ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ರೂಪದಲ್ಲಿ ಬರುತ್ತಿದೆ ಜನಪ್ರಿಯ ಟೊಯೊಟಾ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಟೀಸರ್ ಸಿಲೂಯೆಟ್ ಅನ್ನು ಬಹಿರಂಗಪಡಿಸುವ ಮೂಲಕ ಮಾದರಿಯ ಒಂದು ಲುಕ್ ಅನ್ನು ಒದಗಿಸುತ್ತದೆ. ನ್ಯೂ ಜನರೇಷನ್ 2024ರ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯು ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ (Toyota Land Cruiser Prado) ಎಸ್‌ಯುವಿಯು ದೊಡ್ಡ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಮಾದರಿಯಂತೆ ಅದೇ ಟಿಎನ್‌ಜಿಎ-ಎಫ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಇದರರ್ಥ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‌ಯುವಿ ದೊಡ್ಡದಾಗಿದೆ ಮಾತ್ರವಲ್ಲದೆ ಲ್ಯಾಂಡ್ ಕ್ರೂಸರ್ 300 ನಿಂದ ಅನೇಕ ಪ್ರೀಮಿಯಂ ಬಿಟ್‌ಗಳನ್ನು ಬಳಸುತ್ತದೆ.

2024 Toyota Land Cruiser Prado

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿ ಸಂಪೂರ್ಣವಾಗಿ ಹೊಸ ಬಾಕ್ಸಿ ವಿನ್ಯಾಸದ ಶೈಲಿಯನ್ನು ಹೊಂದಿದೆ. ಇನ್ನೂ ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯ ಹಿಂದಿನ ಮಾದರಿಗೆ ಹೋಲಿಸಿದರೆ ಗಣನೀಯವಾಗಿ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಇದರಲ್ಲಿ ಟೊಯೊಟಾ ವಿನ್ಯಾಸಕಾರರ ತಂಡ ಉತ್ತಮ ಕೆಲಸ ಮಾಡಿದ್ದಾರೆ.

ಮುಂಬರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯು ಆಫ್-ರೋಡ್ ಉತ್ಸಾಹಿಗಳಿಗೆ ಮತ್ತು ಲೈಫ್ ಸ್ಟಲ್ ಎಸ್‍ಯುವಿ ಖರೀದಿರರನ್ನು ಹೆಚ್ಚು ಸೆಳೆಯಬಹುದು. ಈ ಎಸ್‍ಯುವಿಯು ದಪ್ಪ ವಿನ್ಯಾಸದ ಸೆಳೆಯು ಹೆಚ್ಚು ಜನರನ್ನು ಸೆಳೆಯಬಹುದು. ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊದ ಪ್ರಸ್ತುತ ಆವೃತ್ತಿಯು ಟೊಯೊಟಾ 4 ರನ್ನರ್, ಎಫ್‌ಜೆ ಕ್ರೂಸರ್ ಮತ್ತು ಹಿಲಕ್ಸ್ ಆಧಾರಿತ ಮಾದರಿಗಳೊಂದಿಗೆ ಅದರ ಅನೇಕ ಯುನಿಟ್ ಗಳನ್ನು ಹಂಚಿಕೊಳ್ಳುತ್ತದೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಫೋರ್ಡ್ ಎವರೆಸ್ಟ್, ಇಸುಝು MU-X, ಮಿಟ್ಸಿಬಿಷಿ ಪಜೆರೊ ಸ್ಪೋರ್ಟ್ ಮತ್ತು ಹೆಚ್ಚಿನ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮುಂಬರುವನ್ಯೂ ಜನರೇಷನ್ 2024ರ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯು ಹೆಚ್ಚು ಪ್ರೀಮಿಯಂಯಾಗಿದ್ದು, ಪ್ರೀಮಿಯಂ ಎಸ್‍ಯುವಿಗಳ ವಿಭಾಗದಲ್ಲಿ ಸ್ಥಾನವನ್ನ್ನು ಪಡೆಯುತ್ತದೆ.

ಇದು ಪ್ರೀಮಿಯಂ ಟೊಯೊಟಾ ಮಾದರಿಯಾಗಿರುವುದರಿಂದ ಲ್ಯಾಂಡ್ ರೋವರ್ ಡಿಫೆಂಡರ್, BMW X5, Volvo XC90 ಮತ್ತು ಇತರ ಪ್ರೀಮಿಯಂ ಎಸ್‍ಯುವಿಗಳಿಗೂ ಪೈಪೋಟಿ ನೀಡುತ್ತದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊದ ಪ್ರಸ್ತುತ ಆವೃತ್ತಿಯು ಟೊಯೊಟಾ ಫಾರ್ಚುನರ್‌ನಂತೆಯೇ ಅದೇ 2.8-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಈ ಎಂಜಿನ್ 201 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಎಂಜಿನ್ ಅನ್ನು ನ್ಯೂ ಜನರೇಷನ್ ಮಾದರಿಗೂ ನೀಡುವ ಸಾಧ್ಯತೆಗಳಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ 300 ಸರಣೆ ಮಾದರಿಗಳಿಗೆ ಶಕ್ತಿ ನೀಡುವ 3.3-ಲೀಟರ್, ಟರ್ಬೋಚಾರ್ಜ್ಡ್, V6 ಡೀಸೆಲ್ ಎಂಜಿನ್ ಅನ್ನು ಪರಿಚಯಿಸುವ ಸಾಧ್ಯತೆಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Monday, July 10, 2023, 20:01 [IST]
English summary
2024 toyota land cruiser prado suv teased details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+