BMW ಅಂದರೆ ಏನು ಗೊತ್ತಾ? ಭಾರತದ 99% ಜನರು ಉಚ್ಚರಿಸಲು ವಿಫಲ!

BMW ಎಂಬ ಹೆಸರು ಕೇಳದವರು ಯಾರು ಇರಲ್ಲ ಎಂದು ಹೇಳಬಹುದು. ಅಷ್ಟು ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಐಷಾರಾಮಿ ಕಾರುಗಳನ್ನು ತಯಾರಿಸಿ ಮಾರಾಟ ಮಾಡುವ ಕಂಪನಿ. ಈ ಕಂಪನಿಯನ್ನು BMW ಎಂದು ಏಕೆ ಕರೆಯುತ್ತಾರೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.

BMW ಕಂಪನಿಯ ಹೆಸರಿಗೆ ಕಾರಣವನ್ನು ತಿಳಿದುಕೊಳ್ಳುವ ಮೊದಲು, ಕಂಪನಿಯ ವಿಶಿಷ್ಟ ವೈಶಿಷ್ಟ್ಯವನ್ನು ನೋಡೋಣ. ಸಾಮಾನ್ಯವಾಗಿ ಕಾರು ತಯಾರಿಕಾ ಕಂಪನಿಗಳು ಕಾರನ್ನು ತಯಾರಿಸುವಾಗ ಆ ಕಾರಿಗೆ ಹೆಸರಿಟ್ಟು ಆ ಹೆಸರನ್ನು ಜನರಲ್ಲಿ ಜನಪ್ರಿಯಗೊಳಿಸುತ್ತರೆ. ಉದಾಹರಣೆಗೆ, ಟಾಟಾ ಕಂಪನಿಯು ಪ್ರಸ್ತುತ ನೆಕ್ಸಾನ್ ಮತ್ತು ಅಲ್ಟ್ರೋಜ್ ಕಾರುಗಳನ್ನು ಜನಪ್ರಿಯಗೊಳಿಸುತ್ತಿದೆ. ಇದೇ ರೀತಿ ಇತರ ವಾಹನ ತಯಾರಕರು ಮಾಡುತ್ತಾರೆ.

BMW

ಆದರೆ ಬಿಎಂಡಬ್ಲ್ಯು ತನ್ನ ಕಂಪನಿಯ ಕಾರುಗಳ ಹೆಸರನ್ನು ಬಹಳ ಚಿಕ್ಕದಾಗಿ ಇಡುತ್ತದೆ. ಮತ್ತು ಅವರು ಅದನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ BMW 3 ಸೀರಿಸ್, 5 ಸೀರಿಸ್, X1, X5 ಹೀಗೆ ಸೀರಿಸ್ ಹೆಸರಿನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತದೆ. ಈ ಕಾರುಗಳನ್ನು ಮಾರಾಟ ಮಾಡಲು ಕಾರಿನ ಹೆಸರಿಗಿಂತ BMW ಎಂಬ ಜನಪ್ರಿಯ ಬ್ರ್ಯಾಂಡ್ ಹೆಸರು ಸಾಕು.

ಪ್ರಸಿದ್ಧ BMW ಕಂಪನಿಯ ಇತಿಹಾಸವನ್ನು ನೋಡುವುದಾದರೆ, ಈ BMW ಕಂಪನಿಯನ್ನು 1916 ರಲ್ಲಿ ಜರ್ಮನಿಯಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಮೂಲತಃ ವಿಮಾನ ಎಂಜಿನ್ ತಯಾರಕರಾಗಿ ರೂಪುಗೊಂಡಿತು. ಅವರು ಮೊದಲನೇ ವಿಶ್ವ ಯುದ್ದ 1917-1918 ಮತ್ತು ಎರಡನೇ ವಿಶ್ವ ಯುದ್ದ 1933-1945 ಸಮಯದಲ್ಲಿ ವಿಮಾನ ಎಂಜಿನ್‌ಗಳನ್ನು ತಯಾರಿಸಿದರು. ಇಷ್ಟೇ ಅಲ್ಲ, ಕಂಪನಿಯು ಹಡಗುಗಳಿಗೆ ಎಂಜಿನ್‌ಗಳನ್ನು ಸಹ ತಯಾರಿಸಲು ಪ್ರಾರಂಭಿಸಿದ್ದರು.

BMW

ಪ್ರಸ್ತುತ ಅವರು BMW ಕಂಪನಿಯು ಕೇವಲ ಕಾರುಗಳನ್ನು ತಯಾರಿಸುತ್ತಿದ್ದಾರೆ. ಪ್ರಸ್ತುತ BMW, Mini ಮತ್ತು Rolls-Royce ಬ್ರ್ಯಾಂಡ್‌ಗಳ ಅಡಿಯಲ್ಲಿ ಕಾರುಗಳನ್ನು ತಯಾರಿಸುವ ಶಾಖೆಯ ಕಂಪನಿಯಾಗಿದೆ. ಈ ಕಂಪನಿಯು ಜರ್ಮನಿಯಲ್ಲಿ ಮಾತ್ರವಲ್ಲದೆ ಬ್ರೆಜಿಲ್, ಚೀನಾ, ಭಾರತ, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಕಾರುಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

BMW ಈ ಹೆಸರಿನ ಅರ್ಥ Bayerische Motoren Werke GmbH ಆಗಿದ್ದು, ಇದು ಜರ್ಮನ್ ಹೆಸರು. ಈ ಹೆಸರಿನ ಅರ್ಥ Bavarian Engine Works Company ಆಗಿದೆ. ಕಂಪನಿಯನ್ನು ಮೊದಲು ಜರ್ಮನಿಯ ಬವೇರಿಯಾದಲ್ಲಿ ಸ್ಥಾಪಿಸಲಾಯಿತು. ಆದ್ದರಿಂದ ಹೆಸರಿನ ಮೊದಲ ಪದ ಬೇಯೆರಿಸ್ಚೆ ಮತ್ತು ಇದು ಎಂಜಿನ್ ಉತ್ಪಾದನಾ ಕಂಪನಿಯಾಗಿದ್ದರಿಂದ ಎರಡನೇ ಪದ ಮೋಟೋರೆನ್ ಮತ್ತು ಕಂಪನಿಯ ಹೆಸರಿಗೆ ವರ್ಕ್ಸ್ ಎಂಬ ಪದವನ್ನು ಸೇರಿಸಲಾಯಿತು.

Bayerische Motoren Werke GmbH ಎಂದರೆ BMW, ಕುತೂಹಲಕಾರಿ ಅಂಶವೆಂದರೆ, 99 ಪ್ರತಿಶತ ಭಾರತೀಯರಿಗೆ Bayerische Motoren Werke GmbH ಎಂಬ ಹೆಸರನ್ನು ಹೇಗೆ ಉಚ್ಚರಿಸಬೇಕು ಎಂದು ತಿಳಿದಿಲ್ಲ. ಜರ್ಮನ್ ಪದಗಳ ಉಚ್ಚಾರಣೆ ವಿಭಿನ್ನವಾಗಿದೆ ಮತ್ತು ಅನೇಕ ಜನರು ಅದನ್ನು ಉಚ್ಚರಿಸಲು ಕಷ್ಟಪಡುತ್ತಾರೆ, ಆದ್ದರಿಂದ ಇದನ್ನು ಸುಲಭವಾಗಿ BMW ಎಂದು ಉಚ್ಚರಿಸಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂದಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಸೋಷಿಯಲ್ ಮೀಡಿಯಾಗಳ ಮೂಲಕವು ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡಲು ಮರೆಯಬೇಡಿ.

More from DriveSpark

Article Published On: Tuesday, April 25, 2023, 8:30 [IST]
English summary
Bmw full form what does it mean details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+