ಡ್ರೈವಿಂಗ್ ಕಲಿತು ರಸ್ತೆಗಿಳಿಯಬೇಕು... ಬ್ರೇಕ್ ಬದಲಿಗೆ ಆಕ್ಸಿಲೇಟರ್ ಒತ್ತಿದ ಮಹಿಳೆ

ಇತ್ತೀಚೆಗೆ ಡ್ರೈವಿಂಗ್ ಕಲಿತ ಅನೇಕ ಜನರು ಬಿಡುವಿಲ್ಲದ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಆಗಾಗ್ಗೆ ಒತ್ತಡಕ್ಕೆ ಒಳಾಗಾಗುತ್ತಾರೆ. ಇದು ಒಳ್ಳೆಯದಲ್ಲ, ಏಕೆಂದರೆ ಕೆಲವೊಮ್ಮೆ ವಾಹನಗಳಿಗೆ ಡಿಕ್ಕಿ ಹೊಡೆಯಲು ಕಾರಣವಾಗಬಹುದು. ಅಂತಹ ಘಟನೆಯೇ ಇಲ್ಲೊಂದು ನಡೆದಿದ್ದು, ಮಹಿಳೆಯೊಬ್ಬರ ಎಡವಟ್ಟಿನಿಂದ ಕಾರು ನೇರವಾಗಿ ಅಂಗಡಿಯೊಳಗೆ ನುಗ್ಗಿ ಭಾರೀ ಅನಾಹುತವನ್ನು ಸೃಷ್ಟಿಸಿದೆ.

ಮಹಿಳೆಯೊಬ್ಬರು ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ ಪರಿಣಾಮ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಂತಹ ವೀಡಿಯೊವನ್ನು ನಿಖಿಲ್ ರಾಣಾ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ಪ್ರಕಾರ, ಮಹಾರಾಷ್ಟ್ರದಲ್ಲಿ ಅಪಘಾತ ಸಂಭವಿಸಿದೆ. ರೆನಾಲ್ಟ್ ಕ್ವಿಡ್ ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಗಾಬರಿಗೊಂಡು ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಪೆಡಲ್ ಒತ್ತಿದ್ದಾರೆ. ನಿಯಂತ್ರಣ ತಪ್ಪಿದ ಕಾರು 4-5 ಮೆಟ್ಟಿಲು ಹತ್ತಿ ಪಾತ್ರೆ ಅಂಗಡಿಗೆ ಡಿಕ್ಕಿ ಹೊಡೆದಿದೆ.

ಡ್ರೈವಿಂಗ್ ಕಲಿತು ರಸ್ತೆಗಿಳಿಯಬೇಕು... ಬ್ರೇಕ್ ಬದಲಿಗೆ ಆಕ್ಸಿಲೇಟರ್ ಒತ್ತಿದ ಮಹಿಳೆ

ಕಾರಿನ ಗ್ಲಾಸ್, ಡೋರ್ ಒಡೆದು ಅಂಗಡಿಯೊಳಗೆ ಹಾಕಲಾಗಿದ್ದ ಹಲವು ವಸ್ತುಗಳನ್ನು ಛಿದ್ರಗೊಳಿಸಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಏನಾದರೂ ಗಾಯವಾಗಿದೆಯೇ ಅಥವಾ ಇತರರಿಗೆ ಗಾಯವಾಗಿದೆಯೇ ಎಂಬುದನ್ನು ವೀಡಿಯೊದಲ್ಲಿ ಉಲ್ಲೇಖಿಸಲಾಗಿಲ್ಲ. ಕಾರು ಮುಂಭಾಗದ ಮೆಟ್ಟಿಲುಗಳ ಮೇಲೆ ಸಿಲುಕಿಕೊಂಡಿದ್ದರಿಂದ ಸಂಪೂರ್ಣವಾಗಿ ಅಂಗಡಿಗೆ ನುಗ್ಗಲಿಲ್ಲ. ಈ ವೀಡಿಯೊದಲ್ಲಿ ಕಂಡುಬರುವ ಕ್ವಿಡ್ ಆಟೋಮ್ಯಾಟಿಕ್ ಆವೃತ್ತಿಯೇ ಅಥವಾ ಆಕೆ ಈಗಷ್ಟೇ ಕಲಿಯುತ್ತಿದ್ದರಿಂದ ಗಾಬರಿಗೊಂಡು ಹೀಗಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸಾರ್ವಜನಿಕ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಯಾವಾಗಲೂ ಶಾಂತವಾಗಿರಲು ಪ್ರಯತ್ನಿಸಬೇಕು, ಮುಖ್ಯವಾಗಿ ಭಯಪಡಬಾರದು. ಈ ಹಿಂದೆಯೂ ಹೊಸ ಚಾಲಕರಾದವರು ಉದ್ವಿಗ್ನಗೊಂಡ ನಂತರ ವಾಹನವನ್ನು ಅಪಘಾತಪಡಿಸಿದ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಅಂತೆಯೇ, ಮ್ಯಾನ್ಯುವಲ್‌ ಕಾರ್‌ನಿಂದ ಆಟೋಮ್ಯಾಟಿಕ್ ಕಾರುಗಳಿಗೆ ಬದಲಾಯಿಸುವ ಜನರು ಪೆಡಲ್‌ಗಳ ನಡುವೆ ಗೊಂದಲಕ್ಕೊಳಗಾಗುವುದರಿಂದ ಇಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ಅದರಲ್ಲೂ ಸರಿಯಾಗಿ ಡ್ರೈವಿಂಗ್ ಬಾರದಿದ್ದರೂ ವಾಹನಗಳನ್ನು ರಸ್ತೆಗೆ ತರುವುದು ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು.

ಕಾರನ್ನು ಚಾಲನೆ ಮಾಡುವಾಗ ಏಕೆ ಭಯಪಡಬಾರದು ಅಥವಾ ಉದ್ವಿಗ್ನಗೊಳ್ಳಬಾರದು ಎಂಬುದನ್ನು ತೋರಿಸುವ ಉತ್ತಮ ಉದಾಹರಣೆ ಇದಾಗಿದೆ. ಡ್ರೈವರ್ ಉದ್ವಿಗ್ನಗೊಂಡಾಗ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ. ಒಮ್ಮೆ ಅವರು ಅಜಾಗರೂಕರಾದರೆ ಅಪಘಾತದ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಆಗಾಗ್ಗೆ ತಪ್ಪಾದ ಪೆಡಲ್ ಅನ್ನು ಒತ್ತುತ್ತಾರೆ. ಆಗ ಕಾರಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣವನ್ನು ಕಳೆದುಕೊಂಡು ಇಂತಹ ಅನಾಹುತಗಳಿಗೆ ಕಾರಣವಾಗಬಹುದು.

ಭಾರತದಲ್ಲಿ ಈ ರೀತಿ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಫೋಕ್ಸ್‌ವ್ಯಾಗನ್ ವೆಂಟೊ ಮಾಲೀಕರು ತಮ್ಮ ಕಾರನ್ನು ಡ್ರೈವ್‌ಗೆ ಬದಲಾಗಿ ರಿವರ್ಸ್‌ಗೆ ಹಾಕಿ ಬ್ರೇಕ್‌ಗಳ ಬದಲಿಗೆ ಆಕ್ಸಿಲೆಟರ್ ಒತ್ತಿದ್ದರು. ಕಾರು ಏಕಾಏಕಿ ಬಂದು ಗಾಜಿನ ಕಿಟಕಿಗಳನ್ನು ಡಿಕ್ಕಿ ಹೊಡೆದು ರೆಸ್ಟೋರೆಂಟ್ ಒಳ ನುಗಿತ್ತು. ಅದೃಷ್ಟವಶಾತ್ ಆ ವೇಳೆ ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಹಾಗೆಯೇ ಸುತ್ತಮುತ್ತ ಯಾವುದೇ ಇತರ ವಾಹನ ಬರದಿದ್ದ ಕಾರಣ ಯಾವುದೇ ಅನಾಹುತವಾಗಿರಲಿಲ್ಲ.

ಮತ್ತೊಂದು ಪ್ರಕರಣದಲ್ಲಿ, ಕೇರಳದಲ್ಲಿ ಮಹಿಳಾ ಚಾಲಕಿ ಚಲಾಯಿಸುತ್ತಿದ್ದ ಟಾಟಾ ಪಂಚ್ ನಿಯಂತ್ರಣ ತಪ್ಪಿ ಎರಡು ದ್ವಿಚಕ್ರ ವಾಹನಗಳು ಮತ್ತು ಮಾರುತಿ ಓಮ್ನಿ ವ್ಯಾನ್‌ಗೆ ಡಿಕ್ಕಿ ಹೊಡೆದಿತ್ತು. ಅದು ಕೂಡ ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬುತ್ತಿದ್ದ ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಚಾಲಕಿ ಬಹುಶಃ ತಪ್ಪು ಪೆಡಲ್ ಅನ್ನು ಒತ್ತಿ ನಿಯಂತ್ರಣ ಕಳೆದುಕೊಂಡಿದ್ದರು ಎಂದು ವರದಿಯಾಗಿತ್ತು. ಚಾಲಕಿ ಹೆಚ್ಚಿನ ಹಾನಿ ತಪ್ಪಿಸಲು ವಾಹನವನ್ನು ತಿರುಗಿಸಿದ ಕಾರಣ ಅಂತಿಮವಾಗಿ ಮುಂಭಾಗದ ಬ್ಯಾರಿಕೇಡ್ ಅನ್ನು ಡಿಕ್ಕಿ ಹೊಡೆದು ನಿಂತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
A woman who presses the accelerator instead of the brake
Story first published: Wednesday, February 1, 2023, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X