Kia EV6: ಬಹುನಿರೀಕ್ಷಿತ ಈ ಹೊಸ ಕಿಯಾ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಏಪ್ರಿಲ್ 15 ರಿಂದ ಬುಕ್ಕಿಂಗ್ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕ್ರಾಸ್‌ಒವರ್ EV6 ಅನ್ನು EV6 ಮತ್ತು RWD ಮತ್ತು AWD ರೂಪಾಂತರಗಳಲ್ಲಿ 2022ರ ಜೂನ್ ತಿಂಗಳಿನಲ್ಲಿ ಪರಿಚಯಿಸಿತು. ಆರಂಭದಲ್ಲಿ ಕಿಯಾ ಇಂಡಿಯಾ ಕಂಪನಿಯು EV6 ಎಲೆಕ್ಟ್ರಿಕ್ ಕಾರಿನಕೇವಲ 100 ಯೂನಿಟ್‌ಗಳನ್ನು ತಂದರು.

ಕಿಯಾ ಇಂಡಿಯಾ ತನ್ನ EV6 ಎಲೆಕ್ಟ್ರಿಕ್ ಕಾರನ್ನು 12 ನಗರಗಳಲ್ಲಿ 15 ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಬೇಡಿಕೆಯು ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕಿಯಾ ಇಂಡಿಯಾ ಕಂಪನಿಯು ಇದರ ಬೇಡಿಕೆಯು ನಿರೀಕ್ಷಿಸಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕಂಪನಿಯು ಕಳೆದ ಏಳು ತಿಂಗಳಲ್ಲಿ ಈ ಎಲೆಕ್ಟ್ರಿಕ್ ಕಾರಿನ 400 ಯೂನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇನ್ನು ಇದೀಗ 2023ರ ಕಿಯಾ EV6 ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಪ್ರಾರಂಭಿಸುವ ದಿನಾಂಕವನ್ನು ಬಹಿರಂಗಪಡಿಸಿದೆ.

2023 Kia EV6

ಈ 2023ರ ಕಿಯಾ EV6 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಏಪ್ರಿಲ್ 15 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಇದಲ್ಲದೆ, ಕಿಯಾ ತನ್ನ ಡೀಲರ್‌ಶಿಪ್ ಜಾಲವನ್ನು 44 ನಗರಗಳಲ್ಲಿ 60 ಶೋರೂಮ್‌ಗಳಿಗೆ ವಿಸ್ತರಿಸಲಿದೆ. ಕಿಯಾ EV6 ಎಲೆಕ್ಟ್ರಿಕ್ ಕಾರಿನಲ್ಲಿ 150kW ಹೈಸ್ಪೀಡ್ ಚಾರ್ಜರ್ ನೆಟ್‌ವರ್ಕ್ ಅನ್ನು ಎಲ್ಲಾ 60 ಔಟ್‌ಲೆಟ್‌ಗಳಿಗೆ ಹೊಂದಿಸುತ್ತದೆ. ಇನ್ನು 2023ರ ಕಿಯಾ EV6 GT ಲೈನ್ RWD ಮತ್ತು GT ಲೈನ್ AWD ರೂಪಾಂತರಗಳ ಬೆಲೆಗಳು ಕ್ರಮವಾಗಿ ರೂ.60.95 ಲಕ್ಷ ಮತ್ತು ರೂ.65.95 ಲಕ್ಷವಾಗಿದೆ.

ಈ ಮೇಲಿನ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಿಯಾ ಎಲೆಕ್ಟ್ರಿಕ್ ಕ್ರಾಸ್ಒವರ್ ಒಂದೇ 77.4kWh ಬ್ಯಾಟರಿ ಪ್ಯಾಕ್ ಮತ್ತು ಸಿಂಗಲ್ ಮೋಟಾರ್, RWD ಮತ್ತು ಡ್ಯುಯಲ್ ಮೋಟಾರ್, AWD ಸೆಟಪ್‌ಗಳೊಂದಿಗೆ ಬರುತ್ತದೆ. ಈ ಕ್ರಾಸ್ಒವರ್ RWD ರೂಪಾಂತರವು 229 bhp ಮತ್ತು 35 0Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು AWD ರೂಪಾಂತರವು 325 bhp ಮತ್ತು 605 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Kia EV6

ಇನ್ನು AWD ಆವೃತ್ತಿಯು ಕೇವಲ 5.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಆವೃತ್ತಿಯು 528 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಬ್ಯಾಟರಿಯನ್ನು ಫಾಸ್ಟ್ 350kW DC ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ ಮಾಡಬಹುದು. ಹೋಮ್ ಚಾರ್ಜಿಂಗ್‌ಗಾಗಿ, ಖರೀದಿದಾರರು 22kW ವಾಲ್ ಬಾಕ್ಸ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

Hyundai Ioniq 5 ನಂತೆಯೇ, ಕಿಯಾ EV6 ಬ್ರ್ಯಾಂಡ್‌ನ E-GMP ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ. ಇದರ ಜಿಟಿ-ಲೈನ್ ರೂಪಾಂತರವು ಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವರ್ಚುವಲ್ ರಿಯಾಲಿಟಿ HUD ಮತ್ತು ಸರೌಂಡ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.

2023 Kia EV6

ಇದರೊಂದಿಗೆ 60+ ಕನೆಕ್ಟಿವಿಟಿ ಕಾರ್ ಫೀಚರ್ಸ್, ಏರ್‌ಬ್ಯಾಗ್‌ಗಳು, ADAS ಮತ್ತು ಚಾಲಿತ ಟೈಲ್‌ಗೇಟ್ ಹೊಂದಿದೆ. ಇನ್ನು ಕಿಯಾ EV6 ಎಲೆಕ್ಟ್ರಿಕ್ ಕಾರು ಮೂನ್ಸ್ಕೇಪ್, ಯಾಚ್ಟ್ ಬ್ಲೂ, ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ರನ್ವೇ ರೆಡ್.ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಬ್ಯವಿದೆ. ಈ ಎಲೆಕ್ಟ್ರಿಕ್ ಕಾರು 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 5, 2023, 17:49 [IST]
English summary
2023 kia ev6 bookings to open on 15th april details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+