ಹೊಸ ರೂಪದಲ್ಲಿ ಬರಲಿದೆ ಹುಂಡೈ ಕಂಪನಿಯ ಗೇಮ್ ಚೇಂಜರ್ ಕ್ರೆಟಾ

ಹ್ಯುಂಡೈ ಕ್ರೆಟಾ (Hyundai Creta) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಎಸ್‍ಯುವಿ ಮಾದರಿಯಾಗಿದೆ. ಹುಂಡೈ ಕಂಪನಿಯು ತನ್ನ ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ

ಹ್ಯುಂಡೈ ಮುಂದಿನ ತಿಂಗಳು ನವೀಕರಿಸಿದ ಕ್ರೆಟಾವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕೊರಿಯನ್ ಆಟೋ ದೈತ್ಯವು ಹ್ಯುಂಡೈ ತನ್ನ ಈ ಹೊಸ ಕ್ರೆಟಾ ಎಸ್‍ಯುವಿಯು 2024ರ ಜನವರಿ 16 ರಂದು ಅನಾವರಣವಾಗುವ ಸಾದ್ಯತೆಗಳಿದೆ. ಈ ಹೊಸ ಹುಂಡೈ ಕ್ರೆಟಾ ಮಾದರಿಯು ಹೊಸ ವೆರ್ನಾ ಸೆಡಾನ್‌ನಿಂದ ಒಳಭಾಗ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಹ್ಯುಂಡೈ ಈಗಾಗಲೇ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮಾರಾಟ ಮಾಡುತ್ತಿದೆ.

Hyundai Creta Facelift

ಹೊಸ ಕ್ರೆಟಾ ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಸಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಚಿತ್ರದಲ್ಲಿ ಎಸ್‍ಯುವಿಯ ಹಿಂಭಾಗವನ್ನು ಹೈಲೈಟ್ ಮಾಡುತ್ತವೆ, ಇದು ಕ್ರೆಟಾ ಫೇಸ್‌ಲಿಫ್ಟ್ ಪರಿಷ್ಕೃತ ತಲೆಕೆಳಗಾದ ಎಲ್-ಆಕಾರದ ಇನ್-ಟ್ರೆಂಡ್ ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪದೆದಿದೆ. ಹಿಂಬದಿಯಲ್ಲಿರುವ ಇತರ ಎರಡು ಗಮನಾರ್ಹ ಮುಖ್ಯಾಂಶಗಳೆಂದರೆ ಹಿಂಬದಿಯ ಸ್ಪಾಯ್ಲರ್‌ನೊಂದಿಗೆ ಸಂಯೋಜಿತವಾದ ಹೈ-ಮೌಂಟೆಡ್ ಬ್ರೇಕ್ ಲ್ಯಾಂಪ್ ಮತ್ತು ಟೈಲ್‌ಗೇಟ್-ಮೌಂಟೆಡ್ ನೋಂದಣಿ ಪ್ಲೇಟ್. ಪರಿಣಾಮವಾಗಿ, ಹ್ಯುಂಡೈ ಲೋಗೋವನ್ನು ಸ್ವಲ್ಪಮಟ್ಟಿಗೆ ನವೀಕರಿಸಿದೆ.

ಇದಲ್ಲದೆ, ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಹೆಚ್ಚು ನವೀಕರಿಸಿದೆ. ಮೊದಲೇ ವರದಿ ಮಾಡಿದಂತೆ, ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು LED ಹೆಡ್‌ಲ್ಯಾಂಪ್‌ ಗಳೊಂದಿಗೆ ಮುಂಭಾಗದ ಫಾಸಿಕ ಸಂಪೂರ್ಣವಾಗಿ ನವೀಕರಿಸಲಾಗುತ್ತದೆ. ಇತರ ದೊಡ್ಡ ಬದಲಾವಣೆಯು ಹೊಸದಾಗಿ ವಿನ್ಯಾಸಗೊಳಿಸಲಾದ 5 ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಆಗಿದೆ.

Hyundai Creta Facelift

ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಹೊಸ ಹ್ಯುಂಡೈ ಕ್ರೆಟಾ ಹೊಸ ವೆರ್ನಾ ಸೆಡಾನ್‌ನೊಂದಿಗೆ ಇಂಟೀರಿಯರ್ ಸ್ಟೈಲಿಂಗ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಇಂಟಿಗ್ರೇಟೆಡ್ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಆಗಿದೆ.

ಇದಲ್ಲದೆ ಎಸ್‍ಯುವಿ ವೆರ್ನಾದ ಬದಲಾಯಿಸಬಹುದಾದ ಹವಾಮಾನ ಮತ್ತು ಇನ್ಫೋಟೈನ್‌ಮೆಂಟ್ ಕಂಟ್ರೋಲ್ ಗಳನ್ನು ಪಡೆಯುವ ಸಾಧ್ಯತೆಯಿದೆ. ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಇಂಡಿಯಾ-ಸ್ಪೆಕ್ ಹೊಸ ಕ್ರೆಟಾ ವಿಭಿನ್ನ ಶೈಲಿಯನ್ನು ಹೊಂದಿರುತ್ತದೆ. ಈ ಹೊಸ ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

ಇದು 1.5-ಲೀಟರ್ NA ಪೆಟ್ರೋಲ್ ಮತ್ತು 1.5L ಟರ್ಬೊ ಡೀಸೆಲ್ ಎಂಜಿನ್ ಗಳಾಗಿದೆ. ಹ್ಯುಂಡೈ ಕಂಪನಿಯು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ. ಏಕೆಂದರೆ ಇದನ್ನು BS6 ಹಂತ II ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ. ಹೊಸ ಹ್ಯುಂಡೈ ಕ್ರೆಟಾವು ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ವೀಕರಿಸುತ್ತದೆ, ಇದನ್ನು ಇತ್ತೀಚೆಗೆ ಹೊಸ ವೆರ್ನಾ ಮತ್ತು ಅಲ್ಕಾಜರ್‌ನಲ್ಲಿ ಪರಿಚಯಿಸಲಾಗಿದೆ.

ಈ ಎಂಜಿನ್ 160PS ಮತ್ತು 253Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.4 ಲೀಟರ್ ಟರ್ಬೊ ಯುನಿಟ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹೊಸ ಕ್ರೆಟಾ 1.5 ಲೀಟರ್ ಅದರ ವರ್ಗದಲ್ಲಿ ಅತ್ಯಂತ ಶಕ್ತಿಶಾಲಿ ಮಾದರಿಗುತ್ತದೆ. ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಕದ್ದ ವಾಹನ ಟ್ರ್ಯಾಕಿಂಗ್ ಪೀಚರ್ ಅನ್ನು ಹೊಂದಿದೆ.

ಇದರೊಂದಿಗೆ ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜ್ನಸಿ ಬ್ರೇಕಿಂಗ್ ಮತ್ತು ಫಾರ್ವರ್ಡ್ ಕಲಿಷನ್ ಅವೆಡೈನ್ಸ್ ಅನ್ನು ಹೊಂದಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ನೀಡಲಾಗಿರುವುದರಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್ಸ್) ಸೇರಿದಂತೆ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅನ್ನು ಮೊದಲು GIIAS 2021 ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು.

Article Published On: Monday, December 25, 2023, 15:00 [IST]
English summary
2024 hyundai creta facelift suv spied details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+