ಸಾಮಾನ್ಯರಿಂದ ಸೆಲೆಬ್ರಿಟಿಗಳು ಕೂಡ ಫಿದಾ: ಮಹೀಂದ್ರಾ ಸ್ಕಾರ್ಪಿಯೋ ಎನ್ ವಿತರಣೆ ಪಡೆದ ಖ್ಯಾತ ಕ್ರಿಕೆಟಿಗ
ಭಾರತದಲ್ಲಿ ದಶಕಗಳಿಂದ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಜನಪ್ರಿಯ ಎಸ್‌ಯುವಿಯಾಗಿದೆ. ಇದರ ಆಕರ್ಷಕ ನೋಟ ಹಾಗೂ ವೈಶಿಷ್ಟ್ಯಗಳು ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳನ್ನು ಸೆಳೆದಿದೆ. ಈ ಎಸ್‌ಯುವಿ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರೀ ಪ್ರಖ್ಯಾತಿ ಪಡೆದಿದ್ದು, ಎಂತಹ ರಸ್ತೆಯಲ್ಲಿಯೂ ಸುಲಭವಾಗಿ ಚಲಿಸುತ್ತದೆ.
ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ, ಆಸ್ಟ್ರೇಲಿಯಾ (Australia), ದಕ್ಷಿಣ ಆಫ್ರಿಕಾ (South Africa), ಮತ್ತು ಯುಎಸ್ಎ (USA) ಮಾರುಕಟ್ಟೆಯಲ್ಲಿಯೂ ಮಾರಾಟವಾಗುತ್ತಿದ್ದು, ಅಲ್ಲಿಯೂ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಆಸ್ಟ್ರೇಲಿಯಾದ ಖ್ಯಾತ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ (Matthew Hayden) ಅವರು, ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋವನ್ನು ವಿತರಣೆ ಪಡೆದಿದ್ದಾರೆ.

ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾದಲ್ಲಿ ಮಹೀಂದ್ರಾ ಕಂಪನಿ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅವರು, ನೂತನ ಬಿಳಿ ಬಣ್ಣದ ಸ್ಕಾರ್ಪಿಯೋವನ್ನು ಡೆಲಿವರಿ ಪಡೆಯುತ್ತಿರುವ ವಿಡಿಯೋವನ್ನು ಮಹೀಂದ್ರಾ ಆಸ್ಟ್ರೇಲಿಯಾ (Mahindra Australia) ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಇಲ್ಲಿ ಮ್ಯಾಥ್ಯೂ ಹೇಡನ್ ಅವರು ಸ್ವತಃ ಬ್ರಿಸ್ಬೇನ್‌ನಲ್ಲಿರುವ ಡೀಲರ್‌ಶಿಪ್ ಟೂರ್ ಮಾಡುತ್ತಿರುವುದನ್ನು ಕಾಣಬಹುದು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೋ ಎನ್, ರೂ.13.26 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಝಡ್2, ಝಡ್4, ಝಡ್6, ಝಡ್8 ರೂಪಾಂತರ ಹಾಗೂ ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಪೋಲಿ ಬ್ಲಾಕ್, ರೆಡ್ ರೇಜ್, ರಾಯಲ್ ಗೋಲ್ಡ್ ಮತ್ತು ಗ್ರ್ಯಾಂಡ್ ಕ್ಯಾನ್ಯನ್ ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

6, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿರುವ ಮಹೀಂದ್ರಾ ಸ್ಕಾರ್ಪಿಯೋ ಎನ್, ಎರಡು ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರ 2.2 - ಡೀಸೆಲ್ ಎಂಜಿನ್ ಪಡೆದಿರುವ ಕಾರು, ರೂಪಾಂತರಗಳಿಗೆ ಅನುಗುಣವಾಗಿ 132 PS ಪವರ್, 300 Nm ಪೀಕ್ ಟಾರ್ಕ್ ಅಥವಾ 175 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 203 PS ಗರಿಷ್ಠ ಪವರ್, 380 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗಗೊಂಡಿದೆ. 2WD (ಟೂ ವೀಲ್ ಡ್ರೈವ್) 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಕಾರು 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಫ್ರಂಟ್ & ರೇರ್ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜಿಂಗ್, 6-ವೇ-ಪವರ್ಡ್ ಡ್ರೈವರ್ ಸೀಟ್, ಸನ್‌ರೂಫ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಮಹೀಂದ್ರಾ ಸ್ಕಾರ್ಪಿಯೋ ಎನ್ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ - ಅಸಿಸ್ಟ್ ಕಂಟ್ರೋಲ್ ಅನ್ನು ಹೊಂದಿದೆ. ಟಾಟಾ ಹ್ಯಾರಿಯರ್, ಸಫಾರಿ ಮತ್ತು ಹ್ಯುಂಡೈ ಕ್ರೆಟಾ/ ಅಲ್ಕಾಜರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ದೇಶೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಮಹೀಂದ್ರಾ ಉತ್ತಮ ಸಾಧನೆ ಮಾಡಿದ್ದು, ಅಕ್ಟೋಬರ್ ತಿಂಗಳು (2023) ಸ್ಕಾರ್ಪಿಯೋ ಎನ್ ಹಾಗೂ ಸ್ಕಾರ್ಪಿಯೋ ಕ್ಲಾಸಿಕ್ ಸರಣಿ ಕಾರುಗಳ ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. 13,578 ಯುನಿಟ್ ಸೇಲ್ ಆಗಿದ್ದು, ಹೋದ ವರ್ಷಕ್ಕೆ ಹೋಲಿಕೆ ಮಾಡಿದರೆ (7,438 ಯುನಿಟ್) ವರ್ಷದಿಂದ ವರ್ಷದಿಂದ ವರ್ಷಕ್ಕೆ (YoY) ಶೇಕಡ 83% ಲಾಭವಾಗಿದೆ.


Click it and Unblock the Notifications