ಬುಲೆಟ್ ಪ್ರೂಫ್ ಕಾರಿಲ್ಲದೆ ಹೊರಬರುತ್ತಿಲ್ಲ ಬಾಲಿವುಡ್ ನಟ ಸಲ್ಮಾನ್ ಖಾನ್: ಭಾರೀ ಭದ್ರತೆ!
ಅಭಿಮಾನಿಗಳಿಂದ ಬಾಲಿವುಡ್ "ಭಾಯಿಜಾನ್" ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಭಾರೀ ಭದ್ರತೆಯಲ್ಲಿ ಓಡಾಡುತ್ತಿದ್ದಾರೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಧ್ಯಪ್ರಾಚ್ಯ ಮಾರುಕಟ್ಟೆಯಿಂದ ಆಮದು ಮಾಡಿಕೊಂಡಿರುವ ತಮ್ಮ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿಯಲ್ಲಿ ಆಗಮಿಸುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರ ಮೂರು ಕಾರುಗಳ ಬೆಂಗಾವಲು ಪಡೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ವೈಯಕ್ತಿಕ ಭದ್ರತಾ ಸಿಬ್ಬಂದಿಯೊಂದಿಗೆ ಬೆಂಗಾವಲು ಪಡೆಯಲ್ಲಿ ಮೊದಲ ಕಾರು ಬ್ಲಾಕ್ ಟೊಯೊಟಾ ಫಾರ್ಚುನರ್ ಆಗಿದ್ದರೆ ಅದರ ಹಿಂದೆ ಸಲ್ಮಾನ್ ಅವರ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಹಿಂಬಾಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಬೆಂಗಾವಲು ಪಡೆಯಲ್ಲಿ ಮೂರನೇ ಎಸ್‌ಯುವಿ ಮಹೀಂದ್ರಾ ಬೊಲೆರೊ ನಿಯೊ ಆಗಿದ್ದು, ಇದರಲ್ಲಿ ಸಲ್ಮಾನ್‌ನ ಭದ್ರತೆಗಾಗಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕಾಣಿಸಿಕೊಂಡರು. ಸಲ್ಮಾನ್ ಖಾನ್ ಅವರ ಹೊಸ ಭದ್ರತಾ ತಂಡವು ಈಗ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳ ಜೊತೆಗೆ ಗನ್‌ಮ್ಯಾನ್ ಅನ್ನು ಸಹ ಒಳಗೊಂಡಿದೆ. ಸೆಕ್ಯುರಿಟಿ ಗಾರ್ಡ್‌ಗಳು ಅಪಾಯವಿಲ್ಲವೆಂದು ಖಚಿತಪಡಿಸಿದ ನಂತರ ನಟ ವಾಹನದಿಂದ ಹೊರಬಂದಿದ್ದಾರೆ.
ಸಲ್ಮಾನ್ ಖಾನ್‌ಗೆ ಇಷ್ಟೊಂದು ಭದ್ರತೆ ಏಕೆ?: ಸಲ್ಮಾನ್ ಖಾನ್ ಇಷ್ಟೊಂದು ಸೆಕ್ಯುರಿಟಿ ಗಾರ್ಡ್‌ಗಳೊಂದಿಗೆ ಏಕೆ ಕಾಣಿಸಿಕೊಂಡಿದ್ದಾರೆ ಎಂದು ಬಹಳಷ್ಟು ಜನರು ಇತ್ತೀಚೆಗೆ ಆಶ್ಚರ್ಯ ಪಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಸಲ್ಮಾನ್ ಖಾನ್ ಅವರಿಗೆ ಅತಿ ದೊಡ್ಡ ಭದ್ರತಾ ಸಿಬ್ಬಂದಿಯನ್ನು ಇತ್ತೀಚೆಗೆ ಏರ್ಪಡಿಸಲಾಗಿದೆ. ಇದಕ್ಕೆ ನಿಜವಾದ ಕಾರಣ ಏನೆಂದರೆ ಸಲ್ಮಾನ್ ಖಾನ್‌ಗೆ ಇತ್ತೀಚೆಗೆ ಸಾಕಷ್ಟು ಕೊಲೆ ಬೆದರಿಕೆಗಳು ಬರುತ್ತಿವೆ.

ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹಿಂದಿನ ಪ್ರಮುಖ ಕ್ರಿಮಿನಲ್ ಮಾಸ್ಟರ್‌ಮೈಂಡ್ - ಲಾರೆನ್ಸ್ ಬಿಷ್ಣೋಯ್ - ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಬಿಷ್ಣೋಯ್ ವಂಶಸ್ಥರಿಗೆ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಸಲ್ಮಾನ್ ಖಾನ್ ವೈಯಕ್ತಿಕವಾಗಿ ಕ್ಷಮೆಯಾಚಿಸುವವರೆಗೂ ಅವರನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ನಿಸ್ಸಾನ್: ಈಗ ಸಲ್ಮಾನ್ ಖಾನ್ ಪ್ರಯಾಣಿಸುತ್ತಿರುವ ವಾಹನದ ವಿಚಾರಕ್ಕೆ ಬಂದರೆ ಅದು ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ. ಈ SUV ಅನ್ನು ಮಧ್ಯಪ್ರಾಚ್ಯ ಮಾರುಕಟ್ಟೆಯಿಂದ ಖಾಸಗಿಯಾಗಿ ಆಮದು ಮಾಡಿಕೊಂಡಿದ್ದಾರೆ. ಇದು ಭಾರತದಲ್ಲಿ ಮಾರಾಟಕಿಲ್ಲ, ಜಪಾನಿನ ತಯಾರಕರು ಉತ್ಪಾದಿಸುವ ಪ್ರಮುಖ SUV ನಿಸ್ಸಾನ್ ಪೆಟ್ರೋಲ್ ಆಗಿದೆ.

ಈ ವಾಹನವು ಗಲ್ಫ್ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಮಾದರಿಯು ಅಂತರಾಷ್ಟ್ರೀಯವಾಗಿ ಬುಲೆಟ್ ಪ್ರೂಫಿಂಗ್‌ಗೆ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ SUV ಯ ನಿಖರವಾದ ಬುಲೆಟ್ ಪ್ರೂಫ್ ರಕ್ಷಣೆಯ ಮಟ್ಟಗಳು ಪ್ರಸ್ತುತ ತಿಳಿದಿಲ್ಲ. ಆದರೆ ಇದಕ್ಕೆ ಉನ್ನತ ಮಟ್ಟದ ರಕ್ಷಣಾ ವ್ಯವಸ್ಥೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್ ಹೊಂದಿರುವ ನಿಸ್ಸಾನ್ ಪೆಟ್ರೋಲ್ 5.6-ಲೀಟರ್ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಬೃಹತ್ ಎಂಜಿನ್ ಗರಿಷ್ಠ 405hp ಪವರ್ ಮತ್ತು 560Nm ಟಾರ್ಕ್ ಉತ್ಪಾದಿಸುತ್ತದೆ. ಇದರ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಾಲ್ಕು-ಚಕ್ರ ಡ್ರೈವ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications