ದೀಪಾವಳಿ ಹಬ್ಬದ ಪ್ರಯುಕ್ತ ಫೋಕ್ಸ್‌ವ್ಯಾಗನ್ ಟೈಗನ್, ವರ್ಟಸ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್‌ಗಾಗಿ ಕೆಲವು ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿದ್ದಾರೆ. ಈ ಭರ್ಜರಿ ಆಪರ್ ಗಳಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರಾಟವನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ.

ಫೋಕ್ಸ್‌ವ್ಯಾಗನ್ ತನ್ನ ಟೈಗನ್ ಎಸ್‌ಯುವಿ ಮೇಲೆ 80,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯ ಟಾಪ್-ಸ್ಪೆಕ್ ಜಿಟಿ ಟ್ರಿಮ್ ದೊಡ್ಡ 1.5-ಲೀಟರ್ ಟಿಎಸ್‌ಐ ಎಂಜಿನ್ ಮತ್ತು ಡಿಎಸ್‌ಜಿ ಗೇರ್‌ಬಾಕ್ಸ್‌ನೊಂದಿಗೆ ರೂ 30,000 ರಿಯಾಯಿತಿಯನ್ನು ನೀಡಿದೆ. ಆದರೆ ಅದೇ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್‌ನೊಂದಿಗೆ ಜೋಡಿಸಲಾಗಿದೆ. ಈ ಮಾದರಿಗೆ 80,000 ರೂ. ವರೆಗಿನ ರಿಯಾಯಿತಿಯನ್ನು ಘೋಷಿಸಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯ ಮೂಲ ರೂಪಾಂತರವು ರೂ 30,000 ವರೆಗಿನ ಪ್ರಯೋಜನಗಳೊಂದಿಗೆ ಬರುತ್ತದೆ, ಇನ್ನು ಟೈಗನ್ ಎಸ್‌ಯುವಿಯ ಉಳಿದ ರೂಪಾಂತರಗಳು ರೂ 55,000 ವರೆಗಿನ ರಿಯಾಯಿತಿಗಳನ್ನು ನೀಡಿದೆ.

ಇನ್ನು ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಕಂಫರ್ಟ್‌ಲೈನ್ ಮತ್ತು ಹೈಲೈನ್ ರೂಪಾಂತರಗಳಿಗೆ 30,000 ರೂ.ವರೆಗಿನ ರಿಯಾಯಿತಿಗಳನ್ನು ಘೋಷಿಸಿದೆ. ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್‌ನ ಟಾಪ್-ಸ್ಪೆಕ್ ಜಿಟಿ ಟ್ರಿಮ್ ರೂ 10,000 ವರೆಗೆ ರಿಯಾಯಿತಿಯನ್ನು ಪಡೆಯುತ್ತದೆ.

ನೀವು ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಅಥವಾ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಹಬ್ಬದ ಸೀಸನ್ ನಲ್ಲಿ ಖರೀದಿಸಲು ಉತ್ತಮ ಅವಕಾಶವಾಗಿದೆ. ಇದಕ್ಕೂ ಮೊದಲು, ಜರ್ಮನಿಯ ವಾಹನ ತಯಾರಕ ಕಂಪನಿಯು ತನ್ನ ಮಾದರಿಗಳ ಬೆಲೆಗಳನ್ನು ಶೇಕಡಾ 2 ರಷ್ಟು ಹೆಚ್ಚಿಸಿದೆ ಏಕೆಂದರೆ ಇತ್ತೀಚಿನ ಇನ್‌ಪುಟ್ ವೆಚ್ಚದಲ್ಲಿ ಹೆಚ್ಚಳವಾಗಿದೆ.

ನವೀಕರಿಸಿದ ಬೆಲೆಗಳು ಈ ತಿಂಗಳ ಆರಂಭದಿಂದ ಜಾರಿಯಲ್ಲಿದ್ದರೂ, ಇತ್ತೀಚೆಗೆ ಪರಿಚಯಿಸಲಾದ ಕೊಡುಗೆಗಳು ಮತ್ತು ರಿಯಾಯಿತಿಗಳು ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಟೈಗುನ್ ಅನ್ನು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿಸುತ್ತವೆ.

ಮೊದಲಿಗೆ ಟೈಗನ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಇಂಡಿಯಾ ಈ ಟೈಗನ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಇದು ಭಾರತದಲ್ಲಿ ಫೋಕ್ಸ್‌ವ್ಯಾಗನ್‌ನಿಂದ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ.

ಭಾರತದಲ್ಲಿ ವೋಕ್ಸ್‌ವ್ಯಾಗನ್ ಟೈಗನ್‌ನ ಒಂದು ವರ್ಷದ ನೆನಪಿಗಾಗಿ, ಈ ಜರ್ಮನ್ ಕಾರು ತಯಾರಕರು ಇತ್ತೀಚೆಗೆ ಎಸ್‍ಯುವಿಯ ಮೊದಲ ಆ್ಯನಿರ್ವಸರಿ ಎಡಿಷನ್ ಅನ್ನು ಪರಿಚಯಿಸಿದರು. ಟೈಗನ್ ಆ್ಯನಿರ್ವಸರಿ ಎಡಿಷನ್ ಕರ್ಕುಮಾ ಯೆಲ್ಲೋ ಮತ್ತು ಲ್ಡ್ ಚೆರ್ರಿ ರೆಡ್ ಪೇಂಟ್ ಸ್ಕೀಮ್‌ಗಳೊಂದಿಗೆ ಹೊಸ 'ರೈಸಿಂಗ್ ಬ್ಲೂ' ಬಣ್ಣದಲ್ಲಿ ಲಭ್ಯವಿದೆ. ಟೈಗನ್ ಆ್ಯನಿರ್ವಸರಿ ಎಡಿಷನ್ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದರೂ, ವೈಶಿಷ್ಟ್ಯಗಳ ಪಟ್ಟಿ ಮತ್ತು ಮೆಕ್ಯಾನಿಕಲ್‌ಗಳು ಮೊದಲಿನಂತೆಯೇ ಇದೆ.

ಈ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯನ್ನು ಮೊದಲು 2020 ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಮಾದರಿ ಬಹುತೇಕ ಪ್ರೊಡಕ್ಷನ್ ರೀಡ್ ಮಾಡೆಲ್ ಆಗಿತ್ತು. ಈ ಎಸ್‍ಯುವಿಯ ಟಿವಿಸಿಯಲ್ಲಿ, ಟೈಗನ್ ಅನ್ನು ಓಡಿಸಲು ಮೋಜಿನ ಮತ್ತು ಪವರ್ ಫುಲ್ ಕಾರ್ ಎಂದು ಚಿತ್ರಿಸಲಾಗಿದೆ, ಇದು MQB A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಈ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಡೈನಾಮಿಕ್ ಟ್ರಿಮ್ ಅಡಿಯಲ್ಲಿರುವ ರೂಪಾಂತರಗಳು 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, ಪರ್ಫಾರ್ಮೆನ್ಸ್ ಮಾದರಿಯು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದರಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದರೊಂದಿಗೆ 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಲಭ್ಯವಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ ಮಾದರಿಯು ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ದೇಶದಲ್ಲಿ ವೆಂಟೊ ಮಾದರಿಯ ಬದಲಿಯಾಗಿದೆ, ಇದು ಅದರ ಬದಲಿಗಿಂತ ದೊಡ್ಡದಾಗಿದೆ ಮತ್ತು ಸುಸಜ್ಜಿತವಾಗಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಸೆಡಾನ್ 4561 ಮಿಮೀ ಉದ್ದ, 1752 ಎಂಎಂ ಅಗಲ ಮತ್ತು 1507 ಎಂಎಂ ಎತ್ತರವನ್ನು 2651 ಎಂಎಂ ವ್ಹೀಲ್‌ಬೇಸ್ ಅನ್ನು ಒಳಗೊಂಡಿದೆ.

ಫೋಕ್ಸ್‌ವ್ಯಾಗನ್ ವರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ,

ಫೋಕ್ಸ್‌ವ್ಯಾಗನ್ ಕಂಪನಿಯು ವಿರ್ಟಸ್ ಕಾರಿನ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಎಸ್ ಜೊತೆಗೆ ಎಬಿಎಸ್, ಪಾರ್ಕಿಂಗ್ ಸೆನ್ಸರ್ ಮತ್ತು ಹೆಚ್ಚಿನವು. ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC),ಟೈರ್ ಒತ್ತಡದ ಡಿಫ್ಲೇಶನ್ ಅಲರ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಇತರ ಫೀಚರ್ಸ್ ಗಳನ್ನು ನೀಡಲಾಗಿದೆ.


Click it and Unblock the Notifications








