Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಗ್ರಾಹಕನಿಗೆ ಸ್ಪಂಧಿಸದ ಕಾರು ಕಂಪನಿ: ಸಮಸ್ಯೆಯನ್ನು ವಿಡಿಯೋ ಮಾಡಿ ವೈರಲ್ ಮಾಡಿದ ಮಾಲೀಕ
ಭಾರತದಲ್ಲಿ ಬೇಸಿಗೆ ಬಂದರೆ ಸಾಕು ಜನರು ಬಿಸಿಲಿನ ಬೇಗೆ ತಾಳಲಾರದೆ AC ಮೊರೆ ಹೋಗುತ್ತಾರೆ. ಇನ್ನು ಕಾರುಗಳ ವಿಷಯಕ್ಕೆ ಬಂದರೆ AC ಇಲ್ಲದೇ ಕಾರು ಮುಂದೆ ಸಾಗದು. ಆದರೆ ಕೆಲವು ಕಂಪನಿಗಳ ಕಾರುಗಳಲ್ಲಿ AC ಸಮಸ್ಯೆಗಳಿದ್ದು, ಬಳಕೆದಾದರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಭಾರತದಲ್ಲಿ ಸ್ಕೋಡಾ-ಫೋಕ್ಸ್‌ವ್ಯಾಗನ್ ಮಾರಾಟದ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕುಶಾಕ್, ಟೈಗುನ್ ಮತ್ತು ಸ್ಲಾವಿಯಾದಂತಹ ಕಾರುಗಳು ಆಯಾ ವಿಭಾಗಗಳಲ್ಲಿ ಜನಪ್ರಿಯ ಆಯ್ಕೆಗಳಾಗಿ ಹೊರಹೊಮ್ಮಿವೆ. ಆದರೆ ಈ ಮಾದರಿಗಳ ಕುರಿತು ಇತ್ತೀಚಿನ ವಿಮರ್ಶೆಗಳು ಹಲವಾರು ಬಳಕೆದಾರರ AC ಯೊಂದಿಗೆ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿವೆ.

1.0-ಲೀಟರ್ ಪೆಟ್ರೋಲ್ ಮೋಟರ್ ಹೊಂದಿರುವ ಕುಶಾಕ್, ಟೈಗುನ್ ಮತ್ತು ಸ್ಲಾವಿಯಾ ರೂಪಾಂತರಗಳಿಗೆ ಈ ಸಮಸ್ಯೆಗಳು ಹೆಚ್ಚಾಗಿ ಅನ್ವಯಿಸುತ್ತವೆ. ಇದಕ್ಕೆ ಸಾಕ್ಷ್ಯವೆಂಬಂತೆ ಹೊಚ್ಚ ಹೊಸ ಟೈಗುನ್ ಕಾರಿನ ಮಾಲೀಕರೊಬ್ಬರು ಎಸಿಯೊಂದಿಗಿನ ಸಮಸ್ಯೆಗಳನ್ನು ವಿವರಿಸುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

VW ಟೈಗುನ್ AC ಸಮಸ್ಯೆ
ಸ್ಕೋಡಾ-ಫೋಕ್ಸ್‌ವ್ಯಾಗನ್ ಕಾರುಗಳ ಮಾಲೀಕರು ಮೊದಲೇ ಹೇಳಿದಂತೆ, ವಾಹನವು ನಿಧಾನಗತಿಯಲ್ಲಿ ಸಾಗುತ್ತಿರುವಾಗ ಎಸಿ ಸಮಸ್ಯೆ ಉಂಟಾಗುತ್ತದೆ. ಕಾರು ಭಾರೀ ದಟ್ಟಣೆಯಲ್ಲಿ ಚಲಿಸಿದಾಗಲೆಲ್ಲಾ ಈ ಸಮಸ್ಯೆ ಇದ್ದೇ ಇದೆ. ಕಡಿಮೆ ವೇಗದಲ್ಲಿದ್ದಾಗ ಕಂಪ್ರೆಷರ್ ಸ್ಥಗಿತಗೊಂಡು ತಾಪಮಾನ ಏರಲು ಪ್ರಾರಂಭವಾಗುತ್ತದೆ.

ಇದನ್ನು ಸಕ್ಷ್ಯಾಧಾರಗಳ ಮೂಲಕ ವಿವರಿಸಲು ಕಾರು ಮಾಲೀಕ ಡಿಜಿಟಲ್ ಥರ್ಮಾ ಮೀಟರ್ ಸಹಾಯದಿಂದ ಎಸಿ ಸಮಸ್ಯೆಯನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಡಿಜಿಟಲ್ ಥರ್ಮಾಮೀಟರ್ ತಾಪಮಾನವನ್ನು ನಿಖರವಾಗಿ ದಾಖಲಿಸುತ್ತದೆ. ಹಾಗಾಗಿ ಇದನ್ನು ನೇರವಾಗಿ AC ವೆಂಟ್‌ಗಳ ಮೇಲೆ ಇಟ್ಟು ಪರಿಕ್ಷೀಸಿದ್ದಾರೆ.

ಕಾರಿನೊಳಗೆ ಹೆಜ್ಜೆಯಿಟ್ಟ ತಕ್ಷಣ ಉಷ್ಣತೆ ಹೆಚ್ಚಾಗಿರುವುದನ್ನು ಡಿಜಿಟಲ್ ಥರ್ಮಾಮೀಟರ್ ತೋರಿಸಿತು. ಇದು ನಿಲ್ಲಿಸಿದ ಪ್ರತಿ ಕಾರುಗಳಲ್ಲಿಯು ಸಾಮಾನ್ಯವಾಗಿ ಕಂಡುಬರುವ ವಿಷಯ. ಅಸಲಿ ಕಥೆ ವಾಹನ ಚಾಲನೆಯಾದ ಮೇಲೆ ಗೊತ್ತಾಗಲಿದೆ. ಬಳಿಕ ಮಾಲೀಕ ತೆರೆದ ರಸ್ತೆಯಲ್ಲಿ ಚಾಲನೆ ಮಾಡಲು ಪ್ರಾರಂಭಿಸುತ್ತಾರೆ, ಅಲ್ಲಿ ಟೈಗುನ್‌ನ AC ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ತಾಪಮಾನ ಮೀಟರ್ ಸುಮಾರು 15 ಡಿಗ್ರಿ ಸೆಲ್ಸಿಯಸ್ ತೋರಿಸುತ್ತದೆ. AC ಸಮಸ್ಯೆಯನ್ನು ಸಾಧ್ಯವಾದಷ್ಟು ಸುಲಭವಾದ ರೀತಿಯಲ್ಲಿ ವಿವರಿಸಲು, ಮಾಲೀಕ ಕಾರನ್ನು ಟ್ರಾಫಿಕ್ ಇರುವ ರಸ್ತೆಗೆ ತೆಗೆದುಕೊಳ್ಳುತ್ತಾರೆ. ಟ್ರಾಫಿಕ್‌ನಲ್ಲಿ ನಿಧಾನವಾಗಿ ಸಾಗುತ್ತಿರುವಾಗ ಮತ್ತು ಗೇರ್‌ಗಳನ್ನು ಆಗಾಗ್ಗೆ ಬದಲಾಯಿಸುವುದರಿಂದ, AC ಕಂಪ್ರೆಸರ್ ಟ್ರಿಪ್ ಆಗಲು ಪ್ರಾರಂಭಿಸುತ್ತದೆ.

ಪರಿಣಾಮವಾಗಿ, AC ಬಿಸಿ ಗಾಳಿಯನ್ನು ಬೀಸಲು ಪ್ರಾರಂಭಿಸಿದಾಗ ಕಾರು ಬೆಚ್ಚಗಾಗಲು ಪ್ರಾರಂಭಿಸುತ್ತದೆ. ತೆರೆದ ರಸ್ತೆಗಳಲ್ಲಿ ತಂಪಾದ 15 ಡಿಗ್ರಿ ಸೆಲ್ಸಿಯಸ್ ತೋರಿಸಿದ ಥರ್ಮಾ ಮೀಟರ್, ಬಿಡುವಿಲ್ಲದ ಟ್ರಾಫಿಕ್‌ನಲ್ಲಿ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗುತ್ತದೆ.

ನಂತರ ಟೈಗುನ್ ಅನ್ನು ತೆರೆದ ರಸ್ತೆಗೆ ಹಿಂತಿರುಗಿಸಿದಾಗ, ಎಸಿ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಅಲ್ಲದೇ ಕಾರು ಚಾಲನೆಯಲ್ಲಿಲ್ಲದಿದ್ದಾಗಲೂ AC ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ.

ಪ್ರತಿಕ್ರಿಯಿಸದ ಗ್ರಾಹಕ ಆರೈಕೆ ಕೇಂದ್ರ
ಟೈಗುನ್ ಮಾಲೀಕರಿಗೆ ಮತ್ತೊಂದು ನಿರಾಶೆಯೆಂದರೆ ಫೋಕ್ಸ್‌ವ್ಯಾಗನ್ ಗ್ರಾಹಕ ಆರೈಕೆ ಕೇಂದ್ರವು ಈ ವಿಷಯದಲ್ಲಿ ಯಾವುದೇ ಸಹಾಯವನ್ನು ಮಾಡಲಿಲ್ಲ. ಕಸ್ಟಮರ್ ಕೇರ್ ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದಾರೆ. ಸೇವಾ ಕೇಂದ್ರಕ್ಕೆ ಸಂಬಂಧಿಸಿದಂತೆ, ಅವರು ಯಾವುದೇ ಉಪಯುಕ್ತ ಪರಿಹಾರಗಳನ್ನು ಒದಗಿಸುವುದಿಲ್ಲ ಎಂದು ಮಾಲೀಕರು ಆರೋಪಿಸಿದ್ದಾರೆ.

ಕಂಪ್ರೆಷರ್‌ನಲ್ಲಿ ಹೆಚ್ಚಾಗಿ ಎಸಿ ಸಂಬಂಧಿತ ಸಲಕರಣೆಗಳನ್ನು ಜೋಡಣೆ ಮಾಡಿ ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಕಂಪನಿ ಮುಂದಾಗಬೇಕಿದೆ. ಎಸಿ ಸಮಸ್ಯೆಗೆ ನಿಖರವಾದ ಕಾರಣವೇನು ಎಂಬುದನ್ನು ಗುರುತಿಸಲಾಗಿಲ್ಲ. ಸಣ್ಣ ಸಾಮರ್ಥ್ಯದ 1.0-ಲೀಟರ್ ಎಂಜಿನ್‌ನಿಂದಾಗಿ ಸಮಸ್ಯೆ ಉಂಟಾಗಬಹುದು ಎಂದು ಕೆಲವರು ಬಳಕೆದಾರರು ಹೇಳುತ್ತಿದ್ದಾರೆ.

ಇದು ಕಾರಿನ ECU ನಲ್ಲಿ ಸಮಸ್ಯೆಯಾಗಿರಬಹುದು ಎಂದು ಇತರ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಆದರೂ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈ ವೀಡಿಯೊ ಸದ್ಯ ವೈರಲ್ ಆಗಿದ್ದು, ಕಂಪನಿಯಲ್ಲಿ ನಿರ್ಧಾರ ತೆಗೆದುಕೊಳ್ಳುವವರನ್ನು ತಲುಪುವುದರೊಂದಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬಹುದು.