ಹೊಸ ನವೀಕರಣಗಳೊಂದಿಗೆ ಸುನಾಮಿ ಎಬ್ಬಿಸಲು ಸಜ್ಜಾದ ಟಾಟಾ ನೆಕ್ಸಾನ್: ನಂ.1 ಮಾರುತಿಗೆ ಆತಂಕ ಶುರು

ಜನಪ್ರಿಯ ದೇಶಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹಬ್ಬದ ಸೀಸನ್‌ಗೆ ಮುಂಚಿತವಾಗಿ ಭಾರತದಲ್ಲಿ ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon Facelift) ಅನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಟಾಟಾ ಮೋಟಾರ್ಸ್ ಪ್ರಕಾರ, ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ಸೆಪ್ಟೆಂಬರ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ಖರೀದಿಗಾಗಿ ಇಂದಿನಿಂದ ಬುಕ್ಕಿಂಗ್ ಪ್ರಾರಂಭವಾಗಲಿದೆ. ಇದೀಗ ಟಾಟಾ ಕಂಪನಿಯು ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ ಮಾದರಿಯ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ನೆಕ್ಸಾನ್ ಬ್ರೋಷರ್‌ನಲ್ಲಿ, ಟಾಟಾ ಮೋಟಾರ್ಸ್ ಹೊಸ ಟಾಟಾ ನೆಕ್ಸಾನ್‌ನೊಂದಿಗೆ ವಿವಿಧ ಹೊಸ ಫೀಚರ್ಸ್ ಗಳನ್ನು ಪ್ರದರ್ಶಿಸುತ್ತದೆ. ಹೊಸ ನೆಕ್ಸಾನ್ ಟ್ರಿಮ್‌ಗಳಾದ್ಯಂತ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಡ್ರೈವ್ ಮೋಡ್‌ಗಳನ್ನು ಪಡೆಯುತ್ತದೆ.

2023 Tata Nexon

ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಒಂದು 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 120 bhp ಮತ್ತು 170 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ AMT, ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಎಂಬ ಮೂರು ಗೇರ್ ಬಾಕ್ಸ್ ಗಳೊಂದಿಗೆ ಬರುತ್ತದೆ.

ಇದರೊಂದಿಗೆ ಈ ಹೊಸ ನೆಕ್ಸಾನ್ ಎಸ್‍ಯುವಿಯಲ್ಲಿ 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 114 bhp ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

2023 Tata Nexon

ಭಾರತದಲ್ಲಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಹೊಸ ನವೀಕರಣಗಳೊಂದಿಗೆ ಮತ್ತೊಮ್ಮೆ ಸಂಚಲನವನ್ನು ಮೂಡಿಸಲು ಸಜ್ಜಾಗಿದೆ. ಈ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸ ಬಗ್ಗೆ ಹೇಳುವುದಾದರೆ, ಹೊಸ ವಿನ್ಯಾಸ, ಮತ್ತು ಮಾದರಿಯು ಈಗ ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳನ್ನು ಮತ್ತು ಟಾಟಾ ಮೋಟಾರ್ಸ್ ಲೋಗೋದೊಂದಿಗೆ ದಪ್ಪವಾದ ಮೇಲಿನ ಗ್ರಿಲ್ ವಿಭಾಗವನ್ನು ಹೊಂದಿದೆ. ಇದಲ್ಲದೆ, ಮಾದರಿಯು ಟ್ರೆಪೆಜಾಯಿಡಲ್ ಹೌಸಿಂಗ್‌ನಲ್ಲಿ ಲಂಬವಾಗಿ ಜೋಡಿಸಲಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಹಿಂಭಾಗದಲ್ಲಿ ಈಗ ಫುಲ್ ಎಲ್ಇಡಿ ಲೈಟ್ ಬಾರ್, ಹೊಸ ಟೈಲ್‌ಲ್ಯಾಂಪ್‌ಗಳು, ಹೊಸ ಹಿಂಭಾಗದ ಬಂಪರ್‌ಗಳು, ಪ್ರಮುಖ ಫಾಕ್ಸ್ ಸ್ಕಿಡ್ ಪ್ಲೇಟ್ ಮತ್ತು ಹೆಚ್ಚಿನದನ್ನು ಪಡೆಯುತ್ತದೆ. ಇನ್ನು ಈ ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಸಿಲೂಯೆಟ್ ಹಿಂದಿನ ಮಾದರಿಯಂತೆಯೇ ಉಳಿದಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ದೊಡ್ಡ ಬದಲಾವಣೆ ಎಂದರೆ, ನೆಕ್ಸಾನ್ ಫೇಸ್‌ಲಿಫ್ಟ್ ಈಗ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್ ಪಡೆಯುತ್ತದೆ.

2023 Tata Nexon

ಇದಲ್ಲದೆ, ನವೀಕರಿಸಿದ ಮಾದರಿಯು ಈಗ ಟಚ್-ಆಧಾರಿತ ಕ್ಲೈಮೆಂಟ್ ಕಂಟ್ರೋಲ್ ಸೆಟಪ್ ಅನ್ನು ಒಳಗೊಂಡಿದೆ. ಈ ಕಾರಿನ ಇಂಟಿರಿಯರ್ ಮತ್ತಷ್ಟು ಸ್ಮಾರ್ಟ್ ಆಗಿದೆ. ಈ ಹೊಸ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಅಷ್ಟೇ ದೊಡ್ಡ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಕನೆಕ್ಟ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ.

ಇದರೊಂದಿಗೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ. ಟಾಟಾ ಕಾರುಗಳು ಹೆಚ್ಚು ಸುರಕ್ಷತೆಗೆ ಹೆಚ್ಚು ಖ್ಯಾತಿಯನ್ನು ಪಡೆದಿದೆ. ನೆಕ್ಸಾನ್ ಫೇಸ್‌ಲಿಫ್ಟ್‌ಎಸ್‍ಯುವಿಯಲ್ಲಿ ಕೆಲವು ಗಮನಾರ್ಹ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ. ಇದರಲ್ಲಿ ಪ್ರಮುಖವಾಗಿ, ಸ್ಟ್ಯಾಂಡರ್ಡ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ABS, EBD, ISOFIX ಚೈಲ್ಡ್‌ಸೀಟ್ ಆಂಕರ್ರಿಂಗ್ ಪಾಯಿಂಟ್‌ಗಳು, ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರವುಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲ್ಯ್ ಮರೆಯದಿರಿ.

Article Published On: Monday, September 4, 2023, 11:29 [IST]
English summary
2023 tata nexon facelift tvc variants and features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+