Auto Expo 2023: ಮೊದಲ ಬಾರಿಗೆ ಟಾಟಾ ಪಂಚ್ i CNG ಪ್ರದರ್ಶನ
ಭಾರತದ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಸಾಕಷ್ಟು ಬೇಡಿಕೆಯನ್ನು ಹೊಂದಿವೆ. ಬೆಲೆ ಹಾಗೂ ಸುರಕ್ಷತಾ ವೈಶಿಷ್ಟ್ಯಗಳಿಂದ ಗ್ರಾಹಕರು ಈ ಕಾರುಗಳನ್ನು ಖರೀದಿಸಲು ಲೈಕ್ ಮಾಡುತ್ತಾರೆ. ಅದೇ ರೀತಿ ಟಾಟಾ ತನ್ನ ಮಾರಾಟದಲ್ಲೂ ಉತ್ತಮ ಪ್ರಗತಿ ಸಾಧಿಸಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲೂ ಬಹುನಿರೀಕ್ಷಿತ ಕಾರುಗಳನ್ನು ಪ್ರದರ್ಶಿಸುತ್ತಿದೆ.
ಸದ್ಯ ಟಾಟಾ ಮೋಟಾರ್ಸ್ ಎರಡು CNG ಕಾರುಗಳನ್ನು ಅನಾವರಣಗೊಳಿಸಿದೆ. ಆಲ್ಟ್ರಾಜ್ CNG ಜೊತೆಗೆ ಭಾರತದಲ್ಲಿ ಮೊದಲ ಬಾರಿಗೆ ಆಟೋ ಎಕ್ಸ್‌ಪೋದಲ್ಲಿ ಪಂಚ್ CNGಯನ್ನು ಅಧಿಕೃತವಾಗಿ ಪ್ರದರ್ಶಿಸಿದ್ದು, ಪಂಚ್ ಸಿಎನ್‌ಜಿಯನ್ನು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೇಶದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪಂಚ್ ಕಾರಿನಲ್ಲಿ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಟಾಟಾ ನೀಡುತ್ತಿದೆ. ಇದು 30 ಲೀಟರ್ ಸಿಎನ್‌ಜಿಯ ಎರಡು ಸಿಲಿಂಡರ್ ಟ್ಯಾಂಕ್‌ಗಳನ್ನು ಹೊಂದಿದೆ ಎಂದು ಹೇಳಬಹುದು.

ಪಂಚ್ CNG ಕಾರಿಗೆ 1,199 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪವರ್ ಒದಗಿಸುತ್ತದೆ. ಅದು 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಐದು-ಸ್ವೀಡ್ ಮ್ಯಾನುಯಲ್ ಅಥವಾ ಐದು-ಸ್ವೀಡ್ AMTಗೆ ಜೋಡಿಸಲಾಗಿದೆ. ಗಮನಾರ್ಹವಾಗಿ, CNG ಆವೃತ್ತಿಯು 73.5 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಇದು ಐದು-ಸ್ವೀಡ್ ಮ್ಯಾನುವಲ್ ಯುನಿಟ್‌ನೊಂದಿಗೆ ಖರೀದಿಗೆ ಲಭ್ಯವಿರಲಿದೆ.
ಈ ಪಂಚ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಕಾರ್ನರಿಂಗ್ ಲೈಟ್‌ಗಳೊಂದಿಗೆ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ವೈ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಇದು ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಟ್ರಾಕ್ಷನ್ ಪ್ರೊ ಮೋಡ್, ಆಟೋ-ಫೋಲ್ಡ್ ಸೈಡ್-ವ್ಯೂ ಮಿರರ್‌ಗಳು, ಕೂಲ್ಡ್ ಗ್ಲೋವ್ ಬಾಕ್ಸ್, ಫಾಲೋ-ಮಿ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ರೇರ್ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ಹೇಳಬಹುದು.

ಟಿಯಾಗೊ ಸಿಎನ್‌ಜಿ ಮತ್ತು ಟಿಗೊರ್ ಸಿಎನ್‌ಜಿಯಂತೆಯೇ, ಪಂಚ್ ಸಿಎನ್‌ಜಿಯನ್ನು ಟಾಟಾ ಕಂಪನಿಯು ಲಭ್ಯವಿರುವ ಎಲ್ಲಾ ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ನೀಡಬಹುದು. ಇದು ಮಾರುಕಟ್ಟೆಗೆ ಮಾರಾಟಕ್ಕೆ ಬಂದಾಗ ಇಂಧನ ಚಾಲಿತ ಮಾದರಿ ಕಾರಿಗಿಂತ 50,000-70,000 ರೂ. ಹೆಚ್ಚು ದುಬಾರಿಯಾಗಬಹುದು ಎಂದು ಅಂದಾಜಿಸಲಾಗಿದ್ದು, ಈ ಕಾರಿನ ಕಾರ್ಯಕ್ಷಮತೆಯು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಖರೀದಿಸಲು ಮನಸ್ಸು ಸಹ ಮಾಡಬಹುದು. ಜೊತೆಗೆ ಖರೀದಿದಾರರು ನಿಧಾನವಾಗಿ ಸಿಎನ್‌ಜಿ ಕಾರುಗಳತ್ತ ಆಸಕ್ತಿ ತೋರಬಹುದು.
ಟಾಟಾ ಪಂಚ್‌ನ ಬೆಲೆಗಳು ರೂ.6 ಲಕ್ಷದಿಂದ ರೂ 9.54 ಲಕ್ಷದವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ. ಪಂಚ್ ನಾಲ್ಕು ಟ್ರಿಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳಲ್ಲಿ ಪ್ಯೂರ್, ಅಡ್ವೆಂಚರ್ ಹಾಗೂ ಕ್ರಿಯೇಟಿವ್ ಪ್ರಮುಖವಾಗಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಐದು-ಸ್ವೀಡ್ ಮ್ಯಾನುಯಲ್ ಮತ್ತು ಐಚ್ಛಿಕ ಐದು-ಸ್ವೀಡ್ AMT ಜೊತೆಗೆ ಜೋಡಿಸಲಾಗಿದ್ದು, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಪಂಚ್ ಕಾರು ಏಳು-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್, ಆಟೋಮೆಟಿಕ್ ಹೆಡ್‌ಲೈಟ್, ಸಂಪರ್ಕಿತ ಕಾರ್ ತಂತ್ರಜ್ಞಾನ ಮತ್ತು ಕ್ರೂಸ್ ಕಂಟ್ರೋಲ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಡಿಫಾಗ್ಗರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್ ಅನ್ನು ಹೊಂದಿದ್ದು, ಈ ಕಾರು, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗೆ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








