ಬಹುನೀರಿಕ್ಷಿತ ನವೀಕರಿಸಿದ ಟಾಟಾ ಸಫಾರಿ ವಿತರಣೆ ಆರಂಭ: ಅಬ್ಬರ ಶುರು!
ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳು ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗುತ್ತವೆ. ಅದರಲ್ಲೂ ಸಫಾರಿ ಎಸ್‌ಯುವಿ ಆಕರ್ಷಕವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಇದೀಗ, ದೇಶಾದ್ಯಂತ ನವೀಕರಿಸಿದ (2023) ಸಫಾರಿ ವಿತರಣೆಯನ್ನು ಕಂಪನಿ ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಈ ಕಾರು ಅಬ್ಬರಿಸಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಟಾಟಾ ಮೋಟಾರ್ಸ್, ಸಫಾರಿ ಎಸ್‌ಯುವಿಯ ಎಂಜಿನ್ ಅನ್ನು ಭಾರತದಾದ್ಯಂತ ಮುಂಬರಲಿರುವ ಎಮಿಷನ್ (BS6 ಹಂತ 2) ಮಾನದಂಡಗಳಿಗೆ ನವೀಕರಿಸಿದೆ. ಈ ಕಾರು ಚಾಲಕರಿಗೆ ಅನುಕೂಲವಾಗುವಂತಹ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡು ಅತ್ಯಾಕರ್ಷಕವಾಗಿದೆ. ಕಂಪನಿಯು ಸಫಾರಿ ರೆಡ್ ಡಾರ್ಕ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದರ ವಿನ್ಯಾಸದಲ್ಲಿ ಕೆಂಪು ಬಣ್ಣ ಮುಖ್ಯವಾಗಿ ಕಂಡುಬರುತ್ತದೆ.

ನವೀಕರಿಸಿದ ಟಾಟಾ ಸಫಾರಿ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.0 ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದ್ದು, 168 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 6 ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.
ಈ ಸಫಾರಿ ಎಸ್‌ಯುವಿ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ದೊಡ್ಡದಾದ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಫುಲ್ ಡಿಜಿಟಲ್ ಇನ್ಸ್ರುಮೆಂಟ್ ಕ್ಲಸ್ಟರ್, 6 ವೇ ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, 60-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಸೇರಿದಂತೆ ಹಲವು ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ಇವು ಖಂಡಿತ ಖರೀದಿದಾರರಿಗೆ ಇಷ್ಟವಾಗುತ್ತದೆ.
ಸುರಕ್ಷತೆಯ ದೃಷ್ಟಿಯಿಂದಲೂ ಟಾಟಾ ಸಫಾರಿ ಎಸ್‌ಯುವಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಿದ್ದು, ಇದು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡೋರ್ ಓಪನ್ ಅಲರ್ಟ್ ಒಳಗೊಂಡಂತೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಎಂದು ಹೇಳಬಹುದು.
ನೂತನ ಸಫಾರಿ ಎಸ್‌ಯುವಿ ಬೆಲೆ ಬಗ್ಗೆ ಮಾತನಾಡುವುದಾದರೆ, ಇದರ ಮ್ಯಾನುಯಲ್ ಟ್ರಾಸ್ಮಿಷನ್ ಆಯ್ಕೆಯೊಂದಿರುವ ಎಕ್ಸ್‌ಇ ಆವೃತ್ತಿಯು ರೂ.15.65 ಲಕ್ಷ (ಎಕ್ಸ್ ಶೋರೂಂ, ಬೆಂಗಳೂರು) ಆರಂಭಿಕ ಬೆಲೆಯನ್ನು ಹೊಂದಿದೆ. ಟಾಪ್ ಎಂಡ್ ಮಾದರಿಯು ರೂ.25.01 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಓರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್ ಅಡ್ವೆಂಚರ್, ರಾಯಲ್ ಬ್ಲೂ ಹಾಗೂ ಆರ್ಕಸ್ ವೈಟ್ ಅಡ್ವೆಂಚರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಟಾಟಾ ಮೋಟಾರ್ಸ್ ಪ್ರೀಮಿಯಂ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಈ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಮುಂಬರಲಿರುವ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್, 1.2-ಲೀಟರ್, 3 - ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಆಲ್ಟ್ರೋಜ್ ಸಿಎನ್‌ಜಿ, 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಪಡೆದಿದೆ. 25km/kg ಮೈಲೇಜ್ ನೀಡಬಹುದು. ಈ ಕಾರುಗಳು ಕೈಗೆಟುಕುವ ದರದಲ್ಲಿ ಖರೀದಿಗೆ ಸಿಗಬಹುದು.
ಇನ್ನು, ಸಫಾರಿ ಎಸ್‌ಯುವಿ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಎಕ್ಸ್‌ಯುವಿ700 ಗೆ ಭಾರೀ ಪೈಪೋಟಿ ನೀಡಬಹುದು. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಸುಧಾರಿಸಿದ್ದು, ADAS ತಂತ್ರಜ್ಞಾನ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಒಟ್ಟಾರೆ, ಎಂಜಿನ್ ಹಾಗೂ ವೈಶಿಷ್ಟ್ಯದ ದೃಷ್ಟಿಯಿಂದ ಈ ಸಫಾರಿ ಎಸ್‌ಯುವಿ ಅತ್ಯುತ್ತಮವಾಗಿದೆ ಎಂದು ಹೇಳಬಹುದು.


Click it and Unblock the Notifications