2.5-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ.

ಟೊಯೊಟಾ ಬೆಲ್ಟಾ
ಟೊಯೊಟಾ ಮುಂದಿನ ವರ್ಷ ಭಾರತದಲ್ಲಿ ಮಾರುತಿ ಸುಜುಕಿ ಸಿಯಾಜ್ ಆಧಾರಿತ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪರಿಚಯಿಸಲು ಯೋಜಿಸಿದೆ. ಈಗ ಸ್ಥಗಿತಗೊಂಡಿರುವ ಯಾರಿಸ್ ಬದಲಿಗೆ ಇದು ಹೆಜ್ಜೆ ಹಾಕಲಿದೆ. ಜಪಾನಿನ ಕಾರು ತಯಾರಕರು ಟೊಯೋಟಾ ಬೆಲ್ಟಾವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಹೊಸ ಕಾರು ಸಿಯಾಜ್ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆಯಲಿದೆ,

ಟೊಯೊಟಾ ಬೆಲ್ಟಾವು ಮಾರುತಿ ಸೆಡಾನ್‌ನಂತೆಯೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ರೀಬ್ಯಾಡ್ಜ್ ಆವೃತ್ತಿಯಲ್ಲಿ ಟೊಯೊಟಾ ಬ್ಯಾಡ್ಜ್ ಸೇರಿದಂತೆ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಮೂಲ ಮಾದರಿಗಿಂತ ರೀಬ್ಯಾಡ್ಜ್ ಕಾರನ್ನು ತುಸು ಆಕರ್ಷಕಗೊಳಿಸುವುದಕ್ಕಾಗಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೊಸ ರೀಬ್ಯಾಡ್ಜ್ ಕಾರು ಮೂಲ ಸಿಯಾಜ್ ಕಾರು ಮಾದರಿಗಿಂತಲೂ ತುಸು ದುಬಾರಿಯಾಗಲಿದೆ.

ಟೊಯೊಟಾ ರೂಮಿಯನ್
ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7-ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸಲಾಗುವುದು ಎಂದು ತಿಳಿಯುತ್ತದೆ. ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿ ಮಾದರಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ.

ಅಲ್ಲದೇ ಕೈಗೆಟುಕು ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದು. ಟೊಯೊಟಾ ರೂಮಿಯನ್ (Toyota Rumion) ಎಂದು ಕರೆಯಲ್ಪಡುವ ಹೊಸ ಎಂಪಿವಿ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾವನ್ನು ಹೋಲುತ್ತದೆ. ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿ ತನ್ನನ್ನು ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಟೊಯೊಟಾ ಅರ್ಬನ್ ಕ್ರೂಸರ್
ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ರಿಬ್ಯಾಡ್ಜ್ ಮಾದರಿಯಾಗಿದೆ. ಈ ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ತನ್ನದೇ ಆದ ಖ್ಯಾತಿಯನ್ನು ಯಶಸ್ವಿಯಾಗಿ ನಿರ್ಮಿಸಿದೆ ಈ ಟೊಯೊಟಾ ಎಸ್‍ಯುವಿಯು ಪ್ರತಿ ತಿಂಗಳು ಯೋಗ್ಯವಾದ ಮಾರಾಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗುತ್ತಿದೆ.

ಈ ಟೊಯೊಟಾ ಅರ್ಬನ್ ಕ್ರೂಸರ್ ಬದಲಾವಣೆಗೆ ಒಳಗಾಗಲು ಸಿದ್ಧವಾಗಿದೆ. ಪ್ರಮುಖ ಬದಲಾವಣೆಗಳೊಂದಿಗೆ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಟೊಯೊಟಾ ಗ್ಲಾಂಜಾ
ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಲೆನೊ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಟೊಯೊಟಾ ಕಂಪನಿ ಕೂಡ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾದ ಗ್ಲಾಂಜಾವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಮಾರುತಿ ಸುಜುಕಿ ಬಲೆನೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವುದರಿಂದ ಟೊಯೊಟಾ ಗ್ಲಾಂಜಾ ಕಾರು ಕೂಡ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಟೊಯೊಟಾ ಗ್ಲಾಂಝಾ ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿರುವುದರಿಂದ, ಜಪಾನಿನ ತಯಾರಕರು ನವೀಕರಿಸಿದ ಮಾರುತಿ ಸುಜುಕಿ ಬಲೆನೊವನ್ನು ಆಧರಿಸಿ ಹೊಸ ಗ್ಲಾಂಜಾವನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹೊಸ ಟೊಯೊಟಾ ಗ್ಲಾಂಝಾ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಹೊಸ ಚಿತ್ರಗಳು ಮುಂಬರುವ ಹ್ಯಾಚ್‌ಬ್ಯಾಕ್‌ನ ಹಿಂಭಾಗ ಮತ್ತು ಬದಿಗಳನ್ನು ವಿವರಿಸುತ್ತದೆ, ಹೊಸ ಬಲೆನೊದಿಂದ ಸ್ವಲ್ಪ ವ್ಯತ್ಯಾಸವನ್ನು ತೋರಿಸುತ್ತದೆ


Click it and Unblock the Notifications