2023ರ ಹೊಚ್ಚ ಹೊಸ ಟಾಟಾ ಸಫಾರಿ ಬುಕಿಂಗ್ ಆರಂಭ: ಮುಂದೆ ಸೃಷ್ಟಿಯಾಗುತ್ತೆ ಇತಿಹಾಸ..!
ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಮುಂಬರಲಿರುವ 'ಸಫಾರಿ' ಎಸ್‌ಯುವಿ ಬುಕಿಂಗ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಎಸ್‌ಯುವಿ ಪವರ್‌ಟ್ರೇನ್‌ನಲ್ಲಿ ನವೀಕರಣವನ್ನು ಪಡೆದುಕೊಂಡಿದ್ದು, ಸಾಕಷ್ಟು ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ನೋಡಲು ಆಕರ್ಷಕವಾಗಿ ಕಾಣುತ್ತಿದ್ದು, ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಯೋಣ.
ಮುಂಬರಲಿರುವ ಹೊಸ ಟಾಟಾ ಸಫಾರಿ ಎಸ್‌ಯುವಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ತಂತ್ರಜ್ಞಾನವನ್ನು ಹೊಂದಿದ್ದು, ಇದು (AEB) ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಹಾಗೂ ಡೋರ್ ಓಪನ್ ಅಲರ್ಟ್ ಸೇರಿದಂತೆ ಚಾಲಕನಿಗೆ ನೆರವಾಗಲು ಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ಬಹುತೇಕರು ಈ ಎಸ್‌ಯುವಿಯನ್ನು ಖರೀದಿಸಬಹುದು.

ಟಾಟಾ ಸಫಾರಿ ಕೂಡ ಬಹುತೇಕ ನೂತನ ಹ್ಯಾರಿಯರ್ ಎಸ್‌ಯುವಿ ಹೊಂದಿರುವ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಕ್ಯಾಬಿನ್ ಹಿಂದಿನ ಮಾದರಿಯನ್ನೇ ಹೋಲಿಕೆಯಾಗಲಿದ್ದು, ಇದು 10.25 ಇಂಚಿನ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ, 7- ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 200 ವಾಯ್ಸ್ ಕಮಾಂಡ್ಸ್ (6 ಭಾಷೆಗಳು), 6-ವೇ ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ನೂತನ ಟಾಟಾ ಸಫಾರಿ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದರ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಯಾಗಲಿರುವ RDE ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ರೆಡಿ ಮಾಡಲಾಗಿದೆ. ಇದು 2.0 - ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದ್ದು, ಇದು 168 bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6-ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹಾಗೂ 6-ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಟಾಟಾ ಮೋಟಾರ್ಸ್ ಸಫಾರಿ ಎಸ್‌ಯುವಿಯನ್ನು ಆರು ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ನೀಡಲಿದೆ. ಅವುಗಳೆಂದರೆ, ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಓರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಆರ್ಕಸ್ ವೈಟ್. ಇನ್ನು, ಆಸಕ್ತ ಗ್ರಾಹಕರು, ಅಧಿಕೃತ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡುವ ಮೂಲಕ ಸಫಾರಿ ಎಸ್‌ಯುವಿಯನ್ನು ಬುಕ್ ಮಾಡಬಹುದು. ಆದರೆ, ಕಂಪನಿಯು ನೂತನ ಸಫಾರಿ ಎಸ್‌ಯುವಿ ಬೆಲೆಯನ್ನು ಬಹಿರಂಗಪಡಿಸಿಲ್ಲ. ಹಿಂದಿನ ಮಾದರಿಯಂತೆ ರೂ.15.65 ಲಕ್ಷದಿಂದ ರೂ. 24.01 ಲಕ್ಷ ಬೆಲೆಯನ್ನು ಹೊಂದಿರಬಹುದು.
ಇಷ್ಟೇಅಲ್ಲದೆ, ಟಾಟಾ ಮೋಟಾರ್ಸ್ ಗುರುವಾರ ನವೀಕರಿಸಿದ ಹ್ಯಾರಿಯರ್ ಎಸ್‌ಯುವಿಗಾಗಿ ಬುಕಿಂಗ್ ಶುರು ಮಾಡಲಾಗಿದೆ ಎಂದು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿತ್ತು. ಈ ಎಸ್‌ಯುವಿಯ ಎಂಜಿನ್ ಅನ್ನು ಕೂಡ BSVI ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. 2.0 ಲೀಟರ್ ಫೋರ್-ಸಿಲಿಂಡರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿದ್ದು, 170 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಟಾಟಾ ಹ್ಯಾರಿಯರ್ ಎಸ್‌ಯುವಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), 10.25 ಇಂಚಿನ ಟಚ್ ಸ್ಕ್ರಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 7 ಇಂಚಿನ TFT ಇನ್ಸ್ರುಮೆಂಟ್ ಕನ್ಸೋಲ್, USB ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಹಾಗೂ ವಾಯ್ಸ್ ಕಮಾಂಡ್ಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರೂ.15 ಲಕ್ಷದಿಂದ ರೂ.22.60 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು.
ಹೊಸ ಹೊಚ್ಚ ಟಾಟಾ ಸಫಾರಿ ಎಸ್‌ಯುವಿ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಮಹೀಂದ್ರಾದ ಬಹುನಿರೀಕ್ಷಿತ XUV700ಗೆ ಭಾರೀ ಪೈಪೋಟಿ ನೀಡಬಹುದು. ಡೀಸೆಲ್ ಎಂಜಿನ್ ಹೊಂದಿರುವುದರಿಂದ ಮೈಲೇಜ್ ಕೂಡ ಅತ್ಯುತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ADAS ತಂತ್ರಜ್ಞಾನ ಹೊಂದಿರುವುದರಿಂದ ಬಹುತೇಕ ಹೊಸ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಈ ಟಾಟಾ ಸಫಾರಿ ಎಸ್‌ಯುವಿ ಲಾಂಚ್ ಆದ ಮೇಲೆ ಖರೀದಿದಾರರಿಂದ ಯಾವ ರೀತಿ ಪ್ರತಿಕ್ರಿಯೆ ಉಂಟಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications