ಮಹೀಂದ್ರಾ ವಿಡಿಯೋಗೆ ಪ್ರತಿಕ್ರಿಯೆಯಾಗಿ ಮತ್ತೊಂದು ವಿಡಿಯೋ ಹರಿಬಿಟ್ಟ ಯ್ಯೂಟ್ಯೂಬರ್

ಕಳೆದ ವಾರವಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕಾರ್ಪಿಯೋ-ಎನ್‌ನ ಸೋರಿಕೆಯಾಗುವ ಸನ್‌ರೂಫ್‌ನ ವಿಡಿಯೋ ಸಖತ್ ವೈರಲ್ ಆಗಿತ್ತು. ಅದೇ ಜಲಪಾತದ ಕೆಳಗೆ ಮಹೀಂದ್ರಾವರು ಮತ್ತೊಂದು ಸ್ಕಾರ್ಪಿಯೋ-ಎನ್‌ ಕಾರನ್ನು ನಿಲ್ಲಿಸಿ ಸಮಸ್ಯೆಗೆ ಫುಲ್‌ಸ್ಟಾಪ್ ಇಟ್ಟಿದ್ದರು. ಆದರೆ ಮತ್ತೊಮ್ಮೆ ಸನ್‌ರೂಫ್ ಕೆಲಸವೇ ಮಾಡುತ್ತಿಲ್ಲ ಎಂದು ಯ್ಯೂಟ್ಯೂಬರ್ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಮತ್ತೊಮ್ಮೆ ಸ್ಕಾರ್ಪಿಯೋ-ಎನ್‌ನ ಸನ್‌ರೂಫ್ ಸಂಪೂರ್ಣವಾಗಿ ಸಿಲುಕಿಕೊಂಡಿದೆ, ಕೆಲಸವೇ ಮಾಡುತ್ತಿಲ್ಲ. ನೀರು ಸೋರಿಕೆ ಸಮಸ್ಯೆಯ ನಂತರ ಸನ್‌ರೂಫ್ ಹೀಗೆ ಸಿಲುಕಿಕೊಂಡಿದೆ ಎಂದು ಯ್ಯೂಟ್ಯೂಬರ್ ಅರುಣ್ ಪವಾರ್ ಅವರು ಮತ್ತೊಂದು ವಿಡಿಯೋವನ್ನು ಸಾಮಾಜಿಕ್ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸ್ಕಾರ್ಪಿಯೋ ಎನ್ ಕ್ಯಾಬಿನ್‌ಗೆ ನೀರು ಪ್ರವೇಶಿಸಿದ ನಂತರ, ಕಾರಿನ ವಿದ್ಯುತ್ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ಫೋಟೈನ್‌ಮೆಂಟ್ ಸಿಸ್ಟಂ ಸ್ಥಗಿತಗೊಂಡಿದ್ದು, ಸನ್‌ರೂಫ್ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ದೂರಿದ್ದಾರೆ.

ಮಹೀಂದ್ರಾ ವಿಡಿಯೋಗೆ ಪ್ರತಿಕ್ರಿಯೆಯಾಗಿ ಮತ್ತೊಂದು ವಿಡಿಯೋ ಹರಿಬಿಟ್ಟ ಯ್ಯೂಟ್ಯೂಬರ್

ಸ್ಕಾರ್ಪಿಯೋ-ಎನ್ ಅನ್ನು ಮಾಲೀಕ ಅರುಣ್ ಪವಾರ್ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಗೆ ಕೊಂಡೊಯ್ದಿದ್ದಾರೆ. ಸನ್‌ರೂಫ್‌ನಿಂದ ನೀರು ಸೋರಿಕೆಯಾದ ಬಳಿಕ ವಾಹನವನ್ನು ಮತ್ತೆ ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋಗದೆ ಪ್ರಯಾಣ ಮುಂದುವರಿಸಿದ್ದಾರೆ. ಘಟನೆ ನಡೆದಾಗ ಸ್ಕಾರ್ಪಿಯೋ ಎನ್‌ನ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೆಲವು ನಿಮಿಷಗಳ ಕಾಲ ಕೆಲಸ ಮಾಡಿರಲಿಲ್ಲ ಬಳಿಕ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ ಸನ್‌ರೂಫ್ ಘಟಕವು ಮಧ್ಯದಲ್ಲಿಯೇ ಅಂಟಿಕೊಂಡು ಸ್ಥಗಿತಗೊಂಡಿದೆ ಎಂದು ದೂರಿದ್ದಾರೆ.

ಮಾಲೀಕರು ಮತ್ತು ಅವರ ಸ್ನೇಹಿತ ಕಾರನ್ನು ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಕೊಂಡೊಯ್ದಿದ್ದು ಸನ್‌ರೂಫ್ ಅನ್ನು ಪ್ರಯಾಣದ ಮಧ್ಯದಲ್ಲಿ ಸಿಲುಕಿಕೊಂಡಾಗ ದುರಸ್ಥಿಗಾಗಿ ಪರದಾಡಿದ್ದಾರೆ. ಅವರು ಕೊನೆಗೆ ಹೇಗೋ ಮಾಡಿ ಸನ್‌ರೂಫ್ ಅನ್ನು ಮುಂದಕ್ಕೆ ಹಾಕುವಲ್ಲಿ ಯಶಸ್ವಿಯಾದರು. ಈ ರೀತಿಯ ನಕಾರಾತ್ಮಕ ತಾಪಮಾನ ಮತ್ತು ಹಿಮಪಾತದ ಮೂಲಕ ಕಾರಿನ ಸನ್‌ ರೂಫ್ ಮುಚ್ಚಲಾಗದೇ ತೆರೆದುಕೊಂಡ ಸ್ಥಿತಿಯಲ್ಲಿದ್ದಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿರುವುದಾಗಿ ಯ್ಯೂಟ್ಯೂಬರ್ ಪವಾರ್ ಆರೋಪಿಸಿದ್ದಾರೆ.

ಮಹೀಂದ್ರಾ ವಿಡಿಯೋಗೆ ಪ್ರತಿಕ್ರಿಯೆಯಾಗಿ ಮತ್ತೊಂದು ವಿಡಿಯೋ ಹರಿಬಿಟ್ಟ ಯ್ಯೂಟ್ಯೂಬರ್

ಸೋರಿಕೆಗೆ ಕಾರಣವೇನು?
ಹಿಮಾಚಲ ಪ್ರದೇಶದ ಅದೇ ಜಲಪಾತದ ಸ್ಥಳಕ್ಕೆ ಮತ್ತೊಂದು ಸ್ಕಾರ್ಪಿಯೊ-ಎನ್ ಅನ್ನು ಕರೆದೊಯ್ಯುವ ಮೂಲಕ ಮಹೀಂದ್ರಾದವರು ಉತ್ತರಿಸಿದ್ದಾರೆ. ಆದರೆ ಕಂಪನಿಯವರು ಅರುಣ್ ಪವಾರ್ ಅವರ ಕಾರನ್ನು ಪತ್ತೆಹಚ್ಚಿ ಸೋರಿಕೆಗೆ ಕಾರಣವಾದ ಸನ್‌ರೂಫ್ ವೈಫಲ್ಯಕ್ಕೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಹಾಗೆಯೇ ಅರುಣ್ ಪವಾರ್ ಕೂಡ ಮಹೀಂದ್ರಾ ಸೇವಾ ಕೇಂದ್ರಗಳಲ್ಲಿ ಅಧಿಕೃತವಾಗಿ ಕಾರಿನ ಸಮಸ್ಯೆ ಪರಿಹರಿಸಲು ತಪಾಸಣೆಗೆ ನೀಡಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಮಹೀಂದ್ರಾ ಅದೇ ಸ್ಥಳಕ್ಕೆ ಮತ್ತೊಂದು ಸ್ಕಾರ್ಪಿಯೋ-ಎನ್ ಅನ್ನು ತೆಗೆದುಕೊಂಡು ಹೋಗಿ ವಾಹನವು ಯಾವುದೇ ಸೋರಿಕೆಯನ್ನು ಎದುರಿಸಲಿಲ್ಲ ಎಂದು ತೋರಿಸಿದೆಯೇನೋ ಸರಿ, ಆದರೆ ಮಹೀಂದ್ರಾದ ಈ ಸಾಹಸವು ನನ್ನ ಹಲವು ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಕಾರಿನ ಮಾಲೀಕ ಟಾಂಗ್ ನೀಡಿದ್ದಾನೆ. ತಮ್ಮ ಕಾರಿಗೆ ರಬ್ಬರ್ ಸೀಲ್ ಸಮಸ್ಯೆ ಎದುರಾಗಿದ್ದು, ಇದರಿಂದ ಕ್ಯಾಬಿನ್‌ಗೆ ನೀರು ನುಗ್ಗಿದೆ ಎಂದು ಅರುಣ್ ಪವಾರ್ ಆರೋಪಿಸಿದ್ದಾರೆ. ಮಹೀಂದ್ರಾ ಸ್ಕಾರ್ಪಿಯೊ-ಎನ್‌ನ ಇತರ ಕಾರುಗಳು ಒಂದೇ ರೀತಿಯ ಸಮಸ್ಯೆಯನ್ನು ಹೊಂದಿಲ್ಲದಿರಬಹುದು ಎಂದಿದ್ದಾರೆ.

ಈ ಹಿಂದೆಯೂ ಅಂತಹ ಜಲಪಾತಗಳನ್ನು ತಡೆದುಕೊಳ್ಳುವ ಹಲವು ಕಾರುಗಳನ್ನು ನೋಡಿದ್ದೇವೆ. ಈ ಹಿಂದೆ, ಹ್ಯುಂಡೈ ಕ್ರೆಟಾ ಸೇರಿದಂತೆ ಅನೇಕ ವಾಹನಗಳ ವಿಡಿಯೋಗಳಲ್ಲಿ ವಾಹನಗಳು ಅಂತಹ ಜಲಪಾತಗಳನ್ನು ಸಮಸ್ಯೆಯಿಲ್ಲದೆ ನಿಭಾಯಿಸಬಲ್ಲವು ಎಂಬುದು ಸಾಭೀತಾಗಿದೆ. ಇದು ಮಹೀಂದ್ರಾ ಸ್ಕಾರ್ಪಿಯೋ ಎನ್‌ಗೆ ಒಂದು ಆಫ್ ಕೇಸ್ ಆಗಿರಬಹುದು ಎಂದು ಹಲವರು ಭಾವಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಸಿಗಬೇಕೆಂದರೆ ಮಾಲೀಕ ಕಾರನ್ನು ಸರ್ವಿಸ್ ಸೆಂಟರ್‌ಗೆ ಕೊಂಡೊಯ್ಯಬೇಕಿದ್ದು, ಕಂಪನಿಯ ಪ್ರತಿಕ್ರಿಯೆಗೆ ಕಾಯಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, March 8, 2023, 14:48 [IST]
English summary
Another video was uploaded in response to the mahindra video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+