ಬೆಂಗಳೂರಿನಲ್ಲಿ CEAT ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ಗೆ ಅದ್ದೂರಿ ತೆರೆ
CEAT ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ (ISRL) ನ ಗ್ರ್ಯಾಂಡ್ ಫಿನಾಲೆಯೊಂದಿಗೆ ಬೆಂಗಳೂರು ರೋಮಾಂಚಕ ತೆರೆ ಕಂಡಿದೆ. ಈ ರಣರೋಚಕ ರೇಸಿಂಗ್ ಲೀಗ್‌ನ ಅಂತಿಮ ಹಂತದ ವಿಜೇತರನ್ನು ಘೋಷಿಸಲಾಗಿದೆ. ಅದರಂತೆ ಬಿಗ್ ರಾಕ್ ಮೋಟಾರ್ ಸ್ಪೋರ್ಟ್ ಹೆಸರಿನ ತಂಡ ಇದೀಗ ಈ ಸ್ಪರ್ಧೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಈ ತಂಡ ಪ್ರಥಮ ಬಹುಮಾನ ಗಳಿಸಿದೆ.
CEAT ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ವಿಶ್ವದ ಮೊದಲ ಫ್ರಾಂಚೈಸ್ ಆಧಾರಿತ ಸೂಪರ್‌ಕ್ರಾಸ್ ಲೀಗ್ ಸ್ಪರ್ಧೆಯಾಗಿದೆ. ಇದು ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಆಯೋಜಿಸಲಾದ ಸ್ಪರ್ಧೆಯಾಗಿದೆ. ವಿವಿಧ ಮಾದರಿಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಅತ್ಯುತ್ತಮ ಪ್ರದರ್ಶನದ ಮೂಲಕ ಗೆಲ್ಲಬೇಕು.

ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ಸಂಘಟಕರು ಈ ಸ್ಪರ್ಧೆಗೆ ಸುರಕ್ಷಿತ ವೇದಿಕೆಯನ್ನು ಒದಗಿಸಿದ್ದಾರೆ. ಭಾರತದಲ್ಲಿ ಈ ಸ್ಪರ್ಧೆ ಮುಗಿದಿದೆ. ಫೈನಲ್‌ಗಳು ಮುಗಿದಿದ್ದು, ವಿಜೇತರನ್ನು ಘೋಷಿಸಲಾಗಿದೆ. ಇದರ ಪ್ರಕಾರ ಬಿಗ್ ರಾಕ್ ಮೋಟಾರ್ ಸ್ಪೋರ್ಟ್ ಜಯಗಳಿಸಿದೆ. ತಂಡ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಗಳಿಸಿತು. 450 ಸಿಸಿ ವಿಭಾಗದಲ್ಲಿ ಈ ಗುಂಪಿನ ಮಡ್ಮೋರೆಸ್ ಕವಾಸಕಿ ಬೈಕ್ ಓಡಿಸಿ ಮೊದಲ ಸ್ಥಾನ ಪಡೆದರು.
250ಸಿಸಿ ವಿಭಾಗದಲ್ಲಿಯೂ ಇದೇ ಗುಂಪಿನ ರೀಡ್ ಟೈಲರ್ ಪ್ರಥಮ ಸ್ಥಾನ ಪಡೆದರು. 250ಸಿಸಿ ಭಾರತ-ಏಷ್ಯಾ ಮಿಶ್ರ ವಿಭಾಗದಲ್ಲಿ ಇದೇ ಗುಂಪಿನ ಬೆಂಜನ್ ಅಗ್ರಸ್ಥಾನ ಪಡೆದರು. ಈ ರೀತಿಯಾಗಿ ಹಲವು ಸ್ಪರ್ಧೆಗಳಲ್ಲಿ ಇದೇ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಈ ತಂಡವನ್ನು ಈ ಸ್ಪರ್ಧೆಯ ಅಂತಿಮ ವಿಜೇತರೆಂದು ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಫೈನಲ್ ಪಂದ್ಯಗಳು ನಡೆದವು. 8 ಸಾವಿರಕ್ಕೂ ಹೆಚ್ಚು ಮಂದಿ ಪಂದ್ಯಕ್ಕೆ ಹಾಜರಾಗಿದ್ದರು.

ಸಿಯಟ್ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ತಂಡದ ಸಹ-ಸಂಸ್ಥಾಪಕ ವಿರ್ ಪಟೇಲ್ ಅವರು ಮಾತನಾಡಿ, "ಬೆಂಗಳೂರಿನಲ್ಲಿ ನಡೆದ ಫೈನಲ್‌ಗಳು ನಮ್ಮ ನಿರೀಕ್ಷೆಯನ್ನು ಮೀರಿದೆ. ನಾವು ಎರಡನೇ ಸೀಸನ್‌ಗಾಗಿ ಎದುರು ನೋಡುತ್ತಿದ್ದೇವೆ. ಅತಿ ಹೆಚ್ಚು ವೀಕ್ಷಿಸಿದ ಬೈಕ್ ರೇಸ್ ಈವೆಂಟ್‌ಗಾಗಿ ನಾವು ವಿಶ್ವದಾಖಲೆ ಮಾಡಿದ್ದೇವೆ. ಇಲ್ಲಿಯವರೆಗೆ, ಇದು ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಬೈಕ್ ರೇಸ್ ಆಗಿದೆ.
ಇದು ನಮಗೆ ಹೆಚ್ಚಿನ ಪ್ರೋತ್ಸಾಹದ ವಿಷಯವಾಗಿದೆ. ನಾವು FMS, FMI, ರೇಸಿಂಗ್ ತಂಡಗಳು ಮತ್ತು ಎಲ್ಲಾ ಪಾಲುದಾರರಿಂದ ಅತ್ಯುತ್ತಮ ಸಹಕಾರವನ್ನು ಪಡೆದಿದ್ದೇವೆ. CEAT ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ಪರವಾಗಿ ವಿಜೇತರಿಗೆ ಅಭಿನಂದನೆಗಳು. ಸ್ಪರ್ಧಿಗಳು ತಮ್ಮ ಪ್ರತಿಭೆ ಹಾಗೂ ಶ್ರಮವನ್ನು ತೋರಿ ಈ ಸ್ಪರ್ಧೆಯನ್ನು ಯಶಸ್ವಿಗೊಳಿಸಿದ್ದಾರೆ,'' ಎಂದು ಹೇಳಿದರು.
ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್‌ನ ಮೊದಲ ಪಂದ್ಯ ಇದಾಗಿದ್ದು, ಈ ಮೊದಲ ಪಂದ್ಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಹೊರತಾಗಿ ಅವರು ಸ್ಪರ್ಧೆಯನ್ನು ಹೆಚ್ಚು ಸುರಕ್ಷಿತ ಮತ್ತು ಸ್ಪರ್ಧಾತ್ಮಕ ವೇದಿಕೆಯಾಗಿ ಪರಿಣಾಮಕಾರಿಯಾಗಿ ಪರಿವರ್ತಿಸಿದ್ದಾರೆ. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಕೌಶಲ್ಯ ಮಟ್ಟಗಳ ಸವಾರರು ಸ್ಪರ್ಧಿಸಬಹುದು ಮತ್ತು ಗೆಲ್ಲಬಹುದಾಗಿದೆ.
CEAT ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ಸ್ಪರ್ಧೆಯು ಮತ್ತೆನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಎರಡನೇ ಸೀಸನ್‌ನ ಅಪ್‌ಡೇಟ್ ಅನ್ನು ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವರದಿಯಾಗಿದೆ. ಪ್ರಸ್ತುತ, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಆದರೆ ಶೀಘ್ರದಲ್ಲೇ ಎಲ್ಲಾ ಮಾಹಿತಿಗಳು ಶೀಘ್ರದಲ್ಲೇ ಬಹಿತಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








