ಪವರ್‌ಫುಲ್ ಟರ್ಬೋ ಎಂಜಿನ್‌ನೊಂದಿಗೆ ಬರುತ್ತಿದೆ 2023ರ ಹ್ಯುಂಡೈ ಅಲ್ಕಾಜರ್: ಬುಕ್ಕಿಂಗ್ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು 7-ಸೀಟರ್ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದ್ದು, ಈ ಎಸ್‍ಯುವಿಯ 2023ರ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ,

ಇದೀಗ ಹ್ಯುಂಡೈ ಕಂಪನಿಯು 2023ರ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ 2023ರ ಅಲ್ಕಾಜರ್ 3-ಸಾಲಿನ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಮಾದರಿಯನ್ನು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಸಿಗ್ನೇಚರ್ ಹುಂಡೈ ಡೀಲರ್‌ಶಿಪ್‌ಗಳಲ್ಲಿ ರೂ.25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ ಎಂದು ಹ್ಯುಂಡೈ ದೃಢಪಡಿಸಿದೆ.

ಬರುತ್ತಿದೆ 2023ರ ಹ್ಯುಂಡೈ ಅಲ್ಕಾಜರ್: ಬುಕ್ಕಿಂಗ್ ಪ್ರಾರಂಭ

ಹೊಸ 1.5-ಲೀಟರ್ T-GDi 4 ಸಿಲಿಂಡರ್ ಎಂಜಿನ್ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರಿಗೆ ನೀಡಲಾಗುತ್ತದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಂಜಿನ್ ಹ್ಯುಂಡೈನಾದ್ಯಂತ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬದಲಾಯಿಸುತ್ತದೆ. ಹುಂಡೈ ಈಗಾಗಲೇ ಕ್ರೆಟಾ ಲೈನ್-ಅಪ್‌ನಿಂದ 1.4 ಲೀಟರ್ ಟರ್ಬೊ ಎಂಜಿನ್ ಅನ್ನು ತೆಗೆದುಹಾಕಿದೆ.

ಹೊಸ 1.5 ಲೀಟರ್ ಟರ್ಬೊ ಎಂಜಿನ್ RDE (ರಿಯಲ್ ಡ್ರೈವಿಂಗ್ ಎಮಿಷನ್) ಕಂಪ್ಲೈಂಟ್ ಮತ್ತು E20 ಇಂಧನಕ್ಕೆ ಹೊಂದಿಕೊಳ್ಳುತ್ತದೆ. ಈ ಎಂಜಿನ್ 5,500 rpm ನಲ್ಲಿ 160 ಬಿಹೆಚ್‍ಪಿ ಪವರ್ ಮತ್ತು 1,500 rpm ಮತ್ತು 3,500 rpm ನಡುವೆ 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರೊಂದಿಗೆ 7-ಸ್ಫೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅಥವಾ DCT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, 2023ರ ಹ್ಯುಂಡೈ ಅಲ್ಕಾಜರ್ ಕಾರಿನಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಮತ್ತು DCT 18 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆದರೆ ಆಟೋಮ್ಯಾಟಿಕ್ ಆವೃತ್ತಿಯು 17.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯನ್ನು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ,

ಇದು 4,00 0rpm ನಲ್ಲಿ 115 PS ಮತ್ತು 1,500-2,750 rpm ನಲ್ಲಿ 25 0Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2023ರ ಹ್ಯುಂಡೈ ಅಲ್ಕಾಜರ್ ಮಾದರಿಯು ಪ್ರಸ್ತುತ ಮಾದರಿಗೆ ಹೋಲುತ್ತದೆ. ಈ ಹೊಸ ಹ್ಯುಂಡೈ ಎಸ್‌ಯುವಿಯಲ್ಲಿ ಐಡಲ್ ಸ್ಟಾರ್ಟ್ & ಗೋ ಫಂಕ್ಷನ್‌ನೊಂದಿಗೆ ಬರುತ್ತದೆ, ಇದು ಹೆಚ್ಚಿನ ದಕ್ಷತೆಗಾಗಿ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಅನ್ನು ಬಳಸುತ್ತದೆ.

ಈ ಹೊಸ ಮಾದರಿಯು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಮತ್ತು ಎಲ್ಲಾ ವ್ಹೀಲ್ ಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಹ್ಯುಂಡೈ ಅಲ್ಕಾಜಾರ್ ಕ್ರೆಟಾವನ್ನು ಆಧರಿಸಿದೆ ಆದರೆ, ಅದರ ಕೆಲವು ಸ್ಪರ್ಧಿಗಳಿಗಿಂತ ಭಿನ್ನವಾಗಿ, ಹ್ಯುಂಡೈ ಎರಡೂ ಎಸ್‌ಯುವಿಗಳನ್ನು ಪ್ರತ್ಯೇಕಿಸಲು ಕಾರಿನಲ್ಲಿ ಕೆಲವು ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಮಾಡಿದೆ.

ಬರುತ್ತಿದೆ 2023ರ ಹ್ಯುಂಡೈ ಅಲ್ಕಾಜರ್: ಬುಕ್ಕಿಂಗ್ ಪ್ರಾರಂಭ

ಈ ಹ್ಯುಂಡೈ ಅಲ್ಕಾಜರ್ ಮಾದರಿಯನ್ನು 6 ಮತ್ತು 7 ಆಸನಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಅಲ್ಕಾಜಾರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ, ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕಪ್‌ಹೋಲ್ಡರ್‌ಗಳಿವೆ. ಇನ್ನು ಈ ಎಸ್‍ಯುವಿಯ ಡೈವಿಂಗ್ ಸೀಟ್ ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಿಕೊಳ್ಳಬಹುದು. ಇದರ ಎರಡನೇ ಸಾಲಿನ ಸೀಟನ್ನು ಮಡಿಚುವ ಮೂಲಕ ಮೂರನೇ ಸಾಲಿನ ಸೀಟನ್ನು ಸುಲಭವಾಗಿ ಪ್ರವೇಶಿಸಬಹುದು.

Article Published On: Monday, February 27, 2023, 17:20 [IST]
English summary
2023 hyundai alcazar with 1 5l turbo petrol engine bookings open details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+