ಟ್ರಾಫಿಕ್‌ನಲ್ಲಿ ಕಾರು ಓಡಿಸಿದ 6 ವರ್ಷದ ಬಾಲಕ... ತಂದೆಯ ವಿರುದ್ಧ ನೆಟ್ಟಿಗರ ಆಕ್ರೋಶ
ಭಾರತದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಓಡಿಸುವುದು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದೆ. ವಾಹನ ಓಡಿಸಬೇಕಾದರೆ ಕನಿಷ್ಠ 18 ವರ್ಷ ತುಂಬಿರಬೇಕು ಜೊತೆಗೆ ಡಿಎಲ್ ಪಡೆದುಕೊಂಡಿರಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ 12- 15 ವರ್ಷ ವಯಸ್ಸಿನ ಮಕ್ಕಳು ಕೂಡ ವಾಹನ ಚಲಾಯಿಸಿ ಅಪಘಾತಕ್ಕೆ ತುತ್ತಾಗಿರುವ ಹಲವು ಉದಾಹರಣೆಗಳನ್ನು ನೋಡಿದ್ದೇವೆ.
ಇದೀಗ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಕೇವಲ 6 ವರ್ಷದ ಹುಡುಗ ವಾಹನ ಚಲಾಯಿಸಿದ್ದಾನೆ. ಅದು ಕೂಡ ದ್ವಿಚಕ್ರ ವಾಹನವಲ್ಲ ಇದು ಕಾರು, ಹ್ಯುಂಡೈ ಕ್ರೆಟಾವನ್ನು ಓಡಿಸಿದ್ದಾನೆ. ಸ್ವತಃ ಅವನ ತಂದೆಯೇ ಇದಕ್ಕೆ ಸಾತ್ ನೀಡಿದ್ದು, ತೊಡೆಯ ಮೇಲೆ ಕೂರಿಸಿಕೊಂಡು ಕಾರನ್ನು ಓಡಿಸಲು ಬೇಕಾದ ತರಬೇತಿ ನೀಡಿರುವುದನ್ನು ನೋಡಬಹುದು.

ತೀರಾ ಇತ್ತೀಚೆಗೆ ಈ ವಿಡಿಯೋವನ್ನು ಮಾಡಲಾಗಿದ್ದು, 6 ವರ್ಷದ ಹುಡುಗ ಹ್ಯುಂಡೈ ಕ್ರೆಟಾವನ್ನು ಚಾಲನೆ ಮಾಡುತ್ತಿರುವ ವಿಡಿಯೋ ಯ್ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಡ್ರೈವಿಂಗ್ ಸೀಟಿನಲ್ಲಿ ಹುಡುಗ ತನ್ನ ತಂದೆಯ ಮಡಿಲಲ್ಲಿ ಕುಳಿತಿರುವುದನ್ನು ನೋಡಬಹುದು. ಕಾರು ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಆಗಿದ್ದು, ತಂದೆ ಗೇರ್ ಬಾಕ್ಸ್ ಮತ್ತು ಪೆಡಲ್‌ಗಳನ್ನು ನಿರ್ವಹಿಸುವುದನ್ನು ಕಾಣಬಹುದು.
ಮಗ ತನ್ನ ಮಡಿಲಲ್ಲಿ ಕುಳಿತು ಸ್ಟೀರಿಂಗ್ ಅನ್ನು ನಿಭಾಯಿಸುತ್ತಿರುವಾಗ ತಂದೆ ನಗುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿರುವುದನ್ನು ನೋಡಬಹುದು. ರಸ್ತೆಯು ದಟ್ಟಣೆಯಿಂದ ತುಂಬಿ ವಾಹನಗಳು ಹಾದುಹೋಗುವುದರ ನಡುವೆಯೂ ಮಗನಿಗೆ ಸ್ಟೀರಿಂಗ್ ನೀಡಿರುವುದು ಮೂರ್ಖತನ ಎಂದು ಹೇಳಬಹುದು. ಬಾಲಕನಿಗೆ ಯಾವುದೇ ರೀತಿಯ ಸುರಕ್ಷತಾ ಸಾಧನವನ್ನು ಅಳವಡಿಸಿಲ್ಲ.

ತಂದೆ ಮಾತ್ರ ಸೀಟ್ ಬೆಲ್ಟ್ ಧರಿಸಿದ್ದಾರೆ. ಒಂದು ವೇಳೆ ಅಪಘಾತವಾದ್ರೂ ಬಾಲಕನಿಗೆ ತುಂಬಾ ಗಂಭೀರ ಗಾಯಗಳಾಗಬಹುದು ಅಥವಾ ಪ್ರಾಣಾಪಾಯದ ಸಾಧ್ಯತೆಗಳು ಕೂಡ ಇವೆ. ಏಕೆಂದರೆ ಅಪಘಾತಕ್ಕೀಡಾಗಿದ್ದರೆ ಏರ್ ಬ್ಯಾಗ್ ನಿಯೋಜನೆಗೊಂಡು, ಉಸಿರುಗಟ್ಟಿಸುವ ಜೊತೆಗೆ ಮಗುವಿನ ಸಾವಿಗೆ ಕಾರಣವಾಗಬಹುದು. ಇಷ್ಟೆಲ್ಲಾ ಬೇಜವಾಬ್ದಾರಿ ನಡುವೆ ಆಶ್ಚರ್ಯಕರ ವಿಯಷವೆಂದರೆ ವಿಡಿಯೋ ಅಪ್‌ಲೋಡ್ ಮಾಡಿರುವುದು.
ತಾವು ಮಾಡಿರುವುದು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾದ್ರೂ ಅದನ್ನು ನಿರ್ಭಯವಾಗಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ಯಾವ ಪ್ರದೇಶದಲ್ಲಿ ಚಿತ್ರಿಸಲಾಗಿದೆ, ವಿಡಿಯೋದಲ್ಲಿ ಇರುವವರು ಯಾರು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಪೊಲೀಸರು ಇದನ್ನು ಗಂಭಿರವಾಗಿ ಪರಿಗಣಿಸಿ ವಿಡಿಯೋದಲ್ಲಿ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ವಿಡಿಯೋ ನೋಡಿರುವವರು ಕಮೆಂಟ್ ಮಾಡುತ್ತಿದ್ದಾರೆ.
ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳನ್ನು ನಮ್ಮ ಡ್ರೈವ್‌ಸ್ಪಾರ್ಕ್ ತಂಡವು ಕವರ್ ಮಾಡಿದೆ. ಈ ಹಿಂದೆ 12 ವರ್ಷದ ಬಾಲಕ ಕಾರನ್ನು ಓಡಿಸುತ್ತಿದ್ದರೆ, ತಂದೆ ಪಕ್ಕದ ಸೀಟಿನಲ್ಲಿ ಕುಳಿತು ವಿಡಿಯೋ ಮಾಡಿದ್ದ. ಈ ವಿಡಿಯೋ ಹೊರ ಬರುತ್ತಿದಂತೆ ಅಲ್ಲಿನ ಸ್ಥಳೀಯ ಪೋಲಿಸರು ಕ್ರಮ ಕೈಗೊಂಡಿದ್ದರು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications