ಹೊಸ ಕಾರು ಡೆಲಿವರಿ ಪಡೆದ ಖುಷಿ 5 ನಿಮಿಷವು ಇರಲಿಲ್ಲ... ಶೋರೂಂ ಮುಂದೆಯೇ ಅವಘಡ
ಡೀಲರ್‌ಶಿಪ್‌ಗಳು ಯಾವಾಗಲು ತಮ್ಮ ಗ್ರಾಹಕರಿಗೆ ಡೆಲಿವರಿ ನೀಡುವ ಸಮಯದಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ. ಒಂದು ವೇಳೆ ಅವಘಡ ಸಂಭವಿಸಿದರೆ ವಾಹನದ ಸಂಪೂರ್ಣ ಜವಾಬ್ದಾರಿ ಅವರೇ ವಹಿಸಿಕೊಳ್ಳುವುದರಿಂದ ತುಂಬಾ ಕಾಳಜಿ ವಹಿಸಲಾಗುತ್ತದೆ. ಆದರೆ ಇತ್ತೀಚೆಗೆ ಹೊಸ ಕಾರೊಂದು ಡೆಲಿವರಿಯಾಗಿ ಹೊರ ನಡೆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ.
ಇತ್ತೀಚೆಗೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಡೀಲರ್‌ಶಿಪ್‌ನ ಮುಂಭಾಗದಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಹೊಸ ಕಾರಿನ ಡೆಲಿವರಿಯು ತಪ್ಪಾಗಿ ನೀಡಿರುವಂತೆ ತೋರುತ್ತಿದೆ, ಇದರ ಪರಿಣಾಮವಾಗಿ ವರ್ಟಸ್ 6 ರಿಂದ 7 ಅಡಿಗಳಷ್ಟು ಕೆಳಗೆ ಬಿದ್ದು, ಕಾರಿನ ಮುಂಭಾಗ ರಸ್ತೆಗೆ ಅಪ್ಪಳಿಸಿದೆ. ಈ ಅಪಘಾತ ಶೋರೂಂ ಮುಂಭಾಗವೇ ನಡೆದಿರುವುದನ್ನು ನಾವು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಶೋರೂಂ ಸಿಬ್ಬಂದಿಯಿಂದಲೇ ಈ ಅವಘಡ ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ.

ಕೆಲವೊಮ್ಮೆ ಡೀಲರ್‌ಶಿಪ್‌ಗಳಲ್ಲಿ ವಿಪರೀತ ಜನರಿದ್ದಾಗ ಗೊಂದಲದ ವಾತಾವರಣದಲ್ಲಿ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಡೀಲರ್‌ಶಿಪ್ ಸಿಬ್ಬಂದಿ ಜವಾಬ್ದಾರರಾಗಿ ನೋಡಿಕೊಳ್ಳುತ್ತಾರೆ. ಆದರೆ ಇತರ ಸಂದರ್ಭಗಳಲ್ಲಿ ಡೆಲಿವರಿ ಪಡೆಯಲು ಡೀಲರ್‌ಶಿಪ್‌ಗೆ ಬಂದ ಗ್ರಾಹಕರೆ ಇಂತಹ ಅಪಘಾತಗಳಿಗೆ ಕಾರಣರಾಗಬಹುದು. ಸಾಮಾನ್ಯವಾಗಿ ವಾಹನಗಳನ್ನು ನಿಧಾನವಾಗಿ ಹೊರತರಲು ಶೋರೂಂ ಇಳಿಜಾರಿನ ಮುಂಭಾಗವನ್ನು ಹೊಂದಿರುತ್ತವೆ. ಈ ವೇಳೆ ಜಾಗರೂಕರಾಗಿ ವ್ಯವಹರಿಸಬೇಕು. ಸ್ವಲ್ಪ ಯಾಮಾರಿದರೂ ಹೊಸ ವಾಹನಗಳು ಅಪಘಾತಕ್ಕೀಡಾಗುವುದು ಖಚಿತ.
ಈ ಘಟನೆಯಲ್ಲೂ ನಾವು ಸೂಕ್ಷ್ಮವಾಗಿ ಗಮನಿಸಿದರೆ ಇಳಿಜಾರಿನ ರಸ್ತೆಯಿಂದ ನಿಧಾನವಾಗಿ ಹೊರಬಂದ ಕಾರು ಎಡಕ್ಕೆ ಅಥವಾ ಬಲಕ್ಕೆ ತಿರುಗದೇ ಸೀದಾ ಮುಂದಿರುವ ಆಳಕ್ಕೆ ಬಿದ್ದಿದೆ. ಸಾಮಾನ್ಯವಾಗಿ ಕಾರುಗಳನ್ನು ಸಲೀಸಾಗಿ ಹೊರತರಲು ಶೋರೂಂಗಳು ಕೂಡ ಉದ್ದವಾದ ಇಳಿಜಾರಿನ ರಸ್ತೆಯನ್ನು ನಿರ್ಮಿಸಿರುತ್ತಾರೆ. ಅಪಘಾತಗಳು ನಡೆಯದಂತೆ ಎಲ್ಲಾ ವಿಧದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೂ ಇಂತಹ ಘಟನೆಗಳು ನಡೆಯಲು ಪ್ರಮುಖ ಕಾರಣವೆಂದರೆ ಚಾಲಕನ ನಿರ್ಲಕ್ಷ್ಯ ಅಥವಾ ಡ್ರೈವಿಂಗ್ ಬಾರದಿರುವುದು.

ಇದಲ್ಲದೆ, ವಿತರಣೆಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಉತ್ಸುಕತೆ ಮತ್ತು ಇದರ ಜೊತೆಗೆ ಕೆಲ ಗೊಂದಲಗಳು ಚಾಲಕರು ತಪ್ಪು ಮಾಡಲು ಕಾರಣವಾಗಬಹುದು. ಇಂತಹ ಘಟನೆಗಳಿಗೆ ಮತ್ತೊಂದು ಕಾರಣವೆಂದರೆ ವರ್ಟಸ್‌ನಂತಹ ಹೊಸ ಕಾರುಗಳೊಂದಿಗೆ ಈಗ ಲಭ್ಯವಿರುವ ಸುಧಾರಿತ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಎಂಜಿನ್‌ಗಳನ್ನು ಅರ್ಥಮಾಡಿಕೊಳ್ಳುವುದು. ಇತ್ತಿಚೆಗೆ ಬರುತ್ತಿರುವ ಎಲ್ಲಾ ಕಾರುಗಳು ಕೂಡ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಅವುಗಳ ಬಗ್ಗೆ ಗ್ರಾಹಕರಿಗೆ ಮೊದಲೇ ತಿಳಿದಿದ್ದರೆ ಇಂತಹ ಘಟನೆಗಳನ್ನು ತಡೆಯಬಹುದು.
ಅಷ್ಟೇನು ಡ್ಯಾಮೇಜ್ ಆಗಿಲ್ಲ
ಅಪಘಾತವಾದ ವರ್ಟಸ್ ಅನ್ನು ನೋಡಿದರೆ ಕಾರು ಬಹುಶಃ ನಿಧಾನವಾಗಿ ಕೆಳಕ್ಕೆ ಉರುಳಿದೆ ಎಂದು ತೋರುತ್ತಿದೆ. ಕಾರಿಗೆ ಅಷ್ಟೇನು ಹಾನಿಯಾಗಿಲ್ಲ ಎಂದು ಇದು ಖಚಿತಪಡಿಸಿದೆ. ಎಲ್ಲಾ ವಿಂಡ್ ಶೀಲ್ಡ್, ವಿಂಡೋಗಳು ಹಾಗೇ ಇವೆ. ಅಪಘಾತದ ಪ್ರಭಾವವು ಕಾರಿನ ಪ್ರಮುಖ ಘಟಕಗಳಿಗೆ ದೊಡ್ಡ ಹಾನಿಯನ್ನು ಮಾಡಿಲ್ಲ ಎಂದು ತೋರುತ್ತಿದೆ. ಅಪಘಾತದ ಹೆಚ್ಚಿನ ಪರಿಣಾಮವು ಮುಂಭಾಗದ ಬಂಪರ್ ಮತ್ತು ಮುಂಭಾಗದ ಚಕ್ರಗಳ ಮೇಲೆ ಬಿದ್ದಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ.
ಕಾರು ತನ್ನ ಬಂಪರ್ ಮೇಲೆ ನಿಂತಿದ್ದು ಸಂಪೂರ್ಣವಾಗಿ ರಸ್ತೆಗೆ ಅಪ್ಪಳಿಸಲಿಲ್ಲ. ಒಂದು ವೇಳೆ ವೇಗದಲ್ಲಿ ಬಿದ್ದಿದ್ದರೆ ಕಾರಿನ ಹಿಂಭಾಗಕ್ಕೆ ಗಮನಾರ್ಹ ಹಾನಿ ಸಂಭವಿಸಬಹುದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕಾರಿನ ಮುಂಭಾಗದ ಬಂಪರ್, ಗ್ರಿಲ್, ಲೈಟಿಂಗ್, ಬಾನೆಟ್ ಮತ್ತು ಸೈಡ್ ಫೆಂಡರ್‌ಗಳಿಗೆ ರಿಪೇರಿ ಅಗತ್ಯವಿದೆ. ಬಾನೆಟ್ ಅಡಿಯಲ್ಲಿರುವ ಕೆಲವು ಘಟಕಗಳನ್ನು ಬದಲಾಯಿಸಬೇಕಾಗಬಹುದು. ಒಟ್ಟಿನಲ್ಲಿ ಹೊಸ ಕಾರನ್ನು ಡೆಲಿವರಿ ಪಡೆದ ಖುಷಿಯು ಗ್ರಾಹಕನಿಗೆ ಐದು ನಿಮಿಗಳು ಕೂಡ ಸಿಗದಿರುವುದು ವಿಪರ್ಯಾಸವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
Source: Rushlane
Link: https://www.rushlane.com/volkswagen-virtus-delivery-gone-wrong-crash-12461696.html


Click it and Unblock the Notifications