ಪ್ರಮುಖ ಕಾರುಗಳಿಗೆ ವರ್ಷಾಂತ್ಯದ ರಿಯಾಯಿತಿಗಳು: ಬರೋಬ್ಬರಿ 2.5 ಲಕ್ಷ ರೂಪಾಯಿವರೆಗೆ...
ಇನೇನು ಕೇವಲ ಒಂದೇ ದಿನದಲ್ಲಿ ಈ ವರ್ಷ (2022) ಕೊನೆಗೊಳ್ಳುತ್ತಿದೆ. ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಜೀಪ್ ಸೇರಿದಂತೆ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ಕಾರು ಖರೀದಿದಾರರಿಗೆ ಲಾಭದಾಯಕ ಡೀಲ್‌ಗಳನ್ನು ಘೋಷಿಸಿವೆ. ಈ ಡಿಸೆಂಬರ್‌ನಲ್ಲಿ ಯಾವ ಕಾರಿಗೆ ಅತ್ಯುತ್ತಮ ವರ್ಷಾಂತ್ಯದ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.
ಜೀಪ್ ಮೆರಿಡಿಯನ್ & ಕಂಪಾಸ್:
ದೇಶೀಯ ಮಾರುಕಟ್ಟೆಯಲ್ಲಿ ಈ ಹಿಂದೆ, 'ಜೀಪ್' ಕಂಪನಿ ಮೆರಿಡಿಯನ್ ಎಸ್‌ಯುವಿ ಪರಿಚಯಿಸಿತ್ತು. ಇದು 170 bhp ಪವರ್ ಉತ್ಪಾದಿಸುವ 2.0L ಡೀಸೆಲ್ ಎಂಜಿನ್ ಹೊಂದಿದ್ದು, ರೂ.2.5 ಲಕ್ಷದವರೆಗಿನ ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ. ಅಲ್ಲದೆ, ಜೀಪ್ ಕಂಪಾಸ್ ಲಾಯಲ್ಟಿ ಬೋನಸ್, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಕೊಡುಗೆ ಸೇರಿದಂತೆ ಒಟ್ಟು 1.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಪಡೆದುಕೊಂಡಿದೆ. ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

ಸ್ಕೋಡಾ ಕುಶಾಕ್/ VW ಟೈಗುನ್:
ಭಾರತದಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗೆ ಸ್ಕೋಡಾ ಕುಶಾಕ್ ಪ್ರತಿಸ್ಪರ್ಧಿಯಾಗಿದೆ. ಇದು 1.0L ಅಥವಾ 1.5L ಪೆಟ್ರೋಲ್ ಎಂಜಿನ್ ಹೊಂದಿದೆ. ಕುಶಾಕ್ ಖರೀದಿದಾರರಿಗೆ ಕಂಪನಿಯು ಒಟ್ಟು 1.25 ಲಕ್ಷ ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. VW ಟೈಗುನ್ ಹೊಸ MQB A0 IN ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾದ ಕಂಪನಿಯ ಮೊದಲ ಎಸ್‌ಯುವಿ ಆಗಿದೆ. ಕುಶಾಕ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ನೀವು ಆಯ್ಕೆ ಮಾಡುವ ರೂಪಾಂತರವನ್ನು ಅವಲಂಬಿಸಿ ರೂ.1 ಲಕ್ಷದವರೆಗಿನ ರಿಯಾಯಿತಿ ದೊರೆಯುತ್ತದೆ.
ಟಾಟಾ ಸಫಾರಿ/ ಹ್ಯಾರಿಯರ್:
ದೇಶದ ಅತಿ ದೊಡ್ಡ ವಾಹನ ತಯಾರಿಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್, ಸಫಾರಿ ಮತ್ತು ಟಾಟಾ ಹ್ಯಾರಿಯರ್ ಕಾರುಗಳಿಗೆ ಬರೋಬ್ಬರಿ ರೂ.1 ಲಕ್ಷವರೆಗೆ ಗರಿಷ್ಠ ರಿಯಾಯಿತಿ ಕೊಡುಗೆಯನ್ನು ನೀಡುತ್ತಿದೆ. ಇದು 170 ಎಚ್‌ಪಿ ಗರಿಷ್ಠ ಪವರ್ ಉತ್ಪಾದನೆ ಮಾಡುವ ಸಾಮರ್ಥ್ಯವಿರುವ 2.0.ಲೀ ಡೀಸೆಲ್ ಎಂಜಿನ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಮುಂದಿನ ವರ್ಷದ ಆರಂಭದಲ್ಲಿ ದೇಶದಲ್ಲಿ ಪರಿಚಯಿಸಲಾಗುವ ಈ ಎರಡು ಎಸ್‌ಯುವಿಗಳ ಫೇಸ್‌ಲಿಫ್ಟ್ ಆವೃತ್ತಿ ಸಂಬಂಧ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ಮಹೀಂದ್ರಾ XUV300 & ನಿಸ್ಸಾನ್ ಕಿಕ್ಸ್:
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ XUV300 ಖರೀದಿ ಮೇಲೆ ಬರೋಬ್ಬರಿ ರೂ.75000ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರು, ಮೂರು ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗುತ್ತಿದೆ. ಅವುಗಳೆಂದರೇ, 110 hp, 1.2L ಟರ್ಬೊ ಪೆಟ್ರೋಲ್, 131 hp, 1.2L ಟರ್ಬೊ ಪೆಟ್ರೋಲ್, ಮತ್ತು 117 hp, 1.5L ಟರ್ಬೊ ಡೀಸೆಲ್. ಇನ್ನು, ನಿಸ್ಸಾನ್ ಕಿಕ್ಸ್ ಸಹ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಎಸ್‌ಯುವಿ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸ್ಥಗಿತವಾಗಲಿದೆ. ಪ್ರಸ್ತುತ ಕಿಕ್ಸ್‌ಗೆ ರೂ.70,000 ವರೆಗಿನ ರಿಯಾಯಿತಿ ದೊರೆಯಲಿದೆ.
ಹೋಂಡಾ WR-V & ಹೋಂಡಾ ಸಿಟಿ 5-ಜೆನ್:
ಜಪಾನಿನ ಕಾರು ತಯಾರಕ ಕಂಪನಿ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ WR-V ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದ್ದು, ಈ ಕಾರು ಕೊಳ್ಳುವ ಹೊಸ ಖರೀದಿದಾರರಿಗೆ ರೂ.75,000 ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಹೋಂಡಾ ಸಿಟಿ ಜೆನ್-5, ಅತ್ಯಂತ ಆರಾಮದಾಯಕ, ಪ್ರೀಮಿಯಂ ಮತ್ತು ವಿಶ್ವಾಸಾರ್ಹ ಕಾರು ಆಗಿದೆ. ಅದರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ, ಕ್ಯಾಬಿನ್ ಉತ್ತಮವಾಗಿದೆ. ಬ್ರ್ಯಾಂಡ್, ಪ್ರಸ್ತುತ ಈ ತಿಂಗಳು ಹೋಂಡಾ ಸಿಟಿ 5-ಜೆನ್ ಕಾರಿಗೆ ರೂ.75,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ:
ಬ್ರ್ಯಾಂಡ್‌ನ ಲೈನ್-ಅಪ್‌ನಲ್ಲಿ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಹ ಒಂದಾಗಿದೆ. ಇದು 67 ಎಚ್‌ಪಿ ಗರಿಷ್ಠ ಪವರ್ ಉತ್ಪಾದಿಸುವ 1.0 ಲೀ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, ಖರೀದಿದಾರರು ಐಚ್ಛಿಕವಾಗಿ CNG ಪವರ್‌ಟ್ರೇನ್ ಅನ್ನು ಸಹ ಆರಿಸಿಕೊಳ್ಳಬಹುದು.ಈ ಹೊಸ ಎಸ್-ಪ್ರೆಸ್ಸೊಗೆ ಕಂಪನಿಯು ಗರಿಷ್ಠ 75,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 4.25 ಲಕ್ಷದಿಂದ 6.10 ಲಕ್ಷ ರೂಪಾಯಿ ನಡುವೆ ಇದೆ ಎಂದು ಹೇಳಬಹುದು.
ಮಾರುತಿ ಸುಜುಕಿ ಸೆಲೆರಿಯೊ & ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಟರ್ಬೊ:
ದೇಶದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸೆಲೆರಿಯೊಗೆ ರಿಯಾಯಿತಿ ಪ್ರಯೋಜನಗಳು ರೂ.75000ವರೆಗೆ ದೊರೆಯುತ್ತಿದೆ. ಅದರ ಪವರ್‌ಟ್ರೇನ್ ಆಯ್ಕೆಗಳನ್ನು ಎಸ್-ಪ್ರೆಸ್ಸೊದಂತೆಯೇ ಇದೆ. ಇನ್ನು, ನಿಯೋಸ್ ಗ್ರ್ಯಾಂಡ್ i10, ಅತ್ಯಂತ ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಆಗಿದ್ದು, 1.0L ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದೆ. ಇದು 100 hp ಪವರ್, 172 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಈ ತಿಂಗಳು ಗ್ರ್ಯಾಂಡ್ i10 ಖರೀದಿಸುವವರಿಗೆ ಬ್ರಾಂಡ್ 1 ಲಕ್ಷ ರೂಪಾಯಿ ರಿಯಾಯಿತಿ ಕೊಡುಗೆಯನ್ನು ನೀಡುತ್ತಿದೆ.


Click it and Unblock the Notifications








