ಮಹತ್ವದ ಘೋಷಣೆ ಮಾಡಿ ಕೆಲವೇ ದಿನಗಳಾಯ್ತು.. ನವೀಕರಿಸಿದ ಹ್ಯಾರಿಯರ್‌ ಬುಕಿಂಗ್ ಪ್ರಾರಂಭಿಸಿದ ಟಾಟಾ

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನವೀಕರಿಸಿದ ಹ್ಯಾರಿಯರ್‌ ಎಸ್‌ಯುವಿಗಾಗಿ ಬುಕಿಂಗ್ ಆರಂಭಿಸಲಾಗಿದೆ ಎಂದು ಘೋಷಣೆ ಮಾಡಿದೆ. ಈ ಎಸ್‌ಯುವಿ, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚಿನ ವಿವರ ತಿಳಿಯೋಣ ಬನ್ನಿ..

ನವೀಕರಿಸಿದ ಹ್ಯಾರಿಯರ್‌ ಎಸ್‌ಯುವಿಯಲ್ಲಿ ಆಗಿರುವ ದೊಡ್ಡ ಬದಲಾವಣೆಯೆಂದರೆ, ಅದರ ಎಂಜಿನ್, ಟಾಟಾ ಮೋಟಾರ್ಸ್, 2.0 ಲೀಟರ್ ಫೋರ್-ಸಿಲಿಂಡರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಅನ್ನು BSVI ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದೆ. ಇದು 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು.

ಮಹತ್ವದ ಘೋಷಣೆ ಮಾಡಿ ಕೆಲವೇ ದಿನಗಳಾಯ್ತು.. ನವೀಕರಿಸಿದ ಹ್ಯಾರಿಯರ್‌ ಬುಕಿಂಗ್ ಪ್ರಾರಂಭಿಸಿದ ಟಾಟಾ

ನೂತನ ಟಾಟಾ ಹ್ಯಾರಿಯರ್‌ ಎಸ್‌ಯುವಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ತಂತ್ರಜ್ಞಾನವನ್ನು ಹೊಂದಿದ್ದು, ಇದು ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಚೇಂಜ್ ಅಲರ್ಟ್, ಡೋರ್ ಓಪನ್ ಅಲರ್ಟ್, ರೇರ್ ಕ್ರಾಸ್ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸೇರಿದಂತೆ ಅನೇಕ ಚಾಲಕ ಸಹಾಯಕ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇಅಲ್ಲದೆ, ಹೊರ ಭಾಗದಿಂದ ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ.

ಈ ಕಾರಿನ ಒಳಭಾಗದ ವೈಶಿಷ್ಟ್ಯದ ಬಗ್ಗೆ ಮಾತನಾಡುವುದರೆ, ಇದು 10.25 ಇಂಚಿನ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ ಪ್ಲೇ, ಆಂಡ್ರಾಯ್ಡ್ ಆಟೋ, 7 ಇಂಚಿನ TFT ಇನ್ಸ್ರುಮೆಂಟ್ ಕನ್ಸೋಲ್, USB ಚಾರ್ಜಿಂಗ್ ಪೋರ್ಟ್‌, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ಸ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಈ ಎಸ್‌ಯುವಿಯ ಒಳಭಾಗವು ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಹಿಂದಿನ ಮಾದರಿಯನ್ನೇ ಹೋಲುತ್ತದೆ.

ಕಳೆದ ತಿಂಗಳು ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ ಹ್ಯಾರಿಯರ್ ರೆಡ್ ಡಾರ್ಕ್ ಎಡಿಷನ್ ಕೂಡ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನವೀಕರಿಸಿದ ಟಾಟಾ ಹ್ಯಾರಿಯರ್‌ ಎಸ್‌ಯುವಿ ಬೆಲೆ ಎಷ್ಟಿರಲಿದೆ ಹಾಗೂ ಯಾವಾಗ ಲಾಂಚ್ ಆಗಲಿದೆ ಎಂಬುದರ ಕುರಿತು ಮಾಹಿತಿಯು ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ. ಹೊಸ ಟಾಟಾ ಹ್ಯಾರಿಯರ್‌ ಎಸ್‌ಯುವಿ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಬಹುದು ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಲಾಗಿದೆ.

ದೇಶಾದ್ಯಂತ ಏಪ್ರಿಲ್ 1, 2023ರಿಂದ ಭಾರತ್ ಸ್ಟೇಜ್ 6 (BS6) ಹಂತ-II ಕಟ್ಟುನಿಟ್ಟಿನ ನಿಯಮ ಜಾರಿಯಾಗಲಿದ್ದು ಅದರನ್ವಯ ತನ್ನೆಲ್ಲ ಎಂಜಿನ್ ಲೈನ್-ಅಪ್ ಅನ್ನು RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮಾನದಂಡಗಳಿಗೆ ಅನುಗುಣವಾಗಿ ಟಾಟಾ ಮೋಟಾರ್ಸ್ ನವೀಕರಿಸಿದೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ ಮಾಹಿತಿಯನ್ನು ಹಂಚಿಕೊಂಡಿತ್ತು. ಇದೀಗ ನವೀಕರಿಸಿದ ಟಾಟಾ ಹ್ಯಾರಿಯರ್‌ ಎಸ್‌ಯುವಿಯ ಡೀಸೆಲ್ ಎಂಜಿನ್ ಅನ್ನು ಕೂಡ ಇದೇ ಮಾನದಂಡಗಳ ಅನ್ವಯ ನವೀಕರಿಸಿದ್ದು, ಬುಕಿಂಗ್ ಕೂಡ ಆರಂಭಿಸಿದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಹ್ಯಾರಿಯರ್‌ ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು ರೂ.15 ಲಕ್ಷದಿಂದ ರೂ.22.60 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಬರೋಬ್ಬರಿ ಎಂಟು ರೂಪಾಂತರಗಳಲ್ಲಿ ಸಿಗಲಿದೆ. ಇದು 2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ.

ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು, 8.8 ಇಂಚಿನ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, , ಆಪಲ್ ಕಾರ್‌ ಪ್ಲೇ, ಆಂಡ್ರಾಯ್ಡ್ ಆಟೋ, ಆಕರ್ಷಕ ಸನ್ ರೂಫ್, ಅಲಾಯ್ ವೀಲ್ಸ್, ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಇಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ಸುರಕ್ಷತಾ ಸಾಧನಗಳನ್ನು ಒಳಗೊಂಡಿದೆ ಎಂದು ಹೇಳಬಹುದು.

Article Published On: Thursday, February 16, 2023, 15:49 [IST]
English summary
2023 tata harrier bookings open details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+