Tata Punch EV: ಶೀಘ್ರದಲ್ಲೇ ಕಡಿಮೆ ಬೆಲೆಗೆ ಟಾಟಾ ಪಂಚ್ ಇವಿ ಬಿಡುಗಡೆ, ನಿರೀಕ್ಷೆಗೂ ವೀರಿ ವಿಶೇಷತೆಗಳಿರಲಿವೆ!

ಭಾರತದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಗುರುತಿಸಿಕೊಂಡಿದ್ದು, ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಪಾರುಪಾತ್ಯ ಮೆರೆಯುತ್ತಿದೆ. ಇತ್ತೀಚೆಗೆ, ಇಂಧನ ಚಾಲಿತ (ICE) ನವೀಕರಿಸಿದ ನೆಕ್ಸಾನ್ ಎಸ್‌ಯುವಿಯನ್ನು ಟಾಟಾ ಬಹಿರಂಗಪಡಿಸಿತ್ತು. ಸೆಪ್ಟೆಂಬರ್ 7ರಂದು ಅಪ್ಡೇಟ್ ನೆಕ್ಸಾನ್ ಇವಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಸದ್ಯ, ಖರೀದಿಗೆ ಲಭ್ಯವಿರುವ ನೆಕ್ಸಾನ್ ಇವಿಗೆ ಹೋಲಿಸಿದರೆ, ನವೀಕರಣದೊಂದಿಗೆ ಬರುತ್ತಿರುವ ಕಾರು, ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರಲಿದೆ. ಕರ್ವ್ವ್ ಕಾನ್ಸೆಪ್ಟ್ ಇವಿಯಂತೆ ಆಕರ್ಷಕ ಗ್ರಿಲ್, ಎಲ್ಇಡಿ ಲೈಟ್ ಬಾರ್, 'ವಿ' ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿರುವ ನೀರಿಕ್ಷೆಯಿದೆ. ಜೊತೆಗೆ, ಹೀಗಿರುವ ಕಾರಿನಂತೆ 30.2 kWh ಹಾಗೂ 40.5 kWh ಬ್ಯಾಟರಿ ಆಯ್ಕೆಯೊಂದಿಗೆ ದೊರೆಯಲಿದೆ.

Tata Punch EV: ಶೀಘ್ರದಲ್ಲೇ ಕಡಿಮೆ ಬೆಲೆಗೆ ಟಾಟಾ ಪಂಚ್ ಇವಿ ಬಿಡುಗಡೆ, ನಿರೀಕ್ಷೆಗೂ ವೀರಿ ವಿಶೇಷತೆಗಳಿರಲಿವೆ!

ಅದಕ್ಕೆ ಅನುಗುಣವಾಗಿ ಕ್ರಮವಾಗಿ 312 km ರಿಂದ 453 km ರೇಂಜ್ ನೀಡುವ ಸಾಧ್ಯತೆಯಿದೆ. ಅಧಿಕೃತ ಬೆಲೆ ಕುರಿತು ಯಾವುದೇ ಮಾಹಿತಿ ಇಲ್ಲ. ಟಾಟಾ ಕಂಪನಿ, ಇನ್ನೆರೆಡು ದಿನದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ನೆಕ್ಸಾನ್ ಇವಿಯನ್ನು ಬಹಿರಂಗಪಡಿಸಲಿದೆ. ಆ ಬಳಿಕ, ಮುಂದಿನ ದಿನಗಳಲ್ಲಿ ಬಹುನೀರಿಕ್ಷಿತ ಪಂಚ್ ಇವಿಯನ್ನು ಅನಾವರಣಗೊಳಿಸಲಿದೆ. ಈ ಕಾರು, ಹಲವು ಬಾರಿ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವ ಕಂಡುಬಂದಿದೆ.

ಹೊಸ ಟಾಟಾ ಪಂಚ್ ಇವಿ ಪವರ್‌ಟ್ರೇನ್ ಮತ್ತು ಬ್ಯಾಟರಿ ಪ್ಯಾಕ್ ಮಾತನಾಡುವುದಾದರೆ, ಈ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ, 24 kWh ಬ್ಯಾಟರಿ ಪ್ಯಾಕ್ ಪಡೆಡಿರುವ ನೀರಿಕ್ಷೆಯಿದ್ದು, 65 hp ಗರಿಷ್ಠ ಪವರ್‌ ಉತ್ಪಾದಿಸುವ PMSM ಎಲೆಕ್ಟ್ರಿಕ್ ಮೋಟರ್‌ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 ಕಿಮೀ ರೇಂಜ್ ನೀಡುವ ಸಾಧ್ಯತೆ ಇದೆ.

Tata Punch EV: ಶೀಘ್ರದಲ್ಲೇ ಕಡಿಮೆ ಬೆಲೆಗೆ ಟಾಟಾ ಪಂಚ್ ಇವಿ ಬಿಡುಗಡೆ, ನಿರೀಕ್ಷೆಗೂ ವೀರಿ ವಿಶೇಷತೆಗಳಿರಲಿವೆ!

ಇಂಧನ ಚಾಲಿತ ಪಂಚ್ ಎಸ್‌ಯುವಿಗೆ ಹೋಲಿಸಿದರೆ, ಪಂಚ್ ಇವಿ ಬೇರೆ ಎಂಬುದನ್ನು ತೋರಿಸಲು ಟಾಟಾ, ಈ ಕಾರಿನ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿರಲಿದೆ. ಇದು, ALFA (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್ ಆಧರಿಸಿರಲಿದೆ. ಜೊತೆಗೆ ಎಲ್ಲರನ್ನು ಸೆಳೆಯುವಂತಹ ಡಿಸೈನ್ ಹೊಂದಿರುವ ಗ್ರೀಲ್, ಫ್ರಂಟ್ ಬಂಪರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಹಾಗೂ ಅಲಾಯ್ ವೀಲ್ಸ್ ಪಡೆದಿರುವ ನೀರಿಕ್ಷೆಯಿದೆ.

ನೂತನ ಟಾಟಾ ಪಂಚ್ ಇವಿ, ನವೀನ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗಬಹುದು. ಪ್ರಮುಖವಾಗಿ, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹೊಸದಾದ ಟೂ - ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿರುವ ಸಾಧ್ಯತೆಯಿದೆ. ಸರಿ ಸುಮಾರು ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ದೊರೆಯಬಹುದು.

ಆಗಸ್ಟ್ ತಿಂಗಳು (2023) ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿ ಟಾಟಾ ಕಂಪನಿ ಭರ್ಜರಿಯಾಗಿ ಯಶಸ್ಸು ಸಾಧಿಸಿದ್ದು, ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಹೋದ ತಿಂಗಳು, 6,236 ಯುನಿಟ್ ಇವಿ ಸೇಲ್ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (4,026 ಯುನಿಟ್) ವರ್ಷದಿಂದ ವರ್ಷಕ್ಕೆ 55% ಬೆಳೆವಣಿಗೆ ಸಾಧಿಸಿದೆ.

ಟಾಟಾ, ದೇಶೀಯ ಮಾರುಕಟ್ಟೆಯಲ್ಲಿ ಈ ಮಟ್ಟಿಗೆ ಪ್ರಗತಿ ಸಾಧಿಸಲು ಕಾರಣ, ಅದರ ಬಲವಾದ ಇವಿ ಲೈನ್-ಅಪ್. ಕಂಪನಿ ಪ್ರಸ್ತುತ, ಟಿಯಾಗೊ ಇವಿ, ಟಿಗುರ್ ಇವಿ ಹಾಗೂ ನೆಕ್ಸಾನ್ ಇವಿಗಳನ್ನು ಮಾರಾಟ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ನವೀಕರಿಸಿದ ನೆಕ್ಸಾನ್ ಇವಿ ಹಾಗೂ ಪಂಚ್ ಇವಿ ಮಾರಾಟದಿಂದ ಮತ್ತಷ್ಟು ಬಲಗೊಳ್ಳಲಿದೆ. ಅದರಲ್ಲೂ ಪಂಚ್ ಇವಿ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದ್ದು, ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 5, 2023, 10:21 [IST]
English summary
After tata nexon ev punch ev launch soon expected price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+