Bengaluru: ಎಫ್4 ರೇಸ್‌ಗೆ ಆಯ್ಕೆಯಾದ ಬೆಂಗಳೂರಿನ ಹುಡುಗ

ಬೆಂಗಳೂರಿನ (Bengaluru) ಕೆನಡಿಯನ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ರೋಹನ್ ಮಾದೇಶ್ (Rohaan Madesh), ಚೆನ್ನೈನಲ್ಲಿ ಡಿಸೆಂಬರ್ 9 ಮತ್ತು 10 ರಂದು ನಡೆಯುತ್ತಿರುವ ಪ್ರತಿಷ್ಠಿತ ಎಫ್4 ರೇಸ್‌ಗೆ ಆಯ್ಕೆಯಾಗಿದ್ದಾರೆ. ಚೊಚ್ಚಲ ಋತುವಿನಲ್ಲಿ ಈ ಸ್ಪರ್ಧೆಗೆ ಭಾಗವಹಿಸುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮೋಟಾರ್ ಸ್ಪೋರ್ಟ್‌ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ರೋಹನ್ ಮಾದೇಶ್, ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ವರ್ಷ ರೋಹನ್, ಸೀನಿಯರ್ ರೋಟಾಕ್ಸ್ ಮ್ಯಾಕ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಪೋರ್ಚುಗಲ್‌ನಲ್ಲಿ ನಡೆದ ವರ್ಲ್ಡ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 76 ದೇಶಗಳ ರೇಸರ್‌ಗಳು ಭಾಗವಹಿಸಿದ್ದಈ ಸ್ಪರ್ಧೆಯಲ್ಲಿ, ರೋಹನ್ ಎರಡನೇ ಸ್ಥಾನವನ್ನು ಪಡೆದಿದ್ದರು.

Bengaluru: ಎಫ್4 ರೇಸ್‌ಗೆ ಆಯ್ಕೆಯಾದ ಬೆಂಗಳೂರಿನ ಹುಡುಗ

ಕಳೆದ ವರ್ಷ, ರೋಹನ್ ಮೆರಿಡಸ್ ಕಪ್‌ನಲ್ಲಿ ಚಾಂಪಿಯನ್‌ಶಿಪ್‌ ಆಗಿ ಹೊರಹೊಮ್ಮಿದ್ದರು. ದುಬೈನಲ್ಲಿ ನಡೆದ ರೋಟಾಕ್ಸ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿಯೂ ಭಾಗವಾಗಿದ್ದರು. 2021ರಲ್ಲಿ, ರೋಹನ್ ಎಸ್30 ನ್ಯಾಷನಲ್ ಚಾಂಪಿಯನ್‌ಶಿಪ್‌ ಗೆದಿದ್ದರು. ರೋಟಾಕ್ಸ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ 2ನೇ ರನ್ನರ್ ಅಪ್ ಆಗಿದ್ದರು. 2020ರಲ್ಲಿ, ಅವರು ಎಕ್ಸ್30 ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ವೈಸ್ ಚಾಂಪಿಯನ್ ಆಗಿದ್ದರು.

2019ರಲ್ಲಿ, ಫ್ರಾನ್ಸ್‌ನಲ್ಲಿ ನಡೆದ ರೋಟಾಕ್ಸ್ ವರ್ಲ್ಡ್ ಫೈನಲ್ಸ್‌ನಲ್ಲಿ ರೋಹನ್ ಭಾರತವನ್ನು ಪ್ರತಿನಿಧಿಸಿದ್ದರು. ಹಾಗೆಯೇ 2018ರಲ್ಲಿ ಫ್ರಾನ್ಸ್‌ನ ಎಕ್ಸ್30 ವರ್ಲ್ಡ್ ಫೈನಲ್ಸ್‌ನಲ್ಲಿ ಭಾರತದ ಪರವಾಗಿ ಸ್ಪರ್ಧಿಸಿದ್ದರು. ಇವುಗಳು ಮಾತ್ರವಲ್ಲದೆ, ವಿವಿಧ ದೇಶೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರೋಹನ್ ಅವರು, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Bengaluru: ಎಫ್4 ರೇಸ್‌ಗೆ ಆಯ್ಕೆಯಾದ ಬೆಂಗಳೂರಿನ ಹುಡುಗ

ಈ ಬಗ್ಗೆ ಮಾತನಾಡಿರುವ ರೋಹನ್ ಮಾದೇಶ್, 'ರೇಸಿಂಗ್ ನಿಂದ ನಾನು ಸಾಕಷ್ಟು ಕಲಿತ್ತಿದ್ದೇನೆ. ಭಾಗವಹಿಸುವ ಪ್ರತಿಯೊಂದು ಸ್ಪರ್ಧೆಯಲ್ಲೂ ಉತ್ತಮವಾಗಿ ಪ್ರದರ್ಶನ ನೀಡುವುದಕ್ಕಾಗಿ ಕಾರಿನ ಕುರಿತು ವಿಶ್ಲೇಷಿಸುವುದು ಹೇಗೆಂಬುದನ್ನು ತಿಳಿದುಕೊಂಡಿದ್ದೇನೆ. ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ಫಿಟ್‌ನೆಸ್‌ ಅಗತ್ಯವಿದ್ದು, ಅದಕ್ಕಾಗಿ ನಿತ್ಯ ವ್ಯಾಯಾಮವನ್ನು ಮಾಡುತ್ತೇನೆ. ನನ್ನ ಸಾಧನೆಗೆ ನನ್ನ ಕುಟುಂಬ ಹಾಗೂ ಶಾಲೆ ಬೆನ್ನೆಲುಬಾಗಿ ನಿಂತಿದೆ' ಎಂದು ಹೇಳಿದ್ದಾರೆ.

ಬೆಂಗಳೂರು ಮೂಲದ ರೋಹನ್ 7 ವರ್ಷದ ಬಾಲಕನಾಗಿರುವಾಗಲೇ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಪ್ರಾರಂಭಿಸಿದ್ದರು. ಅಂತರರಾಷ್ಟ್ರೀಯ ರೇಸಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಮಲೇಷ್ಯಾದಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. F1 (ಫಾರ್ಮುಲಾ 1) ರೇಸ್ ಹಾಗೂ ಯುರೋಪಿಯನ್ ಕಾರ್ಟಿಂಗ್ ಸ್ಪರ್ಧೆಗಳನ್ನು ನೋಡುವ ಮೂಲಕ ರೇಸಿಂಗ್ ನತ್ತ ರೋಹನ್ ಆಸಕ್ತಿ ಬೆಳೆಸಿಕೊಂಡಿದ್ದು, ಈಗ ಎಫ್4 ರೇಸ್‌ನಲ್ಲಿ ಭಾಗವಹಿಸುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

Bengaluru: ಎಫ್4 ರೇಸ್‌ಗೆ ಆಯ್ಕೆಯಾದ ಬೆಂಗಳೂರಿನ ಹುಡುಗ

ರೋಹನ್ ಸಾಧನೆ ಬಗ್ಗೆ ಮಾತನಾಡಿರುವ ಕೆನಡಿಯನ್ ಇಂಟರ್‌ನ್ಯಾಷನಲ್ ಶಾಲೆಯ ಎಂಡಿ ಶ್ವೇತಾ ಶಾಸ್ತ್ರಿ, 'ರೋಹಾನ್ ಚಿಕ್ಕ ವಯಸ್ಸಿನಲ್ಲಿಯೇ ಮೋಟಾರ್ ರೇಸಿಂಗ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ರೇಸಿಂಗ್‌ ಬಗ್ಗೆ ಆತನಿಗಿರುವ ಬದ್ಧತೆ ಬಹುದೊಡ್ಡ ಎತ್ತರಕ್ಕೆ ಕೊಂಡೊಯ್ಯಲಿದ್ದು, ನಾನು ಕೂಡ ರೇಸ್ ನೋಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 5, 2023, 16:50 [IST]
English summary
Bengaluru canadian international school student selected f4 motor racing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+