2023 Kia EV6 ಬುಕಿಂಗ್ಸ್ ಇಂದಿನಿಂದ ಪ್ರಾರಂಭ... ಮೊದಲ 200 ಖರೀದಿದಾರರಿಗೆ ವಿಶೇಷ ಸವಲತ್ತು
ಭಾರತದ ಟಾಪ್ 10 ಕಾರು ಬ್ರಾಂಡ್‌ಗಳ ಪಟ್ಟಿಯಲ್ಲಿ ಅತ್ಯಂತ ವೇಗವಾಗಿ ಸ್ಥಾನ ಗಳಿಸಿರುವ ಕಿಯಾ ಇಂಡಿಯಾ, ತನ್ನ ಅತ್ಯುತ್ತಮ ಮಾರಾಟ ಮಾದರಿಯಾದ 2023 Kia EV6 ಗಾಗಿ ಇಂದಿನಿಂದ (15 ಏಪ್ರಿಲ್) ಬುಕಿಂಗ್ ಅನ್ನು ಮರುಪ್ರಾರಂಭಿಸಿದೆ. ಹಾಗೆಯೇ ಮೊದಲ 200 ಖರೀದಿದಾರರಿಗೆ ವಿಶೇಷ ಮಾಲೀಕತ್ವದ ಸವಲತ್ತುಗಳನ್ನು ಸಹ ನೀಡುತ್ತಿದೆ.
ವಿಶೇಷ ಮಾಲೀಕತ್ವದ ಸವಲತ್ತುಗಳ ಭಾಗವಾಗಿ 30 ದಿನಗಳಲ್ಲಿ ಶೇ95 ಮರುಖರೀದಿ ನೀತಿ, 5 ವರ್ಷಗಳವರೆಗೆ ಉಚಿತ ಆವರ್ತಕ ನಿರ್ವಹಣೆ ಮತ್ತು ಬ್ಯಾಟರಿಯ ಮೇಲೆ 8 ವರ್ಷಗಳು ಅಥವಾ 1,60,000 ಕಿ.ಮೀ ವಾರಂಟಿ ಒಳಗೊಂಡಿವೆ ಎಂದು ಕಂಪನಿ ತಿಳಿಸಿದೆ. 1800 108 5005 ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಅಥವಾ www.kia.com/in ಗೆ ಭೇಟಿ ನೀಡುವ ಮೂಲಕ ಆಯ್ದ ಕಿಯಾ ಡೀಲರ್ ಶಿಪ್‌ಗಳಲ್ಲಿ ಬುಕಿಂಗ್‌ಗಳನ್ನು ಮಾಡಬಹುದು.

EV6 ನ ವಿನ್ಯಾಸ ಮತ್ತು ಉತ್ತಮ ಎಂಜಿನಿಯರಿಂಗ್ ಅನ್ನು Kia ದ ಮೀಸಲಾದ EV ಪ್ಲಾಟ್‌ಫಾರ್ಮ್ ಆಗಿರುವ ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ನಲ್ಲಿ ನಿರ್ಮಿಸಲಾಗಿದೆ. ಅಲ್ಟ್ರಾ ಫಾಸ್ಟ್ DC ಚಾರ್ಜಿಂಗ್ ಮತ್ತು ವೆಹಿಕಲ್ ಟು ಲೋಡ್ (V2L) ಕಾರ್ಯನಿರ್ವಹಣೆಯ ಪ್ರಮಾಣೀಕೃತ 708km ಮತ್ತು ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳ ಹೊರತಾಗಿ, ಹೊಸ EV6 ವಿಶಾಲವಾದ ಹೈಟೆಕ್ ಒಳಾಂಗಣವನ್ನು ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.
Kia ಇಂಡಿಯಾದ CSBO, Mr. Myung-sik Sohn ಮಾತನಾಡಿ, "Kia EV6 ನೊಂದಿಗೆ ಪ್ರೀಮಿಯಂ ರೈಡ್‌ಗಾಗಿ ನೋಡುತ್ತಿರುವ ಗ್ರಾಹಕರಿಗೆ ಹೊಸ ಪರ್ಫಾಮೆನ್ಸ್-ಚಾಲಿತ ಡ್ರೈವ್ ಅನುಭವವು ಈಗ ಲಭ್ಯವಿದೆ. ನಮ್ಮ ಜನಪ್ರಿಯ ಪ್ರೀಮಿಯಂ EV ಆಗಿರುವ, Kia 2023 EV6 ಗಾಗಿ ಬುಕಿಂಗ್‌ಗಳು ಇಂದಿನಿಂದ ಪ್ರಾರಂಭವಾಗಿವೆ. ನಾವು ನಮ್ಮ EV ಡೀಲರ್‌ಶಿಪ್ ಹೆಜ್ಜೆಗುರುತನ್ನು 44 ನಗರಗಳಲ್ಲಿ 60 ಔಟ್‌ಲೆಟ್‌ಗಳಿಗೆ ವಿಸ್ತರಿಸಿದ್ದೇವೆ, ಇದು ನಮ್ಮ ಗ್ರಾಹಕರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ ಎಂದರು.

ಹೊಸ 2023 Kia EV6 ನಮ್ಮ ಹಿಂದಿನ ಮಾದರಿಯ ಮಾರಾಟವನ್ನು ಮೀರಿಸುತ್ತದೆ. ಈ ವರ್ಷ ಮೂರು ಪಟ್ಟು ಬೆಳವಣಿಗೆಯನ್ನು ತರಲು ಸಹಕರಿಸಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ನಮ್ಮ ವ್ಯವಹಾರವನ್ನು ಬೆಳೆಯಲು ಸಹಾಯ ಮಾಡುವುದಲ್ಲದೆ ಸುಸ್ಥಿರ ಭವಿಷ್ಯದತ್ತ ನಮ್ಮನ್ನು ಮುನ್ನಡೆಸುವ ವಿಭಾಗವನ್ನು ನಾವು ಮುನ್ನಡೆಸುತ್ತಿದ್ದೇವೆ ಎಂಬ ಅಪಾರ ಹೆಮ್ಮೆಯನ್ನು ಇದು ನಮಗೆ ತುಂಬುತ್ತದೆ ಎಂದು Kia ಇಂಡಿಯಾದ CSBO, Mr. Myung sik Sohn ಹೇಳಿದರು.
Kia EV6 ರನ್ವೇ ರೆಡ್, ಯಾಚ್ಟ್ ಬ್ಲೂ, ಮೂನ್‌ಸ್ಕೇಪ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ಸ್ನೋ ವೈಟ್ ಪರ್ಲ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ 2023 Kia EV6, GT ಲೈನ್ ಮತ್ತು GT ಲೈನ್ AWD ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಕ್ರಮವಾಗಿ ಇವುಗಳ ಎಕ್ಸ್ ಶೋ ರೂಂ ಬೆಲೆಯು ರೂ. 60.95 ಲಕ್ಷ ಮತ್ತು ರೂ. 65.95 ಲಕ್ಷವಿದೆ.
ಕಿಯಾ ಜೂನ್ 2022 ರಲ್ಲಿ EV6 ಅನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಇವಿ ರಂಗಕ್ಕೆ ಎಂಟ್ರಿಕೊಟ್ಟಿತು. ಅಂದಿನಿಂದ ಸುಮಾರು 432 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2023 Kia EV6 ಇತ್ತೀಚೆಗೆ ನಡೆಸಿದ ನ್ಯೂಯಾರ್ಕ್ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ 'ವರ್ಷದ ಪರ್ಫಾಮೆನ್ಸ್ ಕಾರ್' ಸೇರಿದಂತೆ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಬಹು ಪುರಸ್ಕಾರಗಳನ್ನು ಮತ್ತು ಜಾಗತಿಕ ಮನ್ನಣೆಯನ್ನು ಗೆದ್ದು ಗಮನ ಸೆಳೆದಿದೆ.
32 ದೇಶಗಳನ್ನು ಪ್ರತಿನಿಧಿಸುವ 100 ಪ್ರತಿಷ್ಠಿತ ಅಂತಾರಾಷ್ಟ್ರೀಯ ಆಟೋಮೋಟಿವ್ ಪತ್ರಕರ್ತರ ತೀರ್ಪುಗಾರರಿಂದ ಈ ಮನ್ನಣೆ ಬಂದಿದೆ. ಇತರ ಕೆಲವು ಮನ್ನಣೆಗಳಲ್ಲಿ ICOTY ಯಿಂದ ಗ್ರೀನ್ ಕಾರ್ ಅವಾರ್ಡ್ 2023, 2023 ವರ್ಷದ ನಾರ್ತ್ ಅಮೇರಿಕನ್ ಯುಟಿಲಿಟಿ ವೆಹಿಕಲ್, 2022 ವರ್ಷದ ಯುರೋಪಿಯನ್ ಕಾರ್, 2022 ವರ್ಷದ ಕೊರಿಯನ್ ಕಾರು, 2022 ವರ್ಷದ ಕಾರ್ ಮತ್ತು SUV ಆಫ್ ದಿ ರೆಡ್ ಡಾಟ್ ಪ್ರಶಸ್ತಿಗಳನ್ನು ಪಡೆದಿದೆ.


Click it and Unblock the Notifications








