ಟಾಟಾ ಪಂಚ್ ಎಂಜಿನ್‌ನಲ್ಲಿ ಭಾರೀ ಬದಲಾವಣೆ... ಇನ್ಮುಂದೆ ಕಡಿಮೆ ಕಂಪನ, ಒಳಗೆ ಪಿನ್‌ಡ್ರಾಪ್ ಸೈಲೆನ್ಸ್

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರುಗಳಲ್ಲಿ ಟಾಟಾ ಮೋಟಾರ್ಸ್‌ನ ಪಂಚ್ ಎಸ್‌ಯುವಿ ಕೂಡ ಒಂದು. ಅಕ್ಟೋಬರ್ 2021 ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಟಾಟಾ ಪಂಚ್ ಪ್ರವೇಶ ಮಟ್ಟದ ಪ್ರಯಾಣಿಕ ವಾಹನ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದೆ. ಇದು ಪ್ರಸ್ತುತ ಟಾಟಾ ನೆಕ್ಸಾನ್ ನಂತರ ಅತಿ ಹೆಚ್ಚು ಮಾರಾಟವಾಗುವ ಎರಡನೇ ಉತ್ಪನ್ನವಾಗಿದೆ.

ದೇಶದಲ್ಲಿನ ಮಧ್ಯಮ ವರ್ಗದವರ ಅಚ್ಚುಮೆಚ್ಚಿನ ಆಯ್ಕೆಯಾಗಿರುವ ಈ ಮಾದರಿಯು 2022 ರಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಟಾಪ್ 10 ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಇದು ಬಜೆಟ್ ಕಾರಾಗಿದ್ದು, ಬೆಲೆಗೆ ಪ್ರಮುಖ್ಯತೆ ನೀಡಿ ಸಾಧ್ಯವಾದಷ್ಟು ಫೀಚರ್‌ಗಳನ್ನು ಇದರಲ್ಲಿ ಒದಗಿಸಲಾಗಿದೆ. ಹಾಗೆಯೇ ಈ ಮಿನಿ ಎಸ್‌ಯುವಿಯ ಡಿಸೈನ್ ಹಾಗೂ ಪರ್ಫಾಮೆನ್ಸ್ ಕೂಡ ಈ ವಿಭಾಗದಲ್ಲಿ ಅತ್ಯುತ್ತಮವಾಗಿರುವುದು ಇದರ ಜನಪ್ರಿಯತೆಗೆ ಪ್ರಮುಖ ಕಾರಣ ಎಂದು ಹೇಳಬಹುದು.

ಈಗ ಮತ್ತಷ್ಟು ಪರಿಷ್ಕರಿಸಿದ ಎಂಜಿನ್ ಪಡೆದ ಟಾಟಾ ಪಂಚ್
ಈಗ ಬಳಕೆದಾರರಿಗೆ ಒಟ್ಟಾರೆ ಅನುಭವವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಟಾಟಾ ಪಂಚ್ ಹೊಸ RDE-ಕಾಂಪ್ಲೈಂಟ್ (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮೋಟಾರ್‌ನೊಂದಿಗೆ ಸಜ್ಜುಗೊಳ್ಳುತ್ತಿದೆ. ಕ್ಯಾಬಿನ್ ಒಳಗೆ ಮತ್ತು ಹುಡ್ ಅಡಿಯಲ್ಲಿ, ಎಂಜಿನ್ ಶಬ್ದವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಬಾಗಿಲು ಮುಚ್ಚಿದಾಗ AC ಮತ್ತು ಫ್ಯಾನ್ ಸ್ವಿಚ್ ಆಫ್ ಆಗಿದ್ದರೂ ಸಹ ಪಿನ್-ಡ್ರಾಪ್ ಶಬ್ದವನ್ನು ಹೊಂದಿರುತ್ತದೆ. ಹಳೆಯ ಆವೃತ್ತಿಗೆ ಹೋಲಿಸಿದರೆ ಹೊಸ RDE-ಕಾಂಪ್ಲೈಂಟ್ ಪಂಚ್ ಮುಕ್ತ ನೋಟವನ್ನು ಹೊಂದಿದೆ.

RDE-ಕಾಂಪ್ಲೈಂಟ್ ಪಂಚ್‌ನಲ್ಲಿ ಕಂಪನಗಳನ್ನು (ವೈಬ್ರೇಷನ್) ಸಹ ಕಡಿಮೆ ಮಾಡಲಾಗಿದೆ. RDEಯು BS6 ಹಂತ II ಹೊರಸೂಸುವಿಕೆಯ ಮಾನದಂಡಗಳ ಭಾಗವಾಗಿದ್ದು ಇದು ಏಪ್ರಿಲ್ 01, 2023 ರಿಂದ ಜಾರಿಗೆ ಬರಲಿದೆ. BS6 ಹಂತ II ಯುರೋಪ್ ದೇಶಗಳಲ್ಲಿ ಜಾರಿಯಲ್ಲಿರುವ ಯುರೋ VI ಹೊರಸೂಸುವಿಕೆಯ ಮಾನದಂಡಗಳಂತೆಯೇ ಇರುತ್ತದೆ. RDE ಪ್ರಕಾರ, ಎಲ್ಲಾ ವಾಹನಗಳು MIDC (ಮಾರ್ಪಡಿಸಿದ ಇಂಡಿಯನ್ ಟೆಸ್ಟ್ ಸೈಕಲ್) ಮಾನದಂಡಗಳ ಆಧಾರದ ಮೇಲೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಇನ್ನು RDE-ಕಾಂಪ್ಲೈಂಟ್ ಪಂಚ್ ಎಂಜಿನ್ ನವೀಕರಣದ ಹೊರತಾಗಿ, ಪಂಚ್ ಹೆಚ್ಚಾಗಿ ಮೊದಲಿನಂತೆಯೇ ಇರುತ್ತದೆ. ಪವರ್ ಮತ್ತು ಟಾರ್ಕ್ ಉತ್ಪಾದನೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿಲ್ಲ. ಟಾಟಾ ಪಂಚ್‌ನ ಪ್ರಸ್ತುತದ 1.2-ಲೀಟರ್ ಪೆಟ್ರೋಲ್ ಮೋಟಾರ್ 86 PS ಗರಿಷ್ಠ ಪವರ್ ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಸೇರಿದ್ದು, ಹೊಸ ಪರಿಷ್ಕರಣೆಯಲ್ಲಿ ಇವು ಬದಲಾಗಿಲ್ಲ.

ಇನ್ನು ಮೊದಲಿನಿಂದಲೂ ಪಂಚ್ ಇಕೋ ಮತ್ತು ಸಿಟಿ ಡ್ರೈವ್ ಮೋಡ್‌ಗಳೊಂದಿಗೆ ಲಭ್ಯವಿದೆ. ಪಂಚ್‌ನ ಟಾಪ್-ಸ್ಪೆಕ್ ರೂಪಾಂತರಗಳು ಸಮಗ್ರ ಶ್ರೇಣಿಯ ವೈಶಿಷ್ಟ್ಯಗಳನ್ನು ನೀಡುತ್ತವೆ. ಇಂಟೀರಿಯರ್‌ನಲ್ಲಿ ಪಂಚ್ ಹರ್ಮನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮೂಲಕ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಸಂಪೂರ್ಣ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹಾಗೂ ಲೆದರ್ ಸ್ಟೀರಿಂಗ್, ಗೇರ್ ನಾಬ್ ಅನ್ನು ಹೊಂದಿದೆ.

ಹೊರಾಂಗಣ ವಿಷಯಕ್ಕೆ ಬಂದರೆ ಸಖತ್ ಸ್ಟೈಲಿಷ್ ಹಾಗೂ ಫ್ಯೂಚರಿಸ್ಟಿಕ್ ಆಗಿ ಕಾಣುವ ಟಾಟಾ ಪಂಚ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಆಟೋ ಫೋಲ್ಡಿಂಗ್ ಒಆರ್‌ವಿಎಂಗಳು, ಪಡಲ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ವೈಪರ್ + ವಾಶ್ ಮತ್ತು ಡಿಫಾಗರ್ ಹೊಂದಿದೆ. ಹಾಗೆಯೇ ಸ್ಪೋರ್ಟಿ ಲುಕ್‌ಗನಲ್ಲಿ ಕಾಣುವ ಈ ಮಿನಿ ಎಸ್‌ಯುವಿಯು ತನ್ನ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಸುರಕ್ಷತಾ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ ಪಂಚ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು, ಕಾರ್ನರಿಂಗ್ ಫಂಕ್ಷನ್‌ನೊಂದಿಗೆ ಫ್ರಂಟ್ ಫಾಗ್ ಲ್ಯಾಂಪ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪೆರಿಮೆಟ್ರಿಕ್ ಅಲಾರ್ಮ್ ಮತ್ತು ಬ್ರೇಕ್ ಸ್ವೇ ಕಂಟ್ರೋಲ್‌ನೊಂದಿಗೆ ಎಬಿಎಸ್ ಮತ್ತು ಇಬಿಡಿ ವೈಶಿಷ್ಟ್ಯಗಳು ಸೇರಿವೆ. 5-ಸ್ಟಾರ್ GNCAP ಸುರಕ್ಷತಾ ರೇಟಿಂಗ್‌ನೊಂದಿಗೆ ಪಂಚ್ ದೇಶದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
English summary
Big change in tata punch engine now less vibration pindrop silence
Story first published: Wednesday, January 25, 2023, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X