ಏರ್‌ಬ್ಯಾಗ್‌ಗಳು ಏಕೆ ತೆರೆದುಕೊಂಡಿಲ್ಲ? Anand Mahindra ಗೆ ಬದುಕುಳಿದ ಕಾರು ಮಾಲೀಕನ ಪ್ರಶ್ನೆ

ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರಿನ ರೂಫ್ ಹರಿದು ನಜ್ಜುಗುಜ್ಜಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಭೀಕರ ಅಪಘಾತದಲ್ಲಿ ಯಾವುದೇ ಜೀವಹಾನಿಯಾಗಿರಲಿಲ್ಲ, ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಆದ್ರೆ ಈಗ ಕಾರಿನ ಗುಣಮಟ್ಟ ಕುರಿತು Anand Mahindra ಅವರನ್ನು ಮಾಲೀಕ ಪ್ರಶ್ನಿಸಿದ್ದಾರೆ.

ಈ ಅಪಘಾತದಲ್ಲಿ ಕಾರು ಚಾಲಕನ ತಪ್ಪಿದೆ, ಪ್ರಯಾಣದ ವೇಳೆ ಚಾಲಕ ನಿದ್ದೆಗೆ ಜಾರಿದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅರಣ್ಯ ಪ್ರದೇಶದ ಮೂಲಕ ಸಾಗುತ್ತಿದ್ದಾಗ ಕಾರು ಮರಕ್ಕೆ ಅಪ್ಪಳಿಸಿದೆ. ಆದ್ರೆ ಯಾರಿಗೂ ಜೀವ ಹಾನಿಯಾಗಿಲ್ಲವಾದರೂ ತೀವ್ರ ಗಾಯಗಳಾಗಿವೆ ಎಂದು ಕಾರು ಮಾಲೀಕ ಆರೋಪಿಸಿದ್ದಾರೆ. ಕಾರು ನಜ್ಜುಗುಜ್ಜಾಗಿದೆ ಸರಿ airbags ಏಕೆ ತೆರೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

airbags-not-deploy

ನಾನು ಖರೀದಿಸಿರುವ ಕಾರು ಟಾಪ್-ಎಂಡ್ ಮಹೀಂದ್ರಾ ಸ್ಕಾರ್ಪಿಯೊ-ಎನ್ Z8 ರೂಪಾಂತರವಾಗಿದೆ. ಇದು ಆರು ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಮಾಲೀಕರ ಪ್ರಕಾರ, ಅಪಘಾತದಲ್ಲಿ ಯಾವುದೇ ಏರ್‌ಬ್ಯಾಗ್‌ಗಳು ತೆರೆದಿಲ್ಲ. ಒಂದು ವೇಳೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೇ ಪ್ರಯಾಣಿಕರಿಗೆ ಗಾಯಗಳ ತೀವ್ರತೆ ಕಡಿಮೆ ಇರುತ್ತಿತ್ತು ಎಂದು ಅವರು ಹೇಳಿದ್ದಾರೆ. ಕಾರು ಖರೀದಿಸಿದ್ದಕ್ಕೆ ತೃಪ್ತಿ ಸಿಗಬೇಕಲ್ಲವೇ?

ಸ್ಕಾರ್ಪಿಯೋ-ಎನ್ 5 ಸ್ಟಾರ್ ರೇಟಿಂಗ್: ಹೊಸ ಸ್ಕಾರ್ಪಿಯೋ-N ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 29.25 ಮತ್ತು ಮಕ್ಕಳ ರಕ್ಷಣೆಯಲ್ಲಿ 48ಕ್ಕೆ 28.94 ಅಂಕಗಳನ್ನು (G-NCAP ರೇಟಿಂಗ್‌ಗಳ ಆಧಾರದ ಮೇಲೆ) ಗಳಿಸಿದೆ. ಜೊತೆಗೆ ಹೊಸ ಪ್ರೋಟೋಕಾಲ್ ಅಡಿಯಲ್ಲಿ ನಡೆಸಿದ ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲೂ ಅತ್ಯುತ್ತಮ ಪರ್ಫಾಮೆನ್ಸ್ ಪ್ರದರ್ಶಿಸಿದೆ. ಉಳಿದಂತೆ ಗ್ಲೋಬಲ್ ಎನ್-ಸಿಎಪಿ ಪ್ರಕಾರ ಚಾಲಕ ಮತ್ತು ಪ್ರಯಾಣಿಕರ ಕುತ್ತಿಗೆಗೆ ಉತ್ತಮ ರಕ್ಷಣೆ ಒದಗಿಸುತ್ತದೆ ಎಂದು ನಿರ್ಧರಿಸಿದೆ.

airbags-not-deploy

ಒಂದು ಕಾರಿಗೆ 5 ಸ್ಟಾರ್ ರೇಟಿಂಗ್ ಸಿಕ್ಕರೇ ಭಯವಿಲ್ಲದೇ ಆ ಕಾರಿನಲ್ಲಿ ಪ್ರಯಾಣಿಸಬಹುದು. ಇದೇ ಕಾರಣದಿಂದಲೇ ಭೀಕರ ಅಪಘಾತದಲ್ಲೂ ಪ್ರಯಾಣಿಕರು ಕೇವಲ ಗಾಯಗಳಿಂದ ಹೊರಬಂದಿದ್ದಾರೆ. ಆದ್ರೂ ಕಾರು ಮಾಲೀಕ ಹೇಳಿದಂತೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೆ ಪ್ರಭಾವ ಕಡಿಮೆ ಇರುತ್ತಿತ್ತು. ಮುಖ್ಯವಾಗಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳಲು ನಮಗೆರಿಯದ ಸೂಕ್ಷ್ಮ ತಂತ್ರಜ್ಞಾನವಿದೆ. ಅದನ್ನು ಇಲ್ಲಿ ನೋಡೋಣ.

ಏರ್‌ಬ್ಯಾಗ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU) ಸೆನ್ಸಾರ್‌ನಿಂದ ಡಿಕ್ಲೆರೇಶನ್ ಪತ್ತೆ ಮಾಡುವ ಸಂಕೇತವನ್ನು ಪಡೆದಾಗ, ಏರ್‌ಬ್ಯಾಗ್‌ಗಳನ್ನು ಉಬ್ಬಿಸಲು ಪ್ರಚೋದಕ ಸರ್ಕ್ಯೂಟ್ ಅನ್ನು ಸಕ್ರಿಯಗೊಳಿಸುತ್ತದೆ. ಇಸಿಯು ವೇಗವರ್ಧನೆಯ ನಿರ್ದಿಷ್ಟ ಮಿತಿಯ ಆಧಾರದ ಮೇಲೆ ಏರ್‌ಬ್ಯಾಗ್‌ಗಳನ್ನು ನಿಯೋಜಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ. ಡಿಕ್ಕಿಯ ಪ್ರಭಾವವು ಹೆಚ್ಚಾಗಿರದಿದ್ದರೇ ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವುದಿಲ್ಲ.

ಹಾಗೆಯೇ ಸ್ಕಿಡ್ ಅಪಘಾತಗಳ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿರುವ ಸಾಧ್ಯತೆಯಿದೆ. ರೋಲ್‌ಓವರ್ ಸೆನ್ಸಾರ್ ಇದನ್ನು ಪರಿಗಣಿಸದಿದ್ದರೇ ಕರ್ಟನ್ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿರಬಹುದು. ರೋಲ್‌ಓವರ್ ಆದಾಗ ಸೈಡ್ ಇಂಪ್ಯಾಕ್ಟ್ ಸೆನ್ಸರ್‌ಗಳು ಏರ್‌ಬ್ಯಾಗ್‌ಗಳನ್ನು ನಿಯೋಜಿಸಬೇಕು. ಆದ್ರೆ ಮಾಲೀಕ ವಿವರಿಸಿದ ಪರಿಸ್ಥಿತಿಯಲ್ಲಿ ಇದು ಸಂಭವಿಸಲಿಲ್ಲ. ಒಂದು ವೇಳೆ ನಿರ್ಮಾಣ ಲೋಪವು ಇರಬಹುದು ಅಥವಾ ಸೆನ್ಸಾರ್‌ಗಳಿಗೆ ಡಿಕ್ಕಿಯ ಪ್ರಭಾವ ತಗುಲದಿರಬಹುದು.

ಏನೇ ಆಗಲಿ ಗ್ರಾಹಕರು ಲಕ್ಷಾಂತರ ರೂ. ಕೊಟ್ಟು ಕಾರುಗಳನ್ನು ಖರೀದಿಸಿದರೆ ಅಪಘಾತ ಸಂಧರ್ಭಗಳಲ್ಲಿ ರಕ್ಷಣೆ ಸಿಗದಿದ್ದರೆ ಪ್ರಶ್ನಿಸುವ ಹಕ್ಕಿದೆ. ಜೊತೆಗೆ ಕಾರು ಮಲೀಕ ಕೂಡ ನೆಗಿಟಿವ್ ಆಗಿ ಇದನ್ನು ಪ್ರಶ್ನಿಸಿಲ್ಲ. ನಿಮ್ಮ ಕಾರುಗಳ ಗುಣಮಟ್ಟವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ. ಈ ಅಪಘಾತದ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ನಮಗೆ ತಿಳಿಸಿ.

Article Published On: Thursday, June 15, 2023, 12:38 [IST]
English summary
Airbags not deploy car owner question to anand mahindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+