ಭಾರತದಲ್ಲಿ ಬಹುನಿರೀಕ್ಷಿತ BMW i7 M70 xDrive ಜೊತೆಗೆ BMW 740d M ಸ್ಪೋರ್ಟ್ ಬಿಡುಗಡೆ

BMW ಇಂಡಿಯಾವು ಮೊದಲ ಬಾರಿಗೆ BMW i7 M70 xDrive ಅನ್ನು ಹೊಸ BMW 7 ಸಿರೀಸ್ 740d M ಸ್ಪೋರ್ಟ್ ಡೀಸೆಲ್ ವೇರಿಯೆಂಟ್‌ನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

BMW 740d M ಸ್ಪೋರ್ಟ್ ಅನ್ನು ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದಿಸಿದರೆ, ಹೊಸ ಎಲೆಕ್ಟ್ರಿಕ್ BMW i7 M70 xDrive ಸಂಪೂರ್ಣ ಬಿಲ್ಟ್-ಅಪ್ ಘಟಕವಾಗಿ (CBU) ಲಭ್ಯವಿದೆ. ಈ ಎರಡೂ ಕಾರುಗಳು ಇಂದಿನಿಂದ ಎಲ್ಲಾ BMW ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿವೆ. ಎರಡೂ ಐಷಾರಾಮಿ ಕಾರುಗಳ ಬೆಲೆಯು ಕೆಳಗಿನಂತಿದೆ.

bmw-i7-m70-xdrive-bmw-740d-m-sport-launched-india

ಹೊಸ BMW 740d M ಸ್ಪೋರ್ಟ್ ಬೆಲೆಯು ರೂ. 1,81,00,000 (ಎಕ್ಸ್‌ ಶೋರೂಂ) ಇದ್ದರೇ, ಭಾರತದ ಮೊಟ್ಟಮೊದಲ BMW i7 M70 xDrive ಬೆಲೆಯು ರೂ. 2,50,00,000 (ಎಕ್ಸ್‌ ಶೋರೂಂ) ಇದೆ. ಬೆಲೆಯ ವಿಷಯವಾಗಿ ತೆರಿಗೆ ಮತ್ತಿತರ ಗೊಂದಲವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ BMW ಡೀಲರ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಹೊಸ BMW 740d M ಸ್ಪೋರ್ಟ್ ಆಕ್ಸೈಡ್ ಗ್ರೇ, ಮಿನರಲ್ ವೈಟ್, ಬ್ಲ್ಯಾಕ್ ಸಫೈರ್ ಮತ್ತು BMW ಇಂಡಿವಿಜುವಲ್ ಟಾಂಜಾನೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು BMW i7 M70 xDrive ಡ್ಯುಯಲ್-ಟೋನ್ ಬಣ್ಣಗಳಲ್ಲಿ BMW ಇಂಡಿವಿಜುವಲ್ ಪೇಂಟ್‌ವರ್ಕ್ ಜೊತೆಗೆ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ. ಬ್ಲ್ಯಾಕ್ ಸಫೈರ್ ರೂಫ್ ಅಥವಾ ಆಕ್ಸೈಡ್ ಗ್ರೇ ರೂಫ್ ಬಣ್ಣವನ್ನು ಗ್ರಾಹಕರ ಆಯ್ಕೆಯಂತೆ ಇಂಡಿವಿಜುವಲ್ ಪೇಂಟ್‌ನೊಂದಿಗೆ ಪಡೆಯಬಹುದು.

bmw-i7-m70-xdrive-bmw-740d-m-sport-launched-india

740d M ಸ್ಪೋರ್ಟ್ ಮತ್ತು i7 M70 xDrive ಎರಡನ್ನೂ BMW ಇಂಡಿವಿಜುವಲ್ ಲೆದರ್ 'ಮೆರಿನೊ' ಅಪ್ಹೋಲ್ಸ್ಟರಿಯಲ್ಲಿ Amarone, Tartufo, Mocha, Black ಮತ್ತು Smoke White ನಲ್ಲಿ ನೀಡಲಾಗುತ್ತದೆ. BMW ಇಂಡಿವಿಜುವಲ್ ಲೆದರ್ 'ಮೆರಿನೊ' ವಿಶೇಷವಾದ ವಿಷಯಗಳೊಂದಿಗೆ BMW i7 M70 xDrive ನಲ್ಲಿ ಐಚ್ಛಿಕವಾಗಿ ಲಭ್ಯವಿದೆ. ಲೆದರ್ ಮೆರಿನೊ - ಕ್ಯಾಶ್ಮೀರ್ ವೂಲ್ ಸಂಯೋಜನೆಯನ್ನು ಒಳಗೊಂಡಿದೆ.

ಕಾರು ಅನಿಯಮಿತ ಕಿ.ಮೀ ಸ್ಟ್ಯಾಂಡರ್ಡ್ ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ದುರಸ್ತಿ ಸೇರಿದಂತೆ ಯಾವುದೇ ಮೈಲೇಜ್ ಮಿತಿಯಿಲ್ಲದೆ ಮೂರನೇ ವರ್ಷದ ಕಾರ್ಯಾಚರಣೆಯಿಂದ ಗರಿಷ್ಠ ಐದನೇ ವರ್ಷಕ್ಕೆ ಖಾತರಿ ಪ್ರಯೋಜನಗಳನ್ನು ವಿಸ್ತರಿಸಬಹುದು. BMW i7 M70 xDrive ನಲ್ಲಿನ ಅಧಿಕ-ವೋಲ್ಟೇಜ್ ಬ್ಯಾಟರಿಯು ಎಂಟು ವರ್ಷಗಳವರೆಗೆ ಅಥವಾ 1,60,000 ಕಿ.ಮೀಗಳವರೆಗೆ ಮಾನ್ಯವಾಗಿರುವ ವಾರಂಟಿ ಇದೆ.

bmw-i7-m70-xdrive-bmw-740d-m-sport-launched-india

ಹೊಸ BMW 740d M ಸ್ಪೋರ್ಟ್ ವಿನ್ಯಾಸ: ಹೊಸ BMW 7 ಸಿರೀಸ್ ಹೊರಭಾಗದ ವಿನ್ಯಾಸವು ಉತ್ಪನ್ನದ ಗುಣಲಕ್ಷಣಗಳು ಮತ್ತು ಸಂಬಂಧಿತ ಆನ್-ಬೋರ್ಡ್ ಅನುಭವವನ್ನು ಪ್ರತಿಬಿಂಬಿಸುತ್ತವೆ. ಹೆಡ್‌ಲೈಟ್‌ಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೇಲ್ಭಾಗದಲ್ಲಿ ಡೇಟೈಮ್ ರನ್ನಿಂಗ್ ಲೈಟ್‌ಗಳು, BMW ಕ್ರಿಸ್ಟಲ್ ಹೆಡ್‌ಲೈಟ್‌ಗಳೊಂದಿಗೆ ಪೂರ್ಣಗೊಂಡಿವೆ. ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಗಮನಾರ್ಹವಾದ BMW ಐಕಾನಿಕ್ ಗ್ಲೋ ಕಿಡ್ನಿ ಗ್ರಿಲ್ ಆಕರ್ಷಕ ನೋಟವನ್ನು ನೀಡುತ್ತದೆ.

BMW i7 M70 xDrive ವಿನ್ಯಾಸ: ಇದು ಕೂಡ ಕಿಡ್ನಿ ಗ್ರಿಲ್ ಅನ್ನು ಒಳಗೊಂಡಿರುವ ಜೊತೆಗೆ M ಲೋಗೋವನ್ನು ಹೊಂದಿದೆ. ಕಣ್ಸೆಳೆಯುವ M ಸೈಡ್ ಸ್ಕರ್ಟ್‌ಗಳು, ಮುಂಭಾಗದ ಬದಿಯ ಪ್ಯಾನೆಲ್‌ಗಳ ಅಂಚುಗಳೊಂದಿಗೆ M ಲೋಗೋಗಳು, M ಹೈ-ಗ್ಲೋಸ್ ಶಾಡೋಲೈನ್ ಟ್ರಿಮ್, ಅವಳಿ ವಿನ್ಯಾಸದೊಂದಿಗೆ ಕಪ್ಪು M ಬಾಹ್ಯ ಮಿರರ್‌ಗಳು, ನೀಲಿ ಬಣ್ಣದ M ಸ್ಪೋರ್ಟ್ ಬ್ರೇಕ್‌ಗಳು ಕಾರಿಗೆ ಇನ್ನಷ್ಟು ಆಕರ್ಷಣೆಯನ್ನು ನೀಡಿವೆ.

bmw-i7-m70-xdrive-bmw-740d-m-sport-launched-india

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್ ಮಾತನಾಡಿ, "ಹೊಸ BMW 7 ಸರಣಿಯು ತನ್ನ ಹೊಸ ವಿನ್ಯಾಸ, ಶಕ್ತಿಯುತ ಡೈನಾಮಿಕ್ಸ್, ಸೌಕರ್ಯ ಮತ್ತು ಡಿಜಿಟಲ್ ಅನುಭವದೊಂದಿಗೆ ಉನ್ನತ-ಮಟ್ಟದ ವಿಭಾಗವನ್ನು ಬೆರಗುಗೊಳಿಸಿದೆ. BMW i7 M70 xDrive ಮತ್ತು BMW 740d M ಸ್ಪೋರ್ಟ್ ಸೇರ್ಪಡೆಯೊಂದಿಗೆ ಈಗ ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಮತ್ತು ಆಲ್-ಎಲೆಕ್ಟ್ರಿಕ್ ಕಾರ್ಯಕ್ಷಮತೆಯ ಮಾದರಿಯಾಗಿ ಲಭ್ಯವಿದೆ ಎಂದರು.

ಈಗ BMW 7 ಸರಣಿಯ ಶ್ರೇಣಿಯನ್ನು ಮುನ್ನಡೆಸುವ ಎಲೆಕ್ಟ್ರಿಕ್ ಕಾರ್ಯಕ್ಷಮತೆಯ ಮಾದರಿಯು ಹೆಚ್ಚು ವೈಯಕ್ತಿಕ ಸೆಳವು ಹೊಂದಿದ್ದು, ಅದು ಅತ್ಯುತ್ತಮ ಡೈನಾಮಿಕ್ ಕಾರ್ಯಕ್ಷಮತೆಯನ್ನು ಸಂಕೇತಿಸುತ್ತದೆ. ಮೊದಲ ನೋಟದಲ್ಲಿ ಅದರ ಶಕ್ತಿ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ. ಇದು ಎಲೆಕ್ಟ್ರಿಕ್ ಚಲನಶೀಲತೆ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ ಎಂದರು.

More from DriveSpark

Article Published On: Thursday, October 19, 2023, 16:05 [IST]
English summary
Bmw i7 m70 xdrive bmw 740d m sport launched india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+