Amazon: ಇನ್ನುಮುಂದೆ ಅಮೆಜಾನ್‌ನಲ್ಲಿ ಕಾರುಗಳನ್ನು ಖರೀದಿಸಬಹುದು!

ಇದು ಆನ್‌ಲೈನ್ ಜಮಾನ, ಸೇಫ್ಟಿ ಪಿನ್‌ನಿಂದ ಹಿಡಿದು ಎಲೆಕ್ಟ್ರಾನಿಕ್ ಗೃಹೋಪಯೋಗಿ ಉಪಕರಣಗಳವರೆಗೆ ಎಲ್ಲವನ್ನೂ ಇ-ಕಾಮರ್ಸ್‌ನಲ್ಲಿ ಖರೀದಿಸಬಹುದು. ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುವುದನ್ನು ನೋಡಿದ್ದೀವೆ. ಇದೀಗ ಕಾರುಗಳ ಸರದಿ, ಇ-ಕಾಮರ್ಸ್ ದೈತ್ಯ ಕಂಪನಿಯೊಂದು ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಕಾರುಗಳ ಮಾರಾಟವನ್ನು ಪ್ರಾರಂಭಿಸಲಿದೆ.

ಹೌದು, ಇ-ಕಾಮರ್ಸ್ ದೈತ್ಯ ಅಮೆಜಾನ್ ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಕಾರುಗಳ ಮಾರಾಟವನ್ನು ಪ್ರಾರಂಭಿಸಲಿದೆ. ಈ ಕುರಿತು ಹ್ಯುಂಡೈ ಕಂಪನಿಯೊಂದಿಗೆ ಅಮೆಜಾನ್ ಒಪ್ಪಂದ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಮೂಲಕ ಕಾರುಗಳು ಶೀಘ್ರದಲ್ಲೇ ಆನ್‌ಲೈನ್ ಶಾಪಿಂಗ್‌ಗೆ ಲಭ್ಯವಿರುತ್ತವೆ. ಇದರ ಭಾಗವಾಗಿ, ಹ್ಯುಂಡೈ ತನ್ನ ಕಾರು ಮಾದರಿಗಳ ವಿವರಗಳನ್ನು Amazon ನಲ್ಲಿ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಿದೆ.

amazon-hyundai-partnership-soon-cars-available-in-e-commerce

ಬಳಕೆದಾರರು ತಮ್ಮ ಆಯ್ಕೆಯ ಕಾರು ಮಾದರಿಯನ್ನು ಬುಕ್ ಮಾಡಿ ಆನ್‌ಲೈನ್‌ನಲ್ಲಿ ನಗದು ಪಾವತಿಸಬೇಕು. ನಂತರ ನೀವು ಹತ್ತಿರದ ಹುಂಡೈ ಡೀಲರ್‌ನಿಂದ ಕಾರಿನ ಡೆಲಿವರಿ ತೆಗೆದುಕೊಳ್ಳಬಹುದು ಅಥವಾ ಡೀಲರ್ ಅದನ್ನು ನಿಮ್ಮ ಮನೆಗೆ ತಲುಪಿಸುತ್ತಾರೆ. ಈ ಸೌಲಭ್ಯವು ಮೊದಲು ಅಮೆರಿಕದಲ್ಲಿರುವ ಬಳಕೆದಾರರಿಗೆ ಲಭ್ಯವಾಗಲಿದೆ. ಕ್ರಮೇಣ ಇದನ್ನು ಇತರ ದೇಶಗಳ ಬಳಕೆದಾರರಿಗೆ ವಿಸ್ತರಿಸಲಾಗುವುದು.

ಅಮೆಜಾನ್ ವಿವಿಧ ನಗರಗಳಲ್ಲಿನ ಹುಂಡೈ ಡೀಲರ್‌ಶಿಪ್‌ಗಳು ಮತ್ತು ಖರೀದಿದಾರರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಇತರ ಕಂಪನಿಗಳ ಕಾರುಗಳನ್ನು ಸಹ ಮಾರಾಟ ಮಾಡಲು ಆಯಾ ಕಂಪನಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಅಮೆಜಾನ್ ಹೇಳಿದೆ. ಇದರ ಜೊತೆಗೆ ಅಮೆಜಾನ್ ವೆಬ್ ಸೇವೆಗಳ ಮೂಲಕ ಹ್ಯುಂಡೈ ಕಾರುಗಳಲ್ಲಿ ಕ್ಲೌಡ್ ಆಧಾರಿತ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿದುಬಂದಿದೆ.

amazon-hyundai-partnership-soon-cars-available-in-e-commerce

ಅಲ್ಲದೇ ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯು 2025 ರ ವೇಳೆಗೆ, ಎಲ್ಲಾ ಮಾದರಿಗಳಲ್ಲಿ ಅಲೆಕ್ಸಾ ಧ್ವನಿ ಸಹಾಯಕವನ್ನು ಹ್ಯುಂಡೈ ಸ್ಥಾಪಿಸಲಿದೆ ಎಂದು ಹೇಳಿದೆ. ಅಮೆಜಾನ್ ಕಂಪನಿಯು ಕೆಲ ವರ್ಷಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ವಿವಿಧ ಉತ್ಪನ್ನಗಳ ಆನ್‌ಲೈನ್ ಮಾರಾಟದ ಮೇಲೆ ಕೇಂದ್ರೀಕರಿಸಿದೆ. ಇದರ ಭಾಗವಾಗಿ, ಕಾರು ಕಂಪನಿಗಳ ಸಹಯೋಗದೊಂದಿಗೆ ವರ್ಚುವಲ್ ಶೋರೂಮ್‌ಗಳನ್ನು ಲಭ್ಯಗೊಳಿಸಲಾಗುವುದು. ಈ ಮೂಲಕ ಬಳಕೆದಾರರು ಕಾರುಗಳು ಮತ್ತು ಅವುಗಳ ಬಿಡಿಭಾಗಗಳನ್ನು ಖರೀದಿಸಬಹುದು.

"ಹ್ಯುಂಡೈನಂತಹ ಕಂಪನಿಯು ಗ್ರಾಹಕರಿಗೆ ಉತ್ತಮ ಮತ್ತು ಸುಲಭವಾದ ಸೇವೆಗಳನ್ನು ಒದಗಿಸುವ ಅಮೆಜಾನ್‌ನ ಕಲ್ಪನೆಯನ್ನು ಸೇರಲು ನಮಗೆ ತುಂಬಾ ಸಂತೋಷವಾಗಿದೆ. ಎರಡು ಕಂಪನಿಗಳ ಪಾಲುದಾರಿಕೆಯೊಂದಿಗೆ, ಗ್ರಾಹಕರು ಸುಲಭವಾಗಿ ಆನ್‌ಲೈನ್‌ನಲ್ಲಿ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ಅಲೆಕ್ಸಾ ಸಹಾಯದಿಂದ ಹ್ಯುಂಡೈ ಗ್ರಾಹಕರು ಮನರಂಜನೆ, ಶಾಪಿಂಗ್, ಸ್ಮಾರ್ಟ್ ಗೃಹೋಪಯೋಗಿ ಉಪಕರಣಗಳ ನಿಯಂತ್ರಣ ಮಾಡಬಹುದು. ಅಮೆಜಾನ್-ಹ್ಯುಂಡೈ ಪಾಲುದಾರಿಕೆಯು ಭವಿಷ್ಯದಲ್ಲಿ ಇನ್ನಷ್ಟು ಆವಿಷ್ಕಾರಗಳನ್ನು ತರಲಿದೆ" ಎಂದು ಅಮೆಜಾನ್ ಸಿಇಒ ಆಂಡಿಜೆಸ್ಸೆ ಹೇಳಿದ್ದಾರೆ.

amazon-hyundai-partnership-soon-cars-available-in-e-commerce

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಂತಹ ಎಷ್ಟೇ ಆನ್‌ಲೈನ್‌ ಸೇವೆಗಳು ಬಂದರೂ ಒಂದು ವಾಹನವನ್ನು ಖರೀದಿಸುವಾಗ ಶೋರೂಂ ಹೋಗಿ ಕಾರನ್ನು ಕಣ್ಣಾರೆ ವೀಕ್ಷಿಸಿ ಅದರ ಬಗ್ಗೆ ತಿಳಿದು ಖರೀದಿಸುವಲ್ಲಿ ಸಿಗುವ ತೃಪ್ತಿಯೇ ಬೇರೆ. ಇದು ನಮ್ಮ ಅಭಿಪ್ರಾಯ, ಮುಂಬರಲಿರುವ ಈ ಆನ್‌ಲೈನ್ ಕಾರು ಖರೀದಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 20, 2023, 15:50 [IST]
English summary
Amazon hyundai partnership soon cars available in e commerce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+