ಹೊಸ ಮಾರುತಿ ಫ್ರಾಂಕ್ಸ್‌ನಲ್ಲಿ ಬಂದು ಅಚ್ಚರಿಗೊಳಿಸಿದ ನಟಿ ರಶ್ಮಿಕಾ ಮಂದಣ್ಣ
ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ತನ್ನ ಹೊಸ ಕ್ರಾಸ್ಒವರ್ ಫ್ರಾಂಕ್ಸ್ ಅನ್ನು ಅನಾವರಣಗೊಳಿಸಿತ್ತು. ಇದಕ್ಕಾಗಿ ಬುಕ್ಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ಫ್ರಾಂಕ್ಸ್ ದೇಶಾದ್ಯಂತ ನೆಕ್ಸಾ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಮಾರುತಿ ಸುಜುಕಿ ಫ್ರಾಂಕ್ಸ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರೆ.
ಮಾಹಿತಿಯ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಲ್ಯಾಕ್ಮೆ ಫ್ಯಾಶನ್ ವೀಕ್‌ಗೆ ಹೊಚ್ಚ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್‌ನಲ್ಲಿ ಆಗಮಿಸಿದ್ದರು. ಫ್ರಾಂಕ್ಸ್ ಕ್ರಾಸ್‌ಒವರ್‌ನಿಂದ ಹೊರಬಂದು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದು ಕಂಪನಿಯ ಪ್ರಚಾರದ ಭಾಗವಾಗಿದ್ದು, ಸಮಾರಂಭದಲ್ಲಿ ಹಲವರ ಗಮನ ಸೆಳೆದಿದೆ. ಇನ್ನು ನಟಿ ರಶ್ಮಿಕಾ ಕಾರು ಇಳಿಯುತ್ತಿದ್ದಂತೆ ಫ್ರಾಂಕ್ಸ್ ಅನ್ನು ವೇದಿಯಿಂದ ಹೊರಗೆ ಕೊಂಡೊಯ್ಯಲಾಯಿತು. ಬಳಿಕ ರಶ್ಮಿಕಾ ವೇದಿಕೆಯ ಸುತ್ತಾ ಒಂದು ರಂಡ್ ಹಾಕಿದರು.

ಮಾರುತಿ ಸುಜುಕಿ ಫ್ರಾಂಕ್ಸ್ ಬಲೆನೊ ಹ್ಯಾಚ್‌ಬ್ಯಾಕ್ ಆಧಾರಿತ ಕ್ರಾಸ್‌ಒವರ್ ಆಗಿದೆ. ಫ್ರಾಂಕ್ಸ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಮಾರುತಿ ಅವರು ಪ್ರತಿದಿನ ಫ್ರಾಂಕ್ಸ್‌ಗಾಗಿ 250 ರಿಂದ 350 ಬುಕಿಂಗ್‌ಗಳನ್ನು ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅನಾವರಣಗೊಂಡಾಗಿನಿಂದ ಈ ಹೊಸ ಕ್ರಾಸ್ ಓವರ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಯಾವಮಟ್ಟಿಗೆ ಅಂದ್ರೆ, ಇದರ ಜೊತೆಗೆ ಅನಾವರಣಗೊಂಡಿದ್ದ ಹೊಸ ಮಾರುತಿ ಜಿಮ್ನಿ 5- ಡೋರ್‌ಗೆ ಪೈಪೋಟಿಯಾಗಿ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದೆ.
ಫ್ರಾಂಕ್ಸ್‌ನ ಮುಂಭಾಗವು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯಿಂದ ಪ್ರೇರಿತವಾಗಿದ್ದು, ಕಾರಿನ ಸೈಡ್ ಪ್ರೊಫೈಲ್ ಸ್ಪಷ್ಟವಾಗಿ ಬಲೆನೊದೊಂದಿಗೆ ಹೆಚ್ಚು ಹೋಲಿಕೆಯನ್ನು ಹೊಂದಿದೆ. ಕಾರಿನ ಹಿಂಭಾಗವು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದ್ದು, ಟೈಲ್ ಗೇಟ್‌ನಾದ್ಯಂತ ಎಲ್ಇಡಿ ಬಾರ್ ಸಂಪರ್ಕಿಸುತ್ತದೆ. ಇದು ಕ್ರಾಸ್‌ಒವರ್ ಆಗಿರುವುದರಿಂದ, ಮಾರುತಿಯ ಇತರ ಹ್ಯಾಚ್‌ಬ್ಯಾಕ್‌ಗಳಿಗಿಂತ ಹೆಚ್ಚು ಮಸ್ಕುಲರ್ ಆಗಿ ಕಾಣುತ್ತದೆ. ವೀಲ್ ಆರ್ಚ್‌ಗಳ ಸುತ್ತ ಕಪ್ಪು ಹೊದಿಕೆ, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಇವೆಲ್ಲವೂ ಅದರ ಕ್ರಾಸ್‌ಒವರ್ ನೋಟವನ್ನು ಹೆಚ್ಚಿಸುತ್ತವೆ.

ಹೊಸ ಫ್ರಾಂಕ್ಸ್‌ನ ಒಳಭಾಗವು ಆಕರ್ಷಕ ಸ್ಟೀರಿಂಗ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಬಲೆನೊದಂತೆಯೇ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಡ್ಯುಯಲ್-ಟೋನ್ ಥೀಮ್ ಅನ್ನು ಪಡೆಯುತ್ತದೆ. ಕಾರು ಲೆಥೆರೆಟ್ ಅಪ್ಹೋಲ್ಸ್ಟರಿ, ವೈರ್‌ಲೆಸ್ ಫೋನ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಫ್ಲೋಟಿಂಗ್ ಟೈಪ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್, ಎಚ್‌ಯುಡಿ ಮತ್ತು ಮುಂತಾದ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಎಂಜಿನ್ ಆಯ್ಕೆಗಳಿಗೆ ಬರುವುದಾದರೆ, ಮಾರುತಿ ಸುಜುಕಿ ಹೊಸ ಕ್ರಾಸ್ ಒವರ್ ಅನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ. 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಅನ್ನು ನೀಡಲಾಗುವುದು. 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಫ್ರಾಂಕ್ಸ್ ಮೂಲಕ ಪುನರಾಗಮನ ಮಾಡುತ್ತಿದೆ. ಇದನ್ನು ಒಮ್ಮೆ ಬೊಲೆನೊ ಆರ್‌ಎಸ್‌ನೊಂದಿಗೆ ನೀಡಲಾಯಿತು, ಅದು ಈ ಹಿಂದೆ ಸ್ಥಗಿತಗೊಂಡಿತ್ತು.
1.0 ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ 100 Ps ಮತ್ತು 147 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುವುದು. ಫ್ರಾಂಕ್ಸ್‌ನೊಂದಿಗೆ ಲಭ್ಯವಿರುವ 1.2 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 89 Ps ಮತ್ತು 113 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ಆಯ್ಕೆಯನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುವುದು. ಮಾರುತಿ ಸುಜುಕಿ ಇಂಡಿಯಾದ ಲೈನ್-ಅಪ್‌ನಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಏಕೈಕ ವಾಹನ ಫ್ರಾಂಕ್ಸ್ ಆಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ನ ಬೆಲೆಯನ್ನು ಇನ್ನೂ ಘೋಷಿಸಿಲ್ಲ. ಕಂಪನಿಯು ಇತ್ತೀಚೆಗೆ ತಮ್ಮ ಮಧ್ಯಮ ಗಾತ್ರದ SUV ಗ್ರಾಂಡ್ ವಿಟಾರಾ CNG ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದೀಗ ಫ್ರಾಂಕ್ಸ್‌ನ ಸಿಎನ್‌ಜಿ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೂ ನಮಗೆ ಆಶ್ಚರ್ಯವೇನಿಲ್ಲ.


Click it and Unblock the Notifications