ಹೊಚ್ಚ ಹೊಸ ಕಾರು ಒಂದೇ ವಾರಕ್ಕೆ ಹೀಗಾಗೋದಾ! ದೊಡ್ಡ ಬ್ರಾಂಡ್‌ಗಳ ಕಾರುಗಳೆ ಹೀಗಾದ್ರೆ ಹೇಗೆ?
ದೇಶದಲ್ಲಿ ಒಂದಷ್ಟು ಕಾರುಗಳ ಗುಣಮಟ್ಟದ ಕುರಿತು ಗ್ರಾಹಕರಿಗೆ ತೀರ್ವ ಅಸಮಾಧಾನವಿದೆ. ಎಷ್ಟೋ ಆಸೆಗಳ ನಡುವೆ ಕೊನೆಗೂ ಕನಸಿನ ಕಾರು ಮನೆ ಬಾಗಿಲಿಗೆ ಬಂದಿದೆ ಎಂದು ಖುಷಿ ಪಡುವುದೋ ಅಥವಾ ಖರೀದಿಸಿದ ವಾರಕ್ಕೆ ಕೈಕೊಟ್ಟಿದೆ ಎಂದು ದುಃಖ ಪಡುವುದೋ ತಿಳಿಯದ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಕಾರು ಮಾಲೀಕ ಅಸಮಾಧಾನ ಹೊರಹಾಕಿದ್ದಾನೆ.
ಕಾರು ಖರೀದಿಸಿದ ಕೇವಲ 2 ವಾರಗಳಲ್ಲಿ ಸ್ಸಪೆನ್ಷನ್ ಮುರಿದುಬಿದ್ದಿದೆ. ಈ ಕುರಿತು ಹೊಚ್ಚಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಮಾಲೀಕ ತನ್ನ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಈ ಕುರಿತು T-BHP ವರದಿ ಮಾಡಿದ್ದು, ಕಾರನ್ನು ಚಾಲನೆ ಮಾಡುವಾಗ ಸಸ್ಪೆನ್ಷನ್ ಹೇಗೆ ಮುರಿದಿದೆ ಎಂಬುದನ್ನು ಬಹಿರಂಗಪಡಿಸಲಾಗಿದೆ. ಆಗಸ್ಟ್ 8 ರಂದು ಮನೆಗೆ ಬಂದ ಕಾರು, ಆಗಸ್ಟ್ 16 ರಂದು ನಡುರಸ್ತೆಯಲ್ಲಿ ಕೈಕೊಟ್ಟಿದೆ.

ಆಗಸ್ಟ್ 16 ರಂದು ಮನೆಯವರೊಂದಿಗೆ ಶಾಪಿಂಗ್ ಮುಗಿಸಿ ಮನೆಗೆ ಬಂದು ಪಾರ್ಕಿಂಗ್ ಮಾಡುವ ವೇಳೆ ಪತ್ನಿ ಜೋರಾಗಿ ನಿಲ್ಲಿಸಿ ನಿಲ್ಲಿಸಿ ಕಾರಿನ ಟೈರ್ ಆಚೆ ಬಂದಿದೆ ಎಂದು ಕಿರುಚಿದ್ದಾರೆ. ಗಾಬರಿಗೊಂಡ ಕಾರು ಮಾಲೀಕ ಕೂಡಲೆ ಕೆಳಗಿಳಿದು ಕಾರಿನ ಚಕ್ರಗಳನ್ನು ಪರಿಶೀಲಿಸಿದ್ದು, ಸಸ್ಪೆನ್ಷನ್ ಮುರಿದಿರುವುದು ಗೊತ್ತಾಗಿದೆ. ಬಳಿಕ ವಾಹನವನ್ನು ಸ್ವಲ್ಪ ಮುಮದಕ್ಕೂ ಚಲಿಸಲು ಸಾಧ್ಯವಾಗಲಿಲ್ಲ.
ಅದು ರಾತ್ರಿ 8:30 ಆಗಿದ್ದರಿಂದ, ಆ ಸಮಯದಲ್ಲಿ ಡೀಲರ್‌ಶಿಪ್ ತಕ್ಷಣದ ಸಹಾಯ ನೀಡಲು ಸಾಧ್ಯವಾಗಲಿಲ್ಲ. ಸ್ಕಾರ್ಪಿಯೋ-ಎನ್ ಮಾಲೀಕನಾಗಿರುವುದು ಹೆಮ್ಮೆಯಾಗಿದೆ ಎಂದೆಲ್ಲಾ ಹೇಳಿಕೊಂಡು ಓಡಾಡಿದ್ದ ಮಾಲೀಕನಿಗೆ ಒಮ್ಮೆ ಆಕಾಶ ಮೈಮೇಲೆ ಬಿದ್ದಂತಾಗಿದೆ. ಹೊಚ್ಚಹೊಸ ಕಾರು ಹೀಗಾಗೋದನ್ನು ಭರಿಸಲಾಗದೇ ಮಾಲೀಕ ಕೋಪದಲ್ಲಿ ಚಕ್ರವನ್ನು ಹಿಂದಕ್ಕೆ ತಳ್ಳಿ ನಿಧಾನವಾಗಿ ಪಾರ್ಕಿಂಗ್ ಸ್ಥಳಕ್ಕೆ ಸೇರಿಸಿದ್ದಾರೆ.

ಮರುದಿನ ಮೆಕ್ಯಾನಿಕ್‌ಗೆ ವಿನಂತಿಸಲು ಡೀಲರ್‌ಶಿಪ್ ಅನ್ನು ಸಂಪರ್ಕಿಸಿದ್ದು, ಅದು 30 ಕಿಮೀ ದೂರದಲ್ಲಿರುವುದರಿಂದ ಕೊಂಡೊಯ್ಯಲು ನಿರಾಕರಿಸಿದ್ದು, ಅವರು ರಸ್ತೆಬದಿಯ (ರೋಡ್ ಸೈಡ್ ಅಸಿಸ್ಟ್) ಸಹಾಯವನ್ನು ನೀಡಲಾಯಿತು. ಮೆಕಾನಿಕ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿ ವಾಹನವನ್ನು ಸೇವಾ ಕೇಂದ್ರಕ್ಕೆ ಓಡಿಸಲು ಮಾಲೀಕನಿಗೆ ಅನುವು ಮಾಡಿಕೊಟ್ಟಿದ್ದಾನೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್ ಹೀಗಾಗಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಕಾರುಗಳಲ್ಲಿ ಖರೀದಿಸಿದ ಕೆಲವೇ ದಿನಗಳಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಬಳಿಕ ಸ್ಕಾರ್ಪಿಯೋ-ಎನ್ ಕುರಿತು ಇಂತಹ ಪ್ರಕರಣಗಳು ಕಡಿಮೆಯಾಗಿದ್ದವು. ಇದೀಗ ಮತ್ತೊಮ್ಮೆ ಸಮಸ್ಯ ಕಾಣಿಸಿಕೊಂಡಿದ್ದು, ಹೊಸ ಕಾರಿನ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಹೆಚ್ಚಿನ ವೇಗದಲ್ಲಿ ಸಂಭವಿಸಿದ್ದರೆ, ಕಂಡಿತ ಅಪಘಾತವಾಗುತ್ತಿತ್ತು ಎಂದು ಒತ್ತಿಹೇಳಿದ್ದಾರೆ.

ಮಹೀಂದ್ರಾ ಉಚಿತವಾಗಿ ಭಾಗಗಳನ್ನು ಬದಲಾಯಿಸಿತು: ಮಹೀಂದ್ರಾ ಡೀಲರ್‌ಶಿಪ್ ಸಂಪೂರ್ಣ ಮುಂಭಾಗದ ಸಸ್ಪೆನ್ಸಷನ್ (ಎಡ ಮತ್ತು ಬಲ ಭಾಗಗಳೆರಡೂ), ಬ್ರೇಕ್ ಹೋಸ್ ಮತ್ತು ಘಟನೆಯ ಕಾರಣದಿಂದ ಗೀರುಗಳನ್ನು ಅನುಭವಿಸಿದ ಮುಂಭಾಗದ ಚಕ್ರ ಸೇರಿದಂತೆ ಹಲವಾರು ಭಾಗಗಳನ್ನು ಉಚಿತವಾಗಿ ಬದಲಾಯಿಸಿದೆ. ಆದ್ರೆ ಏಕೆ ಹೀಗಾಗಿದೆ ಎಂಬುದರ ಕುರಿತು ಮಹೀಂದ್ರಾ ಇನ್ನೂ ವಿವರವಾದ ವರದಿಯನ್ನು ನೀಡಿಲ್ಲ.
ಈ ಸಸ್ಪೆನ್ಷನ್ ಸಮಸ್ಯೆ ಒಂದನ್ನು ಬಿಟ್ಟರೆ ಕಾರು ಉಳಿದೆಲ್ಲಾ ವಿಧಗಳಲ್ಲೂ ಉತ್ತಮವಾಗಿದೆ ಎಂದು ಮಾಲೀಕ ಹೇಳಿಕೊಂಡಿದ್ದಾನೆ. ಇದು ಮಹೀಂದ್ರಾ ಕಡೆಯಿಂದ ಗುಣಮಟ್ಟ ನಿಯಂತ್ರಣ ಸಮಸ್ಯೆಯಾಗಿರಬಹುದು ಎಂದು ಸೂಚಿಸುತ್ತಿದೆ. ಸಮಸ್ಯೆ ಕಾರಣವನ್ನು ಡೀಲರ್‌ಶಿಪ್ ಒದಗಿಸುವ ನಿರೀಕ್ಷೆಯಿದೆ. ಆ ಬಳಿಕವಷ್ಟೇ ಹೆಚ್ಚಿನ ವಿವರಗಳು ಹೊರಬರಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications