2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿ ಬಿಡುಗಡೆ: ಅತ್ಯುತ್ತಮ ಮೈಲೇಜ್

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬ್ರೆಝಾ CNG ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಮೂಲಕ ಮಾರುತಿ ಸುಜುಕಿ ಕಂಪನಿಯು ತನ್ನ S-CNG ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ. ಹೊಸದಾಗಿ ಬಿಡುಗಡೆಗೊಂಡ 2023ರ ಬ್ರೆಝಾ CNG ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9.14 ಲಕ್ಷವಾಗಿದೆ,

ಹೊಸ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದು, ಇದನ್ನು ಖರೀದಿಸಲು ಬಯಸುವ ಗ್ರಾಹಕರು ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ 2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿಯು 3 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಇದರ ಮಿಡ್-ಸ್ಪೆಕ್ VXI ರೂಪಾಂತರ ಬೆಲೆಯು ರೂ,10.49 ಲಕ್ಷಗಳಾದರೆ, ಟಾಪ್-ಸ್ಪೆಕ್ ZXI ರೂಪಾಂತರದ ಬೆಲೆಯು ರೂ,11.89 ಲಕ್ಷವಾಗಿದೆ.

2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿ ಬಿಡುಗಡೆ

ಈ ಮೇಲಿನ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. 2023ರ ಮಾರುತಿ ಸುಜುಕಿ ಬ್ರೆಝಾ CNG 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ VVT, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 99.2 ಬಿಹೆಚ್‍ಪಿ ಪವರ್ ಮತ್ತು 136 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

CNG ಮೋಡ್‌ನಲ್ಲಿ 86.63 ಬಿಹೆಚ್‍ಪಿ ಪವರ್ ಮತ್ತು 86.63 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿಯು ಬರೊಬ್ಬರಿ 25.51 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಗೇರ್‌ಬಾಕ್ಸ್ ಆಯ್ಕೆಗಳ ವಿಷಯದಲ್ಲಿ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ ಪ್ರಸ್ತುತ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡುತ್ತಿದೆ.

2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿ ಬಿಡುಗಡೆ

ಇನ್ನು ಮಾರುತಿ ಸುಜುಕಿ ಕಂಪನಿಯು ಒಂದು ಆಯ್ಕೆಯಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ನೀಡುವ ಸಾಧ್ಯತೆಯಿದೆ. ಹೊಸ ಮಾರುತಿ ಸುಜುಕಿ ಬ್ರೆಝಾ CNG ಕಾರಿನಲ್ಲಿ ತನ್ನ ಪೆಟ್ರೋಲ್-ಚಾಲಿತ ಮಾದರಿಯಲ್ಲಿರುವಂತ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 9.0-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ಹೆಡ್-ಅಪ್ ಡಿಸ್ಪ್ಲೇ (HUD), ಅಲೆಕ್ಸಾ ನಂತಹ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಒಳಗೊಂಡಿವೆ.

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಕನೆಕ್ಟಿವಿಟಿ ಟೆಕ್ ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಒಳಗೊಂಡಿವೆ. ಮತ್ತೊಂದೆಡೆ, 2023ರ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‌ಯುವಿಯಲ್ಲಿನ ಸುರಕ್ಷತಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿ ಬಿಡುಗಡೆ

S-CNG ಬ್ಯಾಡ್ಜ್ ಸೇರಿಸುವುದನ್ನು ಹೊರತುಪಡಿಸಿ ಹೊರಭಾಗವು ಸಾಮಾನ್ಯ ICE ಮಾದರಿಯಂತೆಯೇ ಇರುತ್ತದೆ ಮತ್ತು ಒಳಭಾಗವು ಒಂದೇ ರೀತಿಯ ಥೀಮ್ ಅನ್ನು ಹೊಂದಿರುತ್ತದೆ. CNG ಟ್ಯಾಂಕ್ ನಿಜವಾಗಿಯೂ ಬೂಟ್ ಅನ್ನು ಹೆಚ್ಚು ಬಳಿಸಿಕೊಳ್ಳುತ್ತದೆ. ಮಾರುತಿ ಸುಜುಕಿಯಿಂದ 14ನೇ S-CNG ಮಾದರಿಯು ಸಿಎನ್‌ಜಿ-ನಿರ್ದಿಷ್ಟ ಫೀಚರ್ಸ್ ಗಳಾದ ಇಂಟಿಗ್ರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯೂಯಲ್ ಲಿಡ್ ಮತ್ತು ಮೀಸಲಾದ ಸಿಎನ್‌ಜಿ ಡ್ರೈವ್ ಮೋಡ್ ಗಳನ್ನು ಹೊಂದಿವೆ.

ಪ್ರಸ್ತುತ, ಮಾರುತಿ ಸುಜುಕಿಯು ದೇಶದಲ್ಲಿ ಒಟ್ಟು 14 S-CNG ಕಾರುಗಳನ್ನು ಹೊಂದಿವೆ. 2023ರ ಮಾರುತಿ ಸುಜುಕಿ ಬ್ರೆಝಾ S-CNG ಎಸ್‍ಯುವಿಯನ್ನು ಬಿಡುಗಡೆ ಮಾಡುವುದರೊಂದಿಗೆ, ವಾಹನ ತಯಾರಕರು ಅದರ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಲು ಸಹಾಯವಾಗುತ್ತದೆ. ಈ ಹೊಸ 2023ರ ಮಾರುತಿ ಸುಜುಕಿ ಬ್ರೆಝಾ S-CNG ಎಸ್‍ಯುವಿಯು ಕೂಡ ಗ್ರಾಹಕರ ಗಮನಸೆಳೆಯುತ್ತದೆ ಎಂದು ನಿರೀಕ್ಷಿಸುತ್ತೇವೆ.

Article Published On: Friday, March 17, 2023, 16:56 [IST]
English summary
2023 maruti suzuki brezza cng launched price variants details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+