15 “ಅಂಬಾರಿ ಉತ್ಸವ” ಹೈಟೆಕ್ ಸ್ಲೀಪರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಹೆಸರು ಮಾಡಿರುವ ಕರ್ನಾಟಕ ರಸ್ತೆ ಸಾರಿಗೆ ನಿಗಮವು 50 ವೋಲ್ವೋ ಸ್ಲೀಪರ್ ಬಸ್‌ಗಳ ಪೈಕಿ ಮೊದಲ ಹಂತವಾಗಿ ಇಂದು 15 "ಅಂಬಾರಿ ಉತ್ಸವ" ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿದೆ. ಈ ಬಸ್‌ಗಳು ಹೈಟೆಕ್ ತಂತ್ರಜ್ಞಾನ, ಉತ್ತಮ ವಿನ್ಯಾಸ, ಐಷಾರಾಮಿ ಒಳಾಂಗಣ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾರಸಾ ನಿಗಮದ ವೋಲ್ವೋ ಬಿಎಸ್- VI 9600s ಮಾದರಿಯ ಮಲ್ಟಿ ಆಕ್ಸಲ್ "ಅಂಬಾರಿ ಉತ್ಸವ" ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ - ಹಂತವಾಗಿ 350 ಎಲೆಕ್ಟ್ರಿಕ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ ಎಂದು ಇಲಾಖೆ ತಿಳಿಸಿದೆ.

15 “ಅಂಬಾರಿ ಉತ್ಸವ” ಹೈಟೆಕ್ ಸ್ಲೀಪರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ವೋಲ್ವೋ ಮಲ್ಟಿ ಆಕ್ಸಲ್ ಬಸ್ ವಿಶೇಷತೆಗಳು
ಬಸ್‌ನಲ್ಲಿ 40 ಆಸನಗಳ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ. KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.

KSRTC ವೋಲ್ವೋ-9600s ಮಾದರಿಯ ವಾಹನದ ಮುಂಭಾಗವು ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದ್ದು, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನವನ್ನು ಉಳಿತಾಯ ಮಾಡುತ್ತದೆ. ಹೊಸದಾಗಿ ವಿನ್ಯಾಸಗೊಳಿಸಿದ ಪನೊರಮಿಕ್ ವಿಂಡೋಗಳನ್ನು ಹೊಂದಿರುವ KSRTC ವೋಲ್ವೋ- 9600s ವಾಹನವು ಪ್ರಯಾಣಿಕರಿಗೆ ಪನಾರಮಿಕ್ ನೋಟವನ್ನು ನೀಡುತ್ತದೆ.

15 “ಅಂಬಾರಿ ಉತ್ಸವ” ಹೈಟೆಕ್ ಸ್ಲೀಪರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ವಾಹನದ ಹೊರಭಾಗದ ಭವ್ಯತೆಗೆ V-ಆಕಾರದ ಹೆಡ್-ಲೈಟ್‌ಗಳು ವಿಶಿಷ್ಟವಾದ ಲುಕ್ ನೀಡುತ್ತದೆ. ಹೊಸ ಸುಧಾರಿತ PX ಸಸ್ಪೆನ್ಶನ್ ಸ್ಟೀರಿಂಗ್ ಸ್ಟೆಬಿಲಿಟಿ ಮತ್ತು ನಿರ್ವಹಣೆಯನ್ನು ಹೊಂದಿದ್ದು ಇದು ಉತ್ತಮ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಐಷಾರಾಮಿ ವಾಹನಗಳಲ್ಲಿ ಪ್ರಯಾಣಿಸಿದ ಅನುಭವ ನೀಡುವುದಾಗಿ ಹೇಳಲಾಗುತ್ತಿದೆ.

ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಈ ವಾಹನವು ಹೊಂದಿದೆ. ನಿಗಮವು ಆಂತರಿಕವಾಗಿ ತನ್ನ ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಗಾರಗಳಲ್ಲಿಯೇ ಹಳೆಯ 250ಕ್ಕೂ ಹೆಚ್ಚು ವಾಹನಗಳನ್ನು ಆಂತರಿಕ ಸಂಪನ್ಮೂಲಗಳಿಂದಲೇ ನವೀಕರಣಗೊಳಿಸಿ ಕಾರ್ಯಚರಣೆಗೊಳಿಸುತ್ತಿದೆ.

15 “ಅಂಬಾರಿ ಉತ್ಸವ” ಹೈಟೆಕ್ ಸ್ಲೀಪರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

"ಅಂಬಾರಿ ಉತ್ಸವ" ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆ

  1. ಬೆಂಗಳೂರ- ಸಿಕಂದ್ರಬಾದ್
  2. ಬೆಂಗಳೂರು- ಹೈದ್ರಾಬಾದ್
  3. ಬೆಂಗಳೂರು- ಎರ್ನಾಕುಲಂ
  4. ಬೆಂಗಳೂರು- ತಿರುವನಂತಪುರಂ
  5. ಬೆಂಗಳೂರು- ತ್ರಿಚೂರು
  6. ಬೆಂಗಳೂರು- ಪಣಜಿ
  7. ಕುಂದಾಪುರ- ಬೆಂಗಳೂರು
  8. ಮಂಗಳೂರು- ಪೂನಾ

600 ಹೊಸ ವಾಹನಗಳನ್ನು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆ
ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳನ್ನು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಅಂತರ ನಗರಗಳ ನಡುವೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಈಗಾಗಲೇ 01 Prototype ವಾಹನವು ಯಶಸ್ವಿ ಕಾರ್ಯಾಚರಣೆಗೊಳಿಸಿದ್ದು, ಮಾರ್ಚ್-2023 ರೊಳಗಾಗಿ 50 ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8000 ಅನುಸೂಚಿಗಳಿಂದ 28 ಲಕ್ಷ ಕಿ.ಮೀ ಕ್ರಮಿಸುವುದರ ಮೂಲಕ 28 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ಈ ಮೂಲಕ ನಿಗಮವು ಪ್ರತಿ ದಿನ ರೂ.10 ಕೋಟಿ ಆದಾಯಗಳಿಸುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವೋಲ್ವೋ ಬಿಎಸ್- VI 9600s ಮಾದರಿಯ ಮಲ್ಟಿ ಆಕ್ಸಲ್ ಸ್ಲೀಪರ್ ವಾಹನಗಳಿಗೆ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ "ಅಂಬಾರಿ ಉತ್ಸವ" ಎಂಬ ಬ್ರ್ಯಾಂಡ್ ಹೆಸರು ಮತ್ತು "ಸಂಭ್ರಮದ ಪ್ರಯಾಣ" ಎಂಬ ಟ್ಯಾಗ್ ಲೈನ್ ನೀಡಿದೆ.

Article Published On: Tuesday, February 21, 2023, 13:55 [IST]
English summary
15 ambari utsav sleeper vehicles were inaugurated by cm bommai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+