ಹೊಸ ಕ್ರಾಂತಿ ಮಾಡಲು ಸಜ್ಜಾದ ಕಿಯಾ ಸೆಲ್ಟೋಸ್: ಎದುರಾಳಿಗಳಿಗೆ ಶುರುವಾಗಿದೆ ನಡುಕ
ಕಿಯಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು ಇತ್ತೀಚೆಗೆ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos Facelift) ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತು.
ಭಾರತದ ಗ್ರಾಹಕರು ಕಿಯಾ ಸೆಲ್ಟೋಸ್ ಎಸ್‍ಯುವಿ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಇದೀಗ ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಈ ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಇನ್ನು ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು ನಾಳೆ ಬಿಡುಗಡೆಯಾಗಲಿದೆ.

2023ರ ಕಿಯಾ ಸೆಲ್ಟೋಸ್ ಮಿಡ್ ಎಸ್‍ಯುವಿಯು ಕಳೆದ ನಾಲ್ಕು ವರ್ಷಗಳಿಂದ ಕಂಪನಿಯ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಈ ಬಹುನಿರೀಕ್ಷಿತ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಕೆಲವು ದೊಡ್ಡ ಭರವಸೆಗಳನ್ನು ನೀಡುತ್ತಿದೆ ಮತ್ತು ಇಲ್ಲಿಯವರೆಗೆ ಬಹಿರಂಗಪಡಿಸಿದ ಹಲವಾರು ಟೀಸರ್ ಚಿತ್ರಗಳು ಹೊರಭಾಗದಲ್ಲಿ ವಿನ್ಯಾಸ ನವೀಕರಣಗಳನ್ನು ಮತ್ತು ಕ್ಯಾಬಿನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಗಿತ್ತು.
ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು LED DRL ಗಳು ಮತ್ತು LED ಹೆಡ್‌ಲೈಟ್ ವಿನ್ಯಾಸವು ಬದಲಾವಣೆಗೆ ಒಳಗಾಗಿದೆ. ಈ ಎಸ್‍ಯುವಿಯ ಬಂಪರ್ ಜೊತೆಗೆ ರೇಡಿಯೇಟರ್ ಗ್ರಿಲ್ ಅನ್ನು ಸಹ ನವೀಕರಿಸಲಾಗಿದೆ. ಹಿಂಭಾಗದಲ್ಲಿ, ಹಿಂದಿನ ಲ್ಯಾಂಪ್ ಗಳನ್ನು ಮಾರ್ಪಡಿಸಲಾಗಿದೆ ಮತ್ತು ಈಗ ಎಲ್ಇಡಿ ಲೈಟ್ ಬಾರ್ ಅನ್ನು ಸಂಯೋಜಿಸಲಾಗಿದೆ. ಸ್ಟೈಲಿಶ್ ಎಸ್‌ಯುವಿಯ ಮಸ್ಕಲರ್ ಆಕರ್ಷಣೆಯನ್ನು ಸೇರಿಸಲು ದಪ್ಪ ಸ್ಕಿಡ್ ಪ್ಲೇಟ್ ಹೊಂದಿದೆ.

ಈ ಎಸ್‍ಯುವಿಯ ಅಲಾಯ್ ವ್ಹೀಲ್ ಗಳು ಹೊಸ ವಿನ್ಯಾಸದಲ್ಲಿವೆ. ಇನ್ನು ಈ ಎಸ್‌ಯುವಿಯು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷತಾ ತಂತ್ರಜ್ಞಾನವನ್ನು ಸಹ ಹೊಂದಿದೆ. ಇನ್ನು ಹೊಸ ಕಿಯಾ ಸೆಲ್ಟೋಸ್ ಎಸ್‍ಯುವಿಯ ಒಳಭಾಗದಲ್ಲಿ ದೊಡ್ಡ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ.
ಇನ್ನು ಈ ಎಸ್‍ಯುವಿಯ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡ್ರೈವರ್ ಡಿಸ್‌ಪ್ಲೇಯನ್ನು ಒಂದು ವಿಸ್ತರಿಸಿದ ಯುನಿಟ್ ಆಗಿದೆ. ಇನ್ನು ಫೀಚರ್ಸ್ ಕ್ಲೈಮೆಂಟ್ ಕಂಟೋಲ್, ಪುಶ್-ಬಟನ್ ಸ್ಟಾರ್ಟ್ ಮತ್ತು ಪನರೊಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಹೊಸ ಸೆಲ್ಟೋಸ್‌ನಲ್ಲಿನ ಅತ್ಯಂತ ಮಹತ್ವದ ಅಪ್‌ಡೇಟ್ ಎಂದರೆ ADAS ಅಥವಾ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ ಸೇರ್ಪಡೆಯಾಗಿದೆ. ಇದರಲ್ಲಿ ಬರೊಬ್ಬರಿ 17 ADAS ಫೀಚರ್ಸ್ ಗಳನ್ನು ಹೊಂದಿವೆ.

2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಹೊಸ 1.5-ಲೀಟರ್ GDi ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 113 bhp ಪವರ್ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಇದರೊಂದಿಗೆ 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 6-ಸ್ಪೀಡ್ iMT ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 158 ಬಿಹೆಚ್‍ಪಿ ಪವರ್ ಮತ್ತು 253 ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಾಗಿ ಬರಲಿದೆ.


Click it and Unblock the Notifications








