ಐಷಾರಾಮಿ ಕಾರುಗಳಿಗೆ ಆಟೋ ಚಾಲಕ ಸವಾಲ್... ಬೆಂಗಳೂರು ಆಟೋ ಚಾಲಕರ ಗತ್ತೇ ಬೇರೆ!

ಬೆಂಗಳೂರಿನ ಆಟೋ ಚಾಲಕರು ಯಾವುದೋ ಒಂದು ವಿಷಯಕ್ಕೆ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿ ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನು ಮಾಡಿಫೈಗೊಳಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾರೆ. ಆಟೋವನ್ನು ಐಷಾರಾಮಿಯಾಗಿ ಮಾರ್ಪಡಿಸಿದ ಚಾಲಕನೊಬ್ಬ ಯಾವುದೇ ಕಾರಿಗೂ ಕಮ್ಮಿಯಿಲ್ಲದಂತೆ ಮಾಡಿಫೈ ಮಾಡಿಸಿದ್ದಾನೆ.

ಬಣ್ಣ ಬಣ್ಣದ ಲೈಟಿಂಗ್, ಆಕರ್ಷಕ ಹೊರಾಂಗಣ, ಅತ್ಯಾಕರ್ಷಕ ಐಷಾರಾಮಿ ಒಳಾಂಗಣ, ಲಕ್ಸೂರಿ ಸೀಟ್‌ಗಳು, ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್ ಸೇರಿದಂತೆ ಆಟೋವನ್ನು ಯಾವುದೇ ಕಾರಿಗೆ ಕಮ್ಮಿಯಿಲ್ಲದಂತೆ ಮಾಡಿಫೈಗೊಳಿಸಿದ್ದಾನೆ. ಈ ಕುರಿತ ವಿಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಯಾರಾದರೂ ಇದರಲ್ಲಿ ಪ್ರಯಾಣಿಸಿದ್ದೀರಾ ಎಂದು ಕೇಳಿದ್ದಾರೆ. ಸದ್ಯ ಬೆಂಗಳೂರಿನ ಈ ವಿಶೇಷ ಆಟೋ ವೈರಲ್ ಆಗುತ್ತಿದೆ.

bangalore auto driver

ಈ ಆಕರ್ಷಕ ಆಟೋದಲ್ಲಿ ಬೆಲೆಬಾಳುವ ಆಸನಗಳು, ಟೇಬಲ್ ಟ್ರೇಗಳು ಮತ್ತು ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ರೋಲ್ ಮಾಡಬಹುದಾದ ಗಾಜಿನ ಕಿಟಕಿಗಳನ್ನು ಒಳಗೊಂಡಿದೆ. ಹ್ಯಾಂಡಲ್‌ ಬಾರ್‌ ಮೇಲೆ ಒಂದು ರೀತಿಯ ಡಿಜಿಟಲ್ ಸ್ಕ್ರೀನ್ ಕೂಡ ಇದೆ. ಒಟ್ಟಾರೆಯಾಗಿ ಬೆಂಗಳೂರಿನ ಪ್ರಯಾಣಿಕರಿಗೆ ಕಾರ್‌ನಷ್ಟೇ ಪ್ರೀಮಿಯಂ ಅನುಭವವನ್ನು ಈ ಆಟೋ ಚಾಲಕ ನೀಡುತ್ತಿರುವುದು ವಿಷೇಶ.

ಹೆಚ್ಚುವರಿಯಾಗಿ, ವಾಹನದ ಹಿಂಭಾಗದಲ್ಲಿ ಸ್ಯಾಂಡಲ್‌ವುಡ್‌ ಹೆಮ್ಮೆಯ ನಟರಾದ ದಿವಂಗತ ಶಂಕರ್ ನಾಗ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಫೋಟೋಗಳೊಂದಿಗೆ ಅಲಂಕರಿಸಿದ್ದಾರೆ. ಈವರೆಗೆ ಆಟೋಗಳಿಗೆ ಈ ಮಟ್ಟದ ಸೌಕರ್ಯವನ್ನು ಯಾವುದೇ ಕಂಪನಿಗಳು ಕೂಡ ನಿಡಿಲ್ಲ. ನಿಜಕ್ಕೆ ರಾಪಿಡೋ, ಓಲಾ, ಉಬರ್‌ನಂತಹ ಸಾರಿಗೆ ವಿಧಾನಗಳು ಬಂದ ಬಳಿಕ ಆಟೋಗಳಿಗೆ ಬೆಡಿಕೆ ಕಡಿಮೆಯಾಗಿದೆ.

ಆಟೋ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿರುವ ಪ್ರಯಾಣಿಕರು ಕಂಡಿತ ಈ ಆಟೋವನ್ನು ಕಂಡರೆ ಒಮ್ಮೆಯಾದ್ರೂ ಪ್ರಯಾಣಿಸಬೇಕು ಎಂದೆನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಟೋದಲ್ಲಿನ ಹಿಂಬದಿಯ ಸೀಟ್‌ಗಳು ದುಬಾರಿ ಕಾರುಗಳಲ್ಲಿ ಕಂಡುಬರುವಂತಹ ಫ್ಯಾಬ್ರಿಕ್‌ನಿಂದ ಮಾಡಿದಂತೆ ಕಾಣುತ್ತಿದೆ. ಈ ಸಿಟ್‌ಗಳ ಗುಣಮಟ್ಟ ಕಮ್ಮಿಯಿದ್ದರೂ ನೊಡುಗರಿಗೆ ಐಷಾರಾಮಿ ಭಾವನೆ ನಿಡುತ್ತಿದ್ದು, ಮೂವರು ಕೂರುವಂತೆ ಸೀಟ್‌ಗಳನ್ನು ಡಿಸೈನ್ ಮಾಡಲಾಗಿದೆ.

ಇನ್ನು ಆಟೋ ಡ್ರೈವರ್‌ಗೆ ಎರಡೂ ಬದಿಗಳಲ್ಲಿ ಡೋರ್‌ಗಳನ್ನು ಅಳವಡಿಸಲಾಗಿದೆ. ಡ್ರೈವರ್ ಸೀಟಿನ ಬದಿಯಲ್ಲಿ ಅಗ್ನಿ ಅವಘಡ ಸಂಭವಿಸಿದಲ್ಲಿ ಕೂಡಲೇ ನಿಯಂತ್ರಿಸಲು ಫೈರ್ ಎಕ್ಸ್ಟಿಂಗ್ವಿಷರ್ ಕೂಡ ಇದೆ. ಡ್ರೈವರ್‌ಗೆ ಎರಡು ಸಣ್ಣ ಫ್ಯಾನ್‌ಗಳು ಹಾಗೂ ಪ್ರಯಾಣಿಕರಿಗೆ ಎರಡು ದೊಡ್ಡ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗದ ಪ್ರಯಾಣಿಕರಿಗೂ ಡೋರ್‌ಗಳು ಇದ್ದು, ಡಿಂಡೋಗಳನ್ನು ಸಹ ನೀಡಲಾಗಿದೆ.

ಹೊರಾಂಗಣ ವಿನ್ಯಾಸದ ಕುರಿತು ಹೇಳುವುದಾದರೆ ಆಟೋ ಬಹುತೇಕ ಕ್ರೋಮ್ ಡಿಸೈನ್ ಹೊಂದಿದೆ. ನಾಲ್ಕು ವಿಧದ ದೊಡ್ಡ ಹಾಗೂ ಸಣ್ಣ ಮಿರರ್‌ಗಳು, ಹೆಡ್‌ಲೈಟ್ ಮತ್ತು ಇಂಡಿಕೇಟರ್ ಅನ್ನು ಸುತ್ತುವರಿದ ಕ್ರೋಮ್ ಡಿಸೈನ್‌ ಮುಂಭಾಗದಿಂದ ಅದ್ದೂರಿಯಾಗಿ ಕಾಣುತ್ತದೆ. ಬದಿಗಳಲ್ಲಿ ಸಿಸಿ ಕ್ಯಾಮರಾಗಳು ಇರುವಂತೆ ಕಾಣುತ್ತಿದ್ದು, ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಇನ್ನು ಕೊನೆಯದಾಗಿ ಹಿಂಬದಿಯಲ್ಲಿ ನೋಡುವುದಾದರೆ ಎಲ್‌ಇಡಿ ಲೈಟ್‌ಗಳೊಂದಿಗೆ ಡಿಜಿಟಲ್ ನೇಮ್‌ ಬೋರ್ಡ್‌ ನೀಡಲಾಗಿದೆ. ಅದರ ಕೆಲಗೆ ನಟರಾದ ಶಂಕರ್‌ನಾಗ್ ಹಾಗೂ ಪುನೀತ್‌ ರಾಜ್‌ಕುಮಾರ್ ಅವರ ಫೋಟೋಗಳನ್ನು ಚಿತ್ರಿಸಿದ್ದಾರೆ. ಇವರಿಬ್ಬರ ಮಧ್ಯದಲ್ಲಿ ನಗುವಿನ ಮಾಣಿಕ್ಯ ಎಂದು ಬರೆಯಲಾಗಿದೆ. ಒಟ್ಟಾರೆ ಇದು ಆಟೋದಂತೆ ಕಾಣುವ ಐಷಾರಾಮಿ ಕಾರನ್ನು ನೆನಪಿಸುತ್ತದೆ. ಈ ಆಟೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Tuesday, June 6, 2023, 13:52 [IST]
English summary
Bangalore auto driver modified normal auto into luxury auto
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+