Tata Nexon EV: ಟಾಟಾ ನೆಕ್ಸಾನ್ ಇವಿ ರಿವ್ಯೂ ವಿಡಿಯೋ.. ಇದಕ್ಕೆ ಸಾರಿಸಾಟಿಯೇ ಇಲ್ಲ ಗುರು!

ಭಾರತದ ಮಾರುಕಟ್ಟೆಯಲ್ಲಿ ಟಾಟಾ (Tata), ನವೀಕರಿಸಿದ ನೆಕ್ಸಾನ್ ಇವಿ (Nexon EV)ಯನ್ನು ನಾಡಿದ್ದು (ಸೆ.14) ಬಿಡುಗಡೆ ಮಾಡಲಿದೆ. ಈ ಕಾರು, ಯಾವ ಬದಲಾವಣೆ ಹೊಂದಿದೆ. ವೈಶಿಷ್ಟ್ಯಗಳು ಹೇಗಿವೆ ಎಂಬುದನ್ನು ಅರಿಯಬೇಕೆ.. ನಮ್ಮ ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ನಡೆಸಲು ಪುಣೆಯಲ್ಲಿ ಅವಕಾಶ ದೊರೆಯಿತು. ವಿಡಿಯೋ ಇಲ್ಲಿದೆ.

ನವೀಕರಣಗೊಂಡಿರುವ ಇಂಧನ ಚಾಲಿತ (ICE) ನೆಕ್ಸಾನ್ ಎಸ್‌ಯುವಿಗೆ ಹೋಲಿಸಿದರೆ, ಹೊಸ ಟಾಟಾ ನೆಕ್ಸಾನ್ ಇವಿ (ಎಲೆಕ್ಟ್ರಿಕ್ ಕಾರು) ಕೂಡ ಕಂಪನಿಯ ಕರ್ವ್ವ್ ಕಾನ್ಸೆಪ್ಟ್ ಕಾರಿನಂತೆ ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ. ಪ್ರಮುಖವಾಗಿ, ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಅತ್ಯಾಧುನಿಕವಾಗಿದ್ದು, ಎಲ್ಇಡಿ ಲೈಟ್ ಸ್ಟ್ರಿಪ್‌, ನೂತನ ಕನೆಕ್ಟ್ದ್ ರೇರ್ ಲೈಟ್ಸ್, ರೂಫ್ - ಮೌಂಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ ಇವಿ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್‌ ಸಿಸ್ಟಮ್ ಸಲುವಾಗಿ ಡ್ಯುಯಲ್ - ಡಿಸ್ಪ್ಲೇ, ಕೂಲ್ಡ್ ಗ್ಲೋವ್ ಬಾಕ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಟಚ್- ಎಚ್‌ವಿಎಸಿ (HVAC) ಕಂಟ್ರೋಲ್, ಸನ್‌ರೂಫ್, ಜೆಬಿಎಲ್ ಸೌಂಡ್ ಸಿಸ್ಟಮ್‌ ಸೇರಿದಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ, ನೆಕ್ಸಾನ್ ಇವಿ ಕಾರ್ಯಕ್ಷಮತೆ ಬಗ್ಗೆ ತಿಳಿಯುವುದಾದರೆ, ಇದು, ಮೀಡಿಯಂ ರೇಂಜ್ (ಎಂಆರ್) ಮತ್ತು ಲಾಂಗ್ ರೇಂಜ್ (ಎಲ್ಆರ್) ವೇರಿಯೆಂಟ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಎಂಆರ್ ರೂಪಾಂತರ 30kWh ಮತ್ತು ಎಲ್ಆರ್ ರೂಪಾಂತರ 40.5kWh ಬ್ಯಾಟರಿ ಪಡೆದಿದೆ. ಕ್ರಮವಾಗಿ, 127 bhp & 143 bhp ಪವರ್, ಜೊತೆಯಲ್ಲಿ 215Nm ಪೀಕ್ ಟಾರ್ಕ್ ಉತ್ಪಾದಿಸುತ್ತವೆ.

Tata Nexon EV: ಟಾಟಾ ನೆಕ್ಸಾನ್ ಇವಿ ರಿವ್ಯೂ ವಿಡಿಯೋ.. ಇದಕ್ಕೆ ಸಾರಿಸಾಟಿಯೇ ಇಲ್ಲ ಗುರು!

ರೇಂಜ್ ವಿಷಯಕ್ಕೆ ಬರುವುದಾದರೆ, ಎಂಆರ್ ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 325 km ಹಾಗೂ ಎಲ್ಆರ್ ರೂಪಾಂತರ 465 km ರೇಂಜ್ ನೀಡುತ್ತದೆ. ಮನೆ ವಿದ್ಯುತ್ ಬಳಕೆಯಲ್ಲಿ ಎಂಆರ್ ವೇರಿಯೆಂಟ್ 10.5 ಗಂಟೆ, ಎಲ್ಆರ್ ವೇರಿಯೆಂಟ್ ಬ್ಯಾಟರಿ 15 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇವೆರೆಡು ಮಾದರಿಗಳು ಕೇವಲ 56 ನಿಮಿಷದಲ್ಲಿ 10 ರಿಂದ 80 ಚಾರ್ಜ್ ಆಗುತ್ತವೆ.

ಈ ಕಾರು, ಇಕೋ, ಸಿಟಿ ಹಾಗೂ ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡ್ ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ. ಸರಿ ಸುಮಾರು ರೂ.20 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ತೆರೆಬೀಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 12, 2023, 19:15 [IST]
English summary
2023 tata nexon ev review video full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+