ಟಾಟಾ ನ್ಯಾನೋಗಿಂತ ಕಮ್ಮಿ: ಜಸ್ಟ್ 99,000 ರೂಪಾಯಿಗೆ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಮಾರಾಟ
ಇವತ್ತು ಯಾವುದಾದರೂ ಹೊಸ ದ್ವಿಚಕ್ರ ವಾಹನ ಖರೀದಿಸಲು ಕನಿಷ್ಠವೆಂದರೂ 1 ಲಕ್ಷ ರೂಪಾಯಿ ವ್ಯಯಿಸಬೇಕು. ಆದರೆ, ಇಲ್ಲೊಂದು ಕಡೆ ಎರಡು ಆಸನವಿರುವ ಎಲೆಕ್ಟ್ರಿಕ್ ಕಾರೊಂದು ಅದಕ್ಕಿಂತ ಕಡಿಮೆ ಬೆಲೆ ಖರೀದಿಗೆ ಲಭ್ಯವಿದೆ. ಎಲ್ಲಿ ಇಷ್ಟೊಂದು ಅಗ್ಗದ ದರಕ್ಕೆ ಕಾರು ಸಿಗುತ್ತದೆಯೇ ಎಂದು ಬಹುತೇಕರಿಗೆ ಕುತೂಹಲವಿಯಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಅಂದಹಾಗೆ, ಈ ಕಾರನ್ನು ಭಾರತದಲ್ಲಿ ಸೇಲ್ ಮಾಡಲಾಗುತ್ತಿಲ್ಲ. ಬದಲಿಗೆ ಚೀನಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಅಲ್ಲಿನ ಪ್ರಮುಖ ಇ - ಕಾಮರ್ಸ್ ಪ್ಲಾಟ್ ಫಾರಂ ಅಲಿಬಾಬಾ 'ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ವೀಕ್' ಎಂಬ ಹೆಸರಲ್ಲಿ ಬೃಹತ್ ಮಾರಾಟ ಮೇಳವನ್ನು ಆಯೋಜಿಸಿತ್ತು. ಅದರಲ್ಲಿ ಈ ಕಾರನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಸೇಲ್ ಮಾಡಿದೆ ಎಂದು ವರದಿಯಾಗಿದೆ.

ಈ ಎಲೆಕ್ಟ್ರಿಕ್ ಕಾರನ್ನು $1,199 (ಅಮೆರಿಕನ್ ಡಾಲರ್) ಬೆಲೆಗೆ ಮಾರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಭಾರತದ ರೂಪಾಯಿಗೆ ಹೋಲಿಸಿದರೆ, ನೂತನ ಎಲೆಕ್ಟ್ರಿಕ್ ಕಾರಿನ ದರ ರೂ.99,000 ಅಷ್ಟೇ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಒಂದಷ್ಟು ಉತ್ತಮ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಲಭ್ಯವಿರುವ ಯಾವ ದ್ವಿಚಕ್ರ ವಾಹನ ಕೂಡ 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ದೊರೆಯುವುದಿಲ್ಲ.
ನಿಮಗೆ ಗೊತ್ತಿರಲಿ.. ಚೀನಾದಲ್ಲಿ ಈ ಕಾರನ್ನು ಖರೀದಿಸಿ, ಭಾರತವಾಗಲಿ ಅಥವಾ ಇತರೆ ದೇಶಗಳಿಗೆ ಗ್ರಾಹಕರು ತರಲು ಸಾಧ್ಯವಾಗುವಾಗುವುದಿಲ್ಲ. ಬೆಲೆ ತೀರಾ ಕಮ್ಮಿ ಇರುವ ಕಾರಣ, ಇದು ಅಷ್ಟೇನೂ ಆಕರ್ಷಕ ಡಿಸೈನ್ ಹಾಗೂ ಫೀಚರ್ಸ್ ಪಡೆದಿಲ್ಲ. ಈ ಕಾರಿನ ಮುಂಭಾಗ ಹುಲಿಯ ಮುಖದಂತೆ ವಿನ್ಯಾಸ ಹೊಂದಿದೆ. ಗ್ರೀಲ್ ಸ್ಮೆಲಿ ಲುಕ್ ನಲ್ಲಿದೆ. ಜೊತೆಗೆ ಹೈಡ್ ಲೈಟ್ಸ್ ಅನ್ನು ಹೊಂದಿದೆ.

ಈ ಕಾರಿನ ನಿರ್ಮಾಣ ಗುಣಮಟ್ಟದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಿಕ್ಕ ಎಲೆಕ್ಟ್ರಿಕ್ ಕಾರು ಆಗಿರುವುದಿರಿಂದ 35 kW ಮೋಟಾರ್ ಬಳಕೆ ಮಾಡಲಾಗಿದ್ದು, 47 hp ಪವರ್ ಉತ್ಪಾದಿಸಲು ಶಕ್ತವಾಗಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, 152 ಕಿಲೋಮೀಟರ್ (94 ಮೈಲು) ಕ್ರಮಿಸಬಹುದು ಎಂದು ಅಲಿಬಾಬಾ ಹೇಳಿಕೊಂಡಿದೆ.
ಜೊತೆಗೆ, 120 km/h (75 mph) ಟಾಪ್ ಸ್ವೀಡ್ ಹೊಂದಿದೆ. ಪುಟ್ಟ ಕಾರಾಗಿರುವುದರಿಂದ ಸಂಚಾರ ದಟ್ಟಣೆಯಿರುವ ನಗರ ಪ್ರದೇಶ ಓಡಾಟಕ್ಕೆ ಹೆಚ್ಚು ಸೂಕ್ತವಾಗಿದ್ದು, ಪಾರ್ಕಿಂಗ್ ಮಾಡಲು ಕೂಡ ಅಷ್ಟಾಗಿ ಸ್ಥಳಾವಕಾಶದ ಅಗತ್ಯವಿರುವುದಿಲ್ಲ. ಆದರೆ, ದೂರದ ಪ್ರಯಾಣಕ್ಕೆ ಅಷ್ಟು ಯೋಗ್ಯವಾಗಿಲ್ಲ. ಆಗೊಮ್ಮೆ ತೆಗೆದುಕೊಂಡು ಹೋದರೆ, ಹಲವು ಬಾರಿ ಚಾರ್ಜಿಂಗ್ ಮಾಡಬೇಕು.
ಈ ಸಣ್ಣ ಎಲೆಕ್ಟ್ರಿಕ್ ಕಾರು, ದರ ಕಡಿಮೆ ಇರುವುದರಿಂದ ತೀರಾ ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ, ಕ್ಯಾಬಿನ್ ಒಳಭಾಗದಲ್ಲಿ ಎಸಿ ವೆಂಟ್ಸ್ , ಆಕರ್ಷಕ ಸ್ಟೀರಿಂಗ್ ವೀಲ್, ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಕಾಣಬಹುದು. ಇದು ಬಿಟ್ಟರೆ, ಬೇರೆ ಯಾವ ಅತ್ಯಾಧುನಿಕ ವೈಶಿಷ್ಟ್ಯಗಳಿಲ್ಲ. ಇದು, ಚೀನಾ ದೇಶದ ಸುರಕ್ಷತಾ ಮಾನದಂಡಗಳನ್ನು ಪೂರೈಸಿದೆಯೇ ಎಂಬುದರ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ.
ಇನ್ನು, ದೇಶದಲ್ಲಿ ಯಾವುದೇ ದ್ವಿಚಕ್ರ ವಾಹನ ತೆಗೆದುಕೊಂಡರೆ ರೂ.1 ಲಕ್ಷ ಬೆಲೆಯ ಆಸುಪಾಸಿನಲ್ಲಿ ಖರೀದಿಗೆ ಸಿಗುತ್ತದೆ. ಆದರೆ, ಚೀನಾದಲ್ಲಿ ಅದಕ್ಕಿಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಖರೀದಿಗೆ ಸಿಗುವುದನ್ನು ಕಂಡು ಬಹುತೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು, ಯಾವ ಕಂಪನಿ ಕಾರು ಎಂಬುದರ ಬಗ್ಗೆ ಪ್ರಸ್ತುತ ಖಚಿತ ವಿವರಗಳು ಲಭ್ಯವಾಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications