ಅತಿ ಚಿಕ್ಕ ವಯಸ್ಸಿನಲ್ಲೇ 4 ಕೋಟಿ ರೂ. ಕಾರು ಖರೀದಿ... ಯಾರೀತ?
ವಿಶ್ವದಾದ್ಯಂತ ಇರುವ ಐಷಾರಾಮಿ ಕಾರುಗಳಲ್ಲಿ ಬೆಂಝ್ ಕಂಪನಿಯ ಕಾರುಗಳಿಗೆ ಪ್ರತ್ಯೇಕ ಸ್ಥಾನವಿದೆ. ಸದ್ಯ ಈ ಬ್ರಾಂಡ್‌ನ Mercedes-Maybach S 680 ಐಷಾರಾಮಿ ಸೆಡಾನ್ ಅನ್ನು ಕೇವಲ 33 ವರ್ಷದ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಈ ಮೂಲಕ Mercedes-Maybach S 680 ಅನ್ನು ಖರೀದಿಸಿದ ದೇಶದ ಅತ್ಯಂತ ಕಿರಿಯ ವ್ಯಕ್ತಿ ಎಂದು ಗುರ್ತಿಸಿಕೊಂಡಿದ್ದಾರೆ.
ಈ ಮರ್ಸಿಡಿಸ್ ಮೇಬ್ಯಾಕ್ ಎಸ್ 680 ಕಾರು ಇನ್ಯಾರ ಬಳಿಯು ಇಲ್ಲವೇ ಎಂದು ನಿಮಗನಿಸಬಹುದು, ಇದೆ ಭಾರತದಲ್ಲಿ ಹಲವರು ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಇದನ್ನು ಖರೀದಿಸಿದ್ದಾರೆ. ಆದರೆ ಈ ಕಾರಿನ ಬೆಲೆ ಕೇಳಿದ್ರೆ ದಂಗಾಗ್ತೀರ, ಇದರ ಬೆಲೆ ಬರೋಬ್ಬರಿ 4 ಕೋಟಿ ರೂ. ಇದೆ. ಕಸ್ಟಮೈಸೇಷನ್ ಭಾಗವಾಗಿ ಹೆಚ್ಚುವರಿ ಅಕ್ಸೆಸೊರಿಗಳನ್ನು ಖರೀದಿಸಿರೆ ಬೆಲೆ ಇನ್ನೂ ಹೆಚ್ಚಾಗುತ್ತದೆ.

ಇತ್ತೀಚೆಗೆ 33 ವರ್ಷ ವಯಸ್ಸಿನ ಅಭಿಷೇಕ್ 'ಮಾಂಟಿ' ಅಗರ್ವಾಲ್ ಎಂಬುವರು ಹೊಚ್ಚ ಹೊಸ Mercedes Maybach S 680 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ. ಅಭಿಷೇಕ್ ಪರ್ಪಲ್ ಸ್ಟೈಲ್ ಲ್ಯಾಬ್ಸ್ ಸಂಸ್ಥಾಪಕರಾಗಿದ್ದು, ಇವರ ಕಂಪನಿ ಪ್ರಸ್ತುತ ಭಾರತದ ಅತಿದೊಡ್ಡ ಫ್ಯಾಷನ್ ಮನೆಗಳಲ್ಲಿ ಒಂದಾಗಿದೆ. ಸದ್ಯ ಇವರು ದೇಶದಲ್ಲಿ ಮೇಬ್ಯಾಕ್ ಸೆಡಾನ್ ಹೊಂದಿರುವ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.
ಅಭಿಷೇಕ್ 'ಮಾಂಟಿ' ಅಗರ್ವಾಲ್ ಅವರು ಮುಂಬೈನಲ್ಲಿ ಪ್ರಮುಖ ಐಷಾರಾಮಿ ಸೆಡಾನ್ ವಿತರಣೆಯನ್ನು ಪಡೆದರು. ಅಭಿಷೇಕ್ ತನ್ನ ಹೊಚ್ಚ ಹೊಸ ಐಷಾರಾಮಿ ಸೆಡಾನ್ ಡೆಲಿವರಿ ಪಡೆಯುವ ಚಿತ್ರಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿವೆ. ಈ ಫೋಟೋಗಳನ್ನು ಸೆಲೆಬ್ರಿಟಿಗಳ ಫೋಟೋಗ್ರಾಫರ್ (ಪಾಪರಾಜಿ) ವೈರಲ್ ಭಯಾನಿ ಕ್ಲಿಕ್ ಮಾಡಿ ಇನ್‌ಸ್ಟಾ ಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರಿನ ವಿಶೇಷತೆಗಳು: Mercedes-Benz ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಮೇಬ್ಯಾಕ್ ಎಸ್-ಕ್ಲಾಸ್ ಕೂಡ ಒಂದು. ಮರ್ಸಿಡಿಸ್ ಮೇಬ್ಯಾಕ್ ಎಸ್-ಕ್ಲಾಸ್ ಸಾಮಾನ್ಯ ಎಸ್-ಕ್ಲಾಸ್‌ಗಿಂತ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಇದು ಪ್ರಮಾಣಿತ S-ಕ್ಲಾಸ್ ಸೆಡಾನ್ ಅನ್ನು ಆಧರಿಸಿದ್ದರೂ ಹೆಚ್ಚು ಉದ್ದವಾಗಿ ಬರುವುದರಿಂದ ಬೆಲೆ ಕೂಡ ಹೆಚ್ಚಾಗಿರುತ್ತದೆ.
ಮರ್ಸಿಡಿಸ್ ಮೇಬ್ಯಾಕ್ ಎಸ್ ಕ್ಲಾಸ್ 180 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆಯುತ್ತದೆ. ಹಿಂದಿನ ಸೀಟಿನಲ್ಲಿ ಕೂರುವ ಪ್ರಯಾಣಿಕರಿಗೆ ವಿಶಾಲವಾದ ಕ್ಯಾಬಿನ್ ಅನ್ನು ನೀಡುತ್ತದೆ. ಮೇಬ್ಯಾಕ್ ಎಸ್ 680 ಸುಮಾರು 5.5 ಮೀಟರ್ ಉದ್ದವಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಲಭ್ಯವಿರುವ ಅತಿ ಉದ್ದವಾದ ಕಾರುಗಳಲ್ಲಿ ಸ್ಥಾನ ಧಕ್ಕಿಸಿಕೊಂಡಿದೆ.
Mercedes-Maybach S 680 6.0 ಲೀಟರ್ ಟರ್ಬೋಚಾರ್ಜ್ಡ್ V12 ಎಂಜಿನ್‌ನಿಂದ ಚಾಲಿತವಾಗಿದೆ. ಇದು ಪ್ರಸ್ತುತ ಭಾರತದಲ್ಲಿ Mercedes-Benz ನೀಡುವ ಅತಿದೊಡ್ಡ ಎಂಜಿನ್ ಆಗಿದೆ. ಈ ಎಂಜಿನ್ ಗರಿಷ್ಠ 610 Ps ಮತ್ತು 900 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೆಡಾನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications
