ನಾಳೆಯೇ ಬಿಡುಗಡೆ: 2023 Kia Seltos ಫೇಸ್‌ಲಿಫ್ಟ್ ವಿಶೇಷತೆಗಳು

ಕಳೆದ ಹಲವು ತಿಂಗಳುಗಳಿಂದ ನಿರೀಕ್ಷೆ ಹೆಚ್ಚಿಸಿದ್ದ ಮುಂಬರುವ 2023 ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಈ ವರ್ಷದ ಬಹು ನಿರೀಕ್ಷಿತ ಕಾರು ಬಿಡುಗಡೆಗಳಲ್ಲಿ ಒಂದಾಗಿದೆ. 2023 ಕಿಯಾ ಸೆಲ್ಟೋಸ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಕೊನೆಗೂ ನಾಳೆ ಬಿಡುಗಡೆ ಮಾಡಲು ಕಿಯಾ ಇಂಡಿಯಾ ಸಜ್ಜಾಗಿದೆ.

ಹೆಚ್ಚು ಸಂಭಾವ್ಯ ಖರೀದಿದಾರರನ್ನು ಆಕರ್ಷಿಸುವ ಪ್ರಯತ್ನದಲ್ಲಿ, ಕಿಯಾ ಇಂಡಿಯಾ ಮುಂಬರುವ SUV ಯ ಕೆಲವು ಟೀಸರ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಇವುಗಳನ್ನು ಆಧರಿಸಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಿಯಾ ಸೆಲ್ಟೋಸ್ ಎಸ್‌ಯುವಿಯ ಹೊಸ ಆವೃತ್ತಿಯು ಸುದೀರ್ಘ ಇಕ್ವಿಪ್‌ಮೆಂಟ್‌ಗಳ ಪಟ್ಟಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

2023-kia-seltos-facelift-top-specs

ವಿನ್ಯಾಸದ ವಿಷಯದಲ್ಲಿ, ಕಿಯಾ ಸೆಲ್ಟೋಸ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯು ವಿಕಸನೀಯ ವಿನ್ಯಾಸದ ಥೀಮ್ ಅನ್ನು ಅನುಸರಿಸುತ್ತದೆ. ಈ ಮಾದರಿಯು ಈಗಿರುವ ಮಾದರಿಗಿಂತ ಸ್ವಲ್ಪ ಪ್ರೀಮಿಯಂ ಬೆಲೆಯಿರುತ್ತದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಬೆಲೆ ಏರಿಕೆಯು ಮುಂಬರುವ SUV ಯ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಬಹುದು.

ಟೀಸರ್ ವೀಡಿಯೋಗಳನ್ನು ಗಮನಿಸಿದರೆ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಟ್ವಿನ್-ಸ್ಕ್ರೀನ್ ಸೆಟಪ್‌ನೊಂದಿಗೆ ಬರುತ್ತದೆ. ಈ ವಿನ್ಯಾಸದಲ್ಲಿ, ಡ್ರೈವರ್ ಮುಂಭಾಗದಲ್ಲಿರುವ ಸ್ಕ್ರೀನ್ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ, ಹಾಗೆಯೇ ಇನ್ನುಳಿದ ಸ್ಕ್ರೀನ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಘಟಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು.

2023-kia-seltos-facelift-top-specs

ಕಿಯಾ ಸೆಲ್ಟೋಸ್ ಎಸ್‌ಯುವಿಯ ಮುಂಬರುವ ಫೇಸ್‌ಲಿಫ್ಟೆಡ್ ಆವೃತ್ತಿಯು ಸುಧಾರಿತ ಲೆವೆಲ್-2 ಎಡಿಎಎಸ್ ತಂತ್ರಜ್ಞಾನವನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ತಂತ್ರಜ್ಞಾನವು ಸಾಮಾನ್ಯವಾಗಿ ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಲೇನ್-ಕೀಪಿಂಗ್ ಅಸಿಸ್ಟ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಇನ್ನುಳಿದಂತೆ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, 2023 ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ. ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್‌ ನೊಂದಿಗೆ ಬರುವ ಸಾಧ್ಯತೆಗಳು ಹೆಚ್ಚಿವೆ.

2023-kia-seltos-facelift-top-specs

ಇದರ ಮೂಲ ಎಂಜಿನ್ 113bhp ಪವರ್ ಮತ್ತು 144Nm ಪೀಕ್ ಟಾರ್ಕ್ ನೊಂದಿಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಗಿ ಮುಂದುವರಿಯುತ್ತದೆ. ಇದಲ್ಲದೆ, ಈ ಎಂಜಿನ್ ಅನ್ನು 6 ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಯುನಿಟ್‌ಗೆ ಜೋಡಿಸಬಹುದು ಎಂದು ಮೂಲಗಳು ತಿಳಿಸಿವೆ.

1.5-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಪವರ್‌ಟ್ರೇನ್ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿ ತನ್ನ ಅಸ್ತಿತ್ವವನ್ನು ಮುಂದುವರಿಸಲಿದೆ. ಈ ಪವರ್‌ಟ್ರೇನ್ 114bhp ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಗೇರ್‌ಬಾಕ್ಸ್ ಆಯ್ಕೆಗಳು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಯುನಿಟ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಅಂತಿಮವಾಗಿ, ಕಿಯಾ ಸೆಲ್ಟೋಸ್ SUV ಯ ಫೇಸ್‌ಲಿಫ್ಟೆಡ್ ಆವೃತ್ತಿಯು ಹೊಸ 1.5-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು 158bhp ಮತ್ತು 253Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಈ ಪವರ್‌ಟ್ರೇನ್ ಅನ್ನು 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 7 ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನೊಂದಿಗೆ ನೀಡುವ ಸಾಧ್ಯತೆಯಿದೆ.

More from DriveSpark

Article Published On: Monday, July 3, 2023, 19:51 [IST]
English summary
2023 kia seltos facelift top specs
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+