ಆಕರ್ಷಕ ಬೆಲೆಯ ಹೊಸ ಕಿಯಾ ಸೆಲ್ಟೋಸ್‌ಗೆ ಭಾರೀ ಡಿಮ್ಯಾಂಡ್: ಇದಕ್ಕೆ ಮತ್ತಷ್ಟು ಕಾಯಬೇಕು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕಾರು ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos Facelift) ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿ ಬಿರುಗಾಳಿ ಎಬ್ಬಿಸಿದೆ.

ಈ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿ ಸೊಗಸಾದ ವಿನ್ಯಾಸ, ವೈಶಿಷ್ಟ್ಯ-ಪ್ಯಾಕ್ಡ್ ಇಂಟಿರಿಯರ್ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಹೊಸ 2023ರ ಸೆಲ್ಟೋಸ್ ಜುಲೈ 21ರಿಂದ ಬಿಡುಗಡೆಯಾದಗಿನಿಂದ, ಗ್ರಾಹಕರು ಈ ಹೊಸ ಮತ್ತು ನವೀಕರಿಸಿದ ಆವೃತ್ತಿಯನ್ನು ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿ ಬೇಡಿಕೆ ಹೆಚ್ಚಾದಂತೆ, ವಿಭಿನ್ನ ರೂಪಾಂತರಗಳಿಗಾಗಿ ಕಾಯುವ ಅವಧಿಯನ್ನು ವಾಹನ ತಯಾರಕರು ಬಹಿರಂಗಪಡಿಸಿದ್ದಾರೆ.

 Kia Seltos Facelift

ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ಎಸ್‍ಯುವಿಗೆ HTE, HTK, HTK+ ಮತ್ತು HTX ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಕಿಯಾ ಎಸ್‍ಯುವಿಯ ಎಂಟ್ರಿ ಲೆವೆಲ್ ಪೆಟ್ರೋಲ್ ರೂಪಾಂತರಗಳೊಂದಿಗೆ ಪ್ರಾರಂಭಿಸಿ, ಪೆಟ್ರೋಲ್ ರೂಪಾಂತರಗಳಿಗೆ ಬುಕಿಂಗ್ ಮಾಡಿದ ದಿನದಿಂದ ಗ್ರಾಹಕರು ನಾಲ್ಕರಿಂದ ಐದು ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಈ ಟ್ರಿಮ್‌ಗಳ ಡೀಸೆಲ್-ಚಾಲಿತ ಆವೃತ್ತಿಗಳನ್ನು ನೋಡುವವರು ಎಂಟರಿಂದ ಒಂಬತ್ತು ವಾರಗಳವರೆಗೆ ಸ್ವಲ್ಪ ಹೆಚ್ಚು ಕಾಯಬೇಕಾಗುತ್ತದೆ.

ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ ಎಸ್‍ಯುವಿ ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್ ಟ್ರಿಮ್‌ಗಳನ್ನು ಹೊರತುಪಡಿಸಿ ಎಲ್ಲಾ ಇತರ ರೂಪಾಂತರಗಳು ಎಂಟರಿಂದ ಒಂಬತ್ತು ವಾರಗಳ ಕಾಯುವ ಅವಧಿಯೊಂದಿಗೆ ಬರುತ್ತವೆ. ಈ ಟ್ರಿಮ್‌ಗಳಲ್ಲಿ HTX ಪೆಟ್ರೋಲ್ CVT ರೂಪಾಂತರ ಮತ್ತು HTX ಡೀಸೆಲ್ ರೂಪಾಂತರಗಳು ಸೇರಿವೆ. ಇನ್ನು ಈ ಎಸ್‍ಯುವಿಯ ಟಾಪ್-ಆಫ್-ಲೈನ್ ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್ ರೂಪಾಂತರಗಳಿಗೆ ಕಾಯುವ ಅವಧಿಯು 14 ರಿಂದ 15 ವಾರಗಳವರೆಗೆ ವಿಸ್ತರಿಸುತ್ತದೆ.

 Kia Seltos Facelift

ಈ 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ ಐಎಂಟಿ ಯುನಿಟ್, ಸಿವಿಟಿ ಯುನಿಟ್, ಸಿವಿಟಿ ಯುನಿಟ್, 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6-ಜಿ-ಸ್ಪೀಡ್ ಡ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿವೆ.

ಇನ್ನು 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113bhp ಮತ್ತು 144Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

 Kia Seltos Facelift

ಈ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ iMT ಯುನಿಟ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ನೀಡಬಹುದು. ಇನ್ನು ಕಿಯಾ ಸೆಲ್ಟೋಸ್ ಅದರ ಫೀಚರ್ಸ್-ಲೋಡ್ ಮಾಡಲಾದ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್ ವಿಭಿನ್ನವಾಗಿಲ್ಲ. 2023ರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ವಿಕಸನೀಯ ವಿನ್ಯಾಸದ ಥೀಮ್ ಅನ್ನು ಅನುಸರಿಸುತ್ತದೆ. ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟೆಡ್ ಮಾಡೆಲ್ ಅದರ ಸ್ಪೋರ್ಟಿ ವಿನ್ಯಾಸದ ಅಂಶಗಳೊಂದಿಗೆ ತುಂಬಾ ತಾರುಣ್ಯದಿಂದ ಕಾಣುತ್ತದೆ.

ಇದಲ್ಲದೆ, ನವೀಕರಿಸಿದ ಮಾದರಿಯ ಒಳಭಾಗವು ಅದರ ಹೊಸ ಡ್ಯುಯಲ್-ಸ್ಕ್ರೀನ್ ವಿನ್ಯಾಸದೊಂದಿಗೆ ಹೆಚ್ಚು ಹೈಟೆಕ್ ಆಗಿ ಕಾಣುತ್ತದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಗ್ಗೆ ಹೇಳುವುದಾದರೆ, ಪ್ರಮುಖ ಅಂಶವೆಂದರೆ ಈಗ ಲೆವೆಲ್-2 ADAS ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್-ಕೀಪಿಂಗ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

More from DriveSpark

Article Published On: Wednesday, August 2, 2023, 13:53 [IST]
English summary
2023 kia seltos facelift suv waiting period details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+