ಅಬ್ಬರಿಸಲು ಬಂದೇ ಬಿಡ್ತು ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್: ಹೇಗಿದೆ?

ಭಾರತದಲ್ಲಿ 90ರ ದಶಕದಲ್ಲಿ ಬಜಾಜ್ ಕಂಪನಿ ಚೇತಕ್ ಸ್ಕೂಟರ್ ಎಲ್ಲರ ಹಾಟ್ ಫೆವರೇಟ್ ಆಗಿತ್ತು. ಪ್ರತಿಯೊಬ್ಬರ ಮನೆಯ ಸದಸ್ಯನಂತೆ ಗುರುತಿಸಿಕೊಂಡಿತ್ತು. ಕಾಲ ಕಳೆದಂತೆ ಚೇತಕ್ ಮಾರುಕಟ್ಟೆಯಿಂದ ಮಾಯವಾಯಿತು. ಆದರೆ, 2019ರಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೂಪದಲ್ಲಿ ರೀ-ಎಂಟ್ರಿ ಕೊಟ್ಟಿತು. ಇದೀಗ, ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಬಿಡುಗಡೆಯಾಗಿದೆ.

ಬಜಾಜ್ ಆಟೋ (Bajaj Auto) ಗುರುವಾರ ದೇಶೀಯ ಮಾರುಕಟ್ಟೆಯಲ್ಲಿ ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್ ನ ಪ್ರೀಮಿಯಂ ಎಡಿಷನ್ ಅನ್ನು ಲಾಂಚ್ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೂ.1.52 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಹೊಚ್ಚ ಹೊಸ ವೈಶಿಷ್ಟ್ಯ ಹಾಗೂ ಬಣ್ಣಗಳನ್ನು ಪಡೆದುಕೊಳ್ಳುವ ಮೂಲಕ ಪ್ರೀಮಿಯಂ ಲುಕ್ ಹೊಂದಿದೆ. ಇದು ಬಹುತೇಕ ಚೇತಕ್ ಅಭಿಮಾನಿಗಳಿಗೆ ಇಷ್ಟವಾಗಬಹುದು ಎಂದು ಹೇಳಬಹುದು.

ಬಹುನೀರಿಕ್ಷಿತ ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಮಾರುಕಟ್ಟೆಗೆ: ಹೇಗಿದೆ?

ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಅದರ ಬೆಲೆಗೆ ತಕ್ಕಂತೆ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಅವುಗಳೆಂದರೆ, ಮ್ಯಾಟ್ ಕೋರ್ಸ್ ಗ್ರೇ, ಮ್ಯಾಟ್ ಕೆರಿಬಿಯನ್ ಬ್ಲೂ ಹಾಗೂ ಸ್ಯಾಟಿನ್ ಬ್ಲ್ಯಾಕ್. ಈ ನೂತನ ಸ್ಕೂಟರ್ ಬುಕಿಂಗ್ ಅನ್ನು ಕಂಪನಿ ಆರಂಭಿಸಿದ್ದು, ಆಸಕ್ತ ಗ್ರಾಹಕರು, ಬುಕ್ ಮಾಡಬಹುದು. ಏಪ್ರಿಲ್ ತಿಂಗಳಿಂದ ವಿತರಣೆಗಳು ಆರಂಭವಾಗಲಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ, ರೂ.30 ಹೆಚ್ಚುವರಿ ದರವನ್ನು ಹೊಂದಿದೆ. ಸದ್ಯ, ಚೇತಕ್ ರೂ.1,21,933 ದರವನ್ನು ಹೊಂದಿದೆ.

ಹೊಸ ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವ ಹೊಸ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು ದೊಡ್ಡದಾದ LCD ಕನ್ಸೋಲ್‌ ಹೊಂದಿದ್ದು, ಅದು ಪ್ರತಿಯೊಂದು ಮಾಹಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಟು ಟೋನ್ ಸೀಟ್, ಬಾಡಿ ಕಲರ್ ರೇರ್ ವ್ಯೂ ಮಿರರ್ಸ್, ಸ್ಯಾಟಿನ್ ಬ್ಲ್ಯಾಕ್ ಗ್ರ್ಯಾಬ್ ರೈಲ್, ಮ್ಯಾಚಿಂಗ್ ಪಿಲಿಯನ್ ಫುಟ್‌ರೆಸ್ಟ್ ಕ್ಯಾಸ್ಟಿಂಗ್‌ ಹಾಗೂ ಬ್ಲ್ಯಾಕ್ ಔಟ್ ಹೆಡ್‌ಲ್ಯಾಂಪ್ ಕೇಸಿಂಗ್ ಅನ್ನು ಪಡೆದಿದೆ.

ಬಹುನೀರಿಕ್ಷಿತ ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಮಾರುಕಟ್ಟೆಗೆ: ಹೇಗಿದೆ?

ಅಲ್ಲದೆ, ಕಳೆದ ತಿಂಗಳು ಬಜಾಜ್ ದೆಹಲಿಯ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಲ್ಲಿಸಿದ್ದ ದಾಖಲೆಗಳು ಬಹಿರಂಗಗೊಂಡಿದ್ದವು. ಅದರ ಪ್ರಕಾರ, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನ ಇಂಡಿಯನ್ ಡ್ರೈವಿಂಗ್ ಕಂಡೀಷನ್ಸ್ (IDC) ರೇಂಜ್‌ನ್ನು ಪ್ರಸ್ತುತ 90 ಕಿಲೋಮೀಟರ್ ನಿಂದ 108 ಕಿ.ಮೀ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ ಆ ಬಗ್ಗೆ ಬಜಾಜ್ ಕಂಪನಿಯಿಂದ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಮುಂಬರುವ ಹಬ್ಬದ ಸೀಸನ್ ನಲ್ಲಿ ಹೆಚ್ಚುವರಿ ರೇಂಜ್‌ನೊಂದಿಗೆ ಈ ಸ್ಕೂಟರ್ ಮಾರುಕಟ್ಟೆಗೆ ಬರಬಹುದು.

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಚೇತಕ್, 60.3Ah ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಹೊಂದಿದೆ. ಇದರ ಮೋಟಾರ್, 4.08kW ಗರಿಷ್ಠ ಪವರ್ ಹಾಗೂ 16 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇಕೋ ಮೋಡ್‌ನಲ್ಲಿ 95 ಕಿಲೋಮೀಟರ್ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 85 ಕಿಲೋಮೀಟರ್ ರೇಂಜ್ ನೀಡುತ್ತದೆ. 5 ಗಂಟೆಯೊಳಗೆ ಇದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆ.

ಬಜಾಬ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಸಾಕಷ್ಟು ನವೀನ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಯೋ ಫೆನ್ಸಿಂಗ್ ಹಾಗೂ ಯುಎಸ್‌ಬಿ ಪೋರ್ಟ್ ಪಡೆದುಕೊಂಡಿದೆ. ಬಜಾಜ್ ಕಂಪನಿಯು ಈ ಸ್ಕೂಟರ್ ಅನ್ನು ಮೂರು ವರ್ಷ ಅಥವಾ 50,000 ಕಿ.ಮೀ. ವಾರಂಟಿಯೊಂದಿಗೆ ಮಾರಾಟ ಮಾಡುತ್ತಿದೆ ಎಂದು ಹೇಳಬಹುದು. ಜೊತೆಗೆ ಭಾರತದ ಮಾರುಕಟ್ಟೆಯಲ್ಲಿ ಎಥರ್ ಹಾಗೂ ಓಲಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಭಾರೀ ಪೈಪೋಟಿ ನೀಡಲಿದೆ.

ಸದ್ಯ, ಬಹುನೀರಿಕ್ಷಿತ ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಮಾರುಕಟ್ಟೆಗೆ ಬಂದಿದ್ದು, ಆದರೆ, ಬೇರೆ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೋಲಿಸಿದರೆ, ಬೆಲೆ ಕೊಂಚ ಜಾಸ್ತಿ ಇದೆ. ಆದರೆ, ಭರಪೂರ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಮುಂಬರುವ ದಿನಗಳಲ್ಲಿ ಹೆಚ್ಚಿನ ರೇಂಜ್ ನೊಂದಿಗೂ ಬಜಾಜ್ ಚೇತಕ್ ಮಾರುಕಟ್ಟೆಗೆ ಬರಲಿದೆ. ಈ ಪ್ರೀಮಿಯಂ ಎಡಿಷನ್ ಸ್ಕೂಟರ್ ಗೆ ಖರೀದಿದಾರರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Thursday, March 2, 2023, 17:27 [IST]
English summary
Bajaj chetak premium 2023 edition launched details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+