2024 ಕಿಯಾ ಸಾನೆಟ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಬಿಡುಗಡೆ: ಏನೆಲ್ಲಾ ನಿರೀಕ್ಷಿಸಬಹುದು?

ಕಿಯಾ ಸಾನೆಟ್ (Kia Sonet) ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಬ್-4m SUV ಗಳಲ್ಲಿ ಒಂದಾಗಿದೆ. ಆದ್ರೆ ಇದೇ ವಿಭಾಗದಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಿರುವ ಕಾರಣ ದಕ್ಷಿಣ ಕೊರಿಯಾದ ವಾಹನ ತಯಾರಕರು ಭಾರತದಲ್ಲಿ ಸಾನೆಟ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದಾರೆ.

ಮೂಲಗಳ ಪ್ರಕಾರ, ಮುಂಬರುವ ಕಿಯಾ ಸಾನೆಟ್ ಫೇಸ್‌ಲಿಫ್ಟ್ ಮುಂಬರುವ ತಿಂಗಳುಗಳಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಮಾದರಿಯ ವಿತರಣೆಗಳು 2024 ರಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಮುಂಬರುವ ಹೊಸ ಸಾನೆಟ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಯಾವೆಲ್ಲಾ ಹೊಸ ಅಪ್‌ಡೇಟ್‌ಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

2024-kia-sonet-facelift-launch-soon-what-to-expect

ಹೇಳುವುದಾದರೆ, ಪವರ್‌ಟ್ರೇನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತಿಲ್ಲ. ಬೇಸ್ 1.2-ಲೀಟರ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 81.8 bhp ಪವರ್ ಹಾಗೂ 115 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿ ಬರಲಿದೆ.

ಮತ್ತೊಂದೆಡೆ, ಎರಡನೇ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಯು ಹೆಚ್ಚು ಶಕ್ತಿಶಾಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ 118.4 bhp ಪವರ್ ಮತ್ತು 172 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದಲ್ಲದೆ, ಗ್ರಾಹಕರು ಈ ಪವರ್‌ಟ್ರೇನ್‌ನೊಂದಿಗೆ 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದು.

2024-kia-sonet-facelift-launch-soon-what-to-expect

ಅಂತಿಮವಾಗಿ 2024 ಕಿಯಾ ಸಾನೆಟ್ ಫೇಸ್‌ಲಿಫ್ಟ್ ಡೀಸೆಲ್ ಮಾದರಿಯು 1.5-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ 115 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಅನ್ನು 6 ಸ್ಪೀಡ್ iMT ಯುನಿಟ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಈಗ ವಿನ್ಯಾಸದ ಬಗ್ಗೆ ಹೇಳುವುದಾದ್ರೆ, 2024 ಕಿಯಾ ಸಾನೆಟ್ ಫೇಸ್‌ಲಿಫ್ಟ್ ಎಸ್‌ಯುವಿಯು ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಒಂದು ಜೋಡಿ ಹೊಸ ಹೆಡ್‌ಲೈಟ್‌ಗಳು, ಹೊಸ ಎಲ್‌ಇಡಿ ಡಿಆರ್‌ಎಲ್‌ಗಳು, ರಿಪ್ರೊಫೈಲ್ಡ್ ಫ್ರಂಟ್ ಮತ್ತು ರಿಯರ್ ಬಂಪರ್‌ಗಳು, ಮರುವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್‌ಗಳು ಸೇರಿದಂತೆ ಗಮನಾರ್ಹ ವಿನ್ಯಾಸ ಬದಲಾವಣೆಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

2024-kia-sonet-facelift-launch-soon-what-to-expect

2024 ಕಿಯಾ ಸಾನೆಟ್ ಫೇಸ್‌ಲಿಫ್ಟ್ ಎಸ್‌ಯುವಿ ಇಂಟೀರಿಯರ್ ವಿಷಯಕ್ಕೆ ಬಂದರೆ, ಮುಂಬರುವ Kia Sonet ಫೇಸ್‌ಲಿಫ್ಟ್ SUV ಮರುಹೊಂದಿಸಲಾದ ಡ್ಯಾಶ್‌ಬೋರ್ಡ್, ಹೊಸ ವಸ್ತುಗಳು, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಹೆಚ್ಚು ಆಧುನಿಕ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಬದಲಾವಣೆಗಳ ಜೊತೆಗೆ, ಮುಂಬರುವ Kia Sonet ಫೇಸ್‌ಲಿಫ್ಟ್ SUV ಎಲ್ಲಾ ರೂಪಾಂತರಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೆಚ್ಚುವರಿಯಾಗಿ, ಟಾಪ್-ಸ್ಪೆಕ್ ಮಾಡೆಲ್‌ಗಳಲ್ಲಿ ADAS ಟೆಕ್ ಸೇರಿದಂತೆ ಸಾಕಷ್ಟು ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ Sonet ಫೇಸ್‌ಲಿಫ್ಟ್ SUV ಬರಲಿದೆ ಎಂದು ನಾವು ನಿರೀಕ್ಷಿಸಲಾಗಿದೆ.

2024-kia-sonet-facelift-launch-soon-what-to-expect

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Wednesday, November 29, 2023, 8:30 [IST]
English summary
2024 kia sonet facelift launch soon what to expect
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+