ಭಾರತದಲ್ಲಿ ಅತಿಹೆಚ್ಚು ಮೈಲೇಜ್ ನೀಡುವ ಕೈಗೆಟುಕುವ ಬೆಲೆಯ ಎಸ್‌ಯುವಿಗಳು
ಹೊಸ ಕಾರನ್ನು ಖರೀದಿಸಲು ನೋಡುವವರೂ ಮೈಲೇಜ್‌ಗೆ ಆದ್ಯತೆ ನೀಡುತ್ತಾರೆ. ಕಡಿಮೆ ಮೈಲೇಜ್ ನೀಡುವ ಕಾರನ್ನು ಖರೀದಿಸಿದರೆ ಗಗನಕ್ಕೇರುತ್ತಿರುವ ಇಂಧನ ಬೆಲೆಗಳು ನಿಮ್ಮ ಜೇಬನ್ನು ಸುಡಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮೈಲೇಜ್ ನೀಡುವ ಕಾರುಗಳು ಸಾಕಷ್ಟಿವೆ. 2023ರಲ್ಲಿ ಲಭ್ಯವಿರುವ ಟಾಪ್ 5 ಇಂಧನ ದಕ್ಷತೆ ಹೊಂದಿರುವ ಎಸ್‌ಯುವಿಗಳು ಇಲ್ಲಿವೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ (27.97 kmpl):
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್ ಕಾರುಗಳಂತೆ ಇದು ಕೂಡ ಅತ್ಯುತ್ತಮ ಎಸ್‌ಯುವಿಯಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5-ಲೀಟರ್ ನಾಲ್ಕು-ಸಿಲಿಂಡರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ (102 PS ಪವರ್), ಮತ್ತು 1.5-ಲೀಟರ್ ಮೂರು-ಸಿಲಿಂಡರ್ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್ (116 PS ಪವರ್) ಅನ್ನು ಹೊಂದಿದೆ.

ಈ ಎಸ್‌ಯುವಿ ಬರೋಬ್ಬರಿ 27.97 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಇದು ಭಾರತದಲ್ಲಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರಾಗಿದೆ. ಅಲ್ಲದೆ, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಹೆಡ್ಸ್-ಅಪ್ ಡಿಸ್ಪ್ಲೇ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರ್ಯಾಂಡ್ ವಿಟಾರಾವನ್ನು ಮೈಲ್ಡ್-ಹೈಬ್ರಿಡ್ ಎಂಜಿನ್‌ನೊಂದಿಗೆ ಐಚ್ಛಿಕ ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಖರೀದಿಸಬಹುದು.
ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (27.97 kmpl):
ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಕಳೆದ ವರ್ಷ ಮಿಡ್-ಸೈಜ್ ಎಸ್‌ಯುವಿ ವಿಭಾಗಕ್ಕೆ ಟೊಯೊಟಾ ಕಂಪನಿ ಪರಿಚಯಿಸಿತು. ಇದು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಹೈಬ್ರಿಡ್ ಆವೃತ್ತಿಯು ಸಹ ಅದೇರೀತಿಯ ಪವರ್‌ಟ್ರೇನ್‌ಗಳನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಈ ಕಾರು, 27.97 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ.
ಟೊಯೊಟಾ ಹೈರಿಡರ್ ಹೈಬ್ರಿಡ್ ಪ್ರಸ್ತುತ ರೂ.15.11 ಲಕ್ಷದಿಂದ ಬೆಲೆಯನ್ನು ಹೊಂದಿದೆ. ಆದರೆ, ಮೈಲ್ಡ್-ಹೈಬ್ರಿಡ್ ಆವೃತ್ತಿಯ ಬೆಲೆ ರೂ.10.48 ಲಕ್ಷದಿಂದ ಪ್ರಾರಂಭವಾಗುತ್ತದೆ (ಎರಡೂ ಬೆಲೆಗಳು, ಎಕ್ಸ್ ಶೋ ರೂಂ). ಹೈರೈಡರ್‌ನೊಂದಿಗೆ ನೀಡಲಾದ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನವು ಹೆಚ್ಚು ಕಡಿಮೆ ಅದರ ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾವನ್ನೇ ಹೋಲುತ್ತದೆ. ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ. ಈ ಕಾರಣಕ್ಕೆ ಅರ್ಬನ್ ಕ್ರೂಸರ್ ಹೈರಿಡರ್ ಅನ್ನು ಲೈಕ್ ಮಾಡುತ್ತಾರೆ.
ಕಿಯಾ ಸೋನೆಟ್ (24.1 kmpl)
ಕಿಯಾ ಸೋನೆಟ್ ಅನ್ನು ಭಾರತದಲ್ಲಿ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ದೊರೆಯುತ್ತದೆ. ಅವುಗಳೆಂದರೇ, 1.2-ಲೀಟರ್ NA ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್. ಡೀಸೆಲ್ ಎಂಜಿನ್ ಬರೋಬ್ಬರಿ 24.1 kmpl ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಕಿಯಾ ಸೋನೆಟ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಏರ್ ಪ್ಯೂರಿಫೈಯರ್, ಸಿಂಗಲ್-ಪೇನ್ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ವೈಶಿಷ್ಠ್ಯಗಳನ್ನು ಹೊಂದಿದೆ.
ಹುಂಡೈ ವೆನ್ಯೂ (23.4 kmpl):
ಕಿಯಾ ಸೋನೆಟ್‌ನಂತೆ ಹ್ಯುಂಡೈ ವೆನ್ಯೂ ಅದೇ 1.2-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದರ ಡೀಸೆಲ್ ಪ್ರತಿ ಲೀಟರ್‌ಗೆ 23.4 ಕಿಮೀ ಮೈಲೇಜ್ ಅನ್ನು ಹಿಂದಿರುಗಿಸುತ್ತದೆ. ಇದು ಕಿಯಾ ಸೋನೆಟ್‌ಗಿಂತ ಸ್ವಲ್ಪ ಕಡಿಮೆ. ಕಳೆದ ವರ್ಷ ಫೇಸ್‌ಲಿಫ್ಟ್ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದ್ದು, ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯ ಸ್ಪೋರ್ಟಿಯರ್, ಚಾಲಕ-ಆಧಾರಿತ ಆವೃತ್ತಿಯಾಗಿದೆ.
ಟಾಟಾ ನೆಕ್ಸಾನ್ (21.5 kmpl):
ಪ್ರಸ್ತುತ ಟಾಟಾ ನೆಕ್ಸಾನ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.2-ಲೀಟರ್ ಟರ್ಬೊ ಪೆಟ್ರೋಲ್ ಯುನಿಟ್, 1.5-ಲೀಟರ್ ಡೀಸೆಲ್ ಎಂಜಿನ್, ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದ್ದು, ಇದು 21.5 kmpl ಇಂಧನ ದಕ್ಷತೆಯನ್ನು ಹೊಂದಿದೆ. ಡೀಸೆಲ್ ಎಂಜಿನ್ 110 PS ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುತ್ತದೆ. ಆದರೆ, ಪೆಟ್ರೋಲ್ ಎಂಜಿನ್ 120 PS ಪವರ್, 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








